ಪಾವಗಡ: ಇಂದಿನ ಜಾಗತಿಕರು ಹಾಗೂ ಉದಾರಿ ಕರಣದ ನೀತಿಯಿಂದ ಜೈನ ಧರ್ಮದಲ್ಲಿ ಸಂಸ್ಕೃತಿ, ಸಂಸ್ಕಾರ ಪರಂಪರೆಗಳು ,ನೀತಿ, ಸಿದ್ಧಾಂತಗಳು ಅವನತಿಯತ್ತ ಸಾಗಿದ್ದು, ಇದನ್ನು ಉಳಿಸಿ ಬೆಳೆಸಲು ಪೋಷಕರು ತಮ್ಮ ಮಕ್ಕಳಲ್ಲಿ ಧಾರ್ಮಿಕ ಭಾವನೆ ಮೂಡಿಸುವುದು ಅತಿ ಅಗತ್ಯವಾಗಿದೆ ಎಂದು ಶ್ರೀ ಕ್ಷೇತ್ರ ಆರತಿಪುರ ದಿಗಂಬರ ಜೈನಮಠದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಸಿದ್ಧಾಂತ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರಿಂದು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಿಡಿಗಲ್ ದುರ್ಗದಲ್ಲಿ ಶ್ರೀ ಕಷ್ಟಹರಣ ಪಾರ್ಶ್ವನಾಥ ಜಿನಮಂದಿರದ ವಾರ್ಷಿಕ ಪೂಜಾ ಮಹೋತ್ಸವದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೈನ ಧರ್ಮ ಪುರಾತನವಾದದ್ದು ಸಂಸ್ಕೃತಿ, ಸಂಸ್ಕಾರ ಶಾಂತಿ, ಆಹಿಂಸೆ ಹೊಂದಿದ ಧರ್ಮವಾಗಿದ್ದು ಮಕ್ಕಳಿಗೆ ಮೊದಲು ಸಂಸ್ಕಾರ, ಸಂಸ್ಕೃತಿ ನೀಡುವುದು ಪೋಷಕರ ಕರ್ತವ್ಯವಾಗಿದೆ .ಮೋಕ್ಷ, ಧರ್ಮ, ಕಾರ್ಯಗಳಲ್ಲಿ ಗಂಡಸರು ಮಹತ್ವದ ಪಾತ್ರ ವಹಿಸಿದ್ದು, ಹೆಣ್ಣು ಮಕ್ಕಳು ಕೌಟುಂಬಿಕ ವಿಚಾರಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದರು.
ಕಳೆದ 12ನೇ ಶತಮಾನದಿಂದ ಈ ಬಸದಿಯನ್ನು ಸ್ಥಳೀಯರು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ ಈ ಭಾಗದ ಜೈನಧರ್ಮೀಯರ ಕಾರ್ಯ ಶ್ಲಾಘನೀಯ ಎಂದರು.
ಕಂಬದಹಳ್ಳಿ ಜೈನಮಠದ ಕ್ಷುಲ್ಲಕ ಶ್ರೀ ಆನಂದ ಕೀರ್ತಿ ಭಟ್ಟಾರಕ ಶ್ರೀಗಳು ಪಾವನ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಯ ಸದಸ್ಯ ಎಚ್.ಪಿ. ಸುಮತಿ ಕುಮಾರ್ ಮಾತನಾಡಿ, ಶ್ರೀ ಶಾಂತಿ ಸಾಗರ ಮಹಾರಾಜರು, ಜೈನ ಧರ್ಮ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿಸಿದರು.
ನಿಡಗಲ್ ಶ್ರೀ ಕಷ್ಟ ಹರಣಾ ಪಾರ್ಶ್ವನಾಥ ಸ್ವಾಮಿ ಜಿನಮಂದಿರ ಟ್ರಸ್ಟ್ ಅಧ್ಯಕ್ಷ ಆರ್.ಬಿ.ಜಯಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕಷ್ಟ ಹರನ ಪಾರ್ಶ್ವನಾಥ ಸ್ವಾಮಿ ಜೀರ್ಣೋದ್ಧಾರ ಟ್ರಸ್ಟ್ ಗೌರವಾಧ್ಯಕ್ಷ ಪಿ.ಸುಂದರ ರಾಜಯ್ಯ, ಪಿ.ಆರಿಹಂತ ಜೈನ್, ಆರ್. ವೈ. ಅಜಿತ್ ಕುಮಾರ್, ಪಿ.ಬಿ.ರತ್ನಾಕರ, ಆರ್.ಪಿ.ಅಂಕಿತ ಜೈನ್, ಡಾ.ಜಿನೇಶ ಬಾಬು, ಆರ್.ಪಿ .ನಾಗರಾಜ್, ವಸಂತ್ ಕುಮಾರ್, ಪಿ.ಎಲ್. ವೃಷಭ ರಾಜ್ ಜೈನ್, ಆರ್.ಎಸ್., ಕುಬೇರಪ್ಪ, ಆರ್.ಎಸ್.ಧರಣಿಂದ್ರಪ್ಪ, ಪ್ರಶಾಂತ್ ಕುಮಾರ್ , ಆರ್,ಡಿ. ಪ್ರವೀಣ್ ಚಂದ್ರ ಪಿ.ಎನ್ .ತರುಣ್ ಜೈನ್, ಆರ್. ವೈ.ಜಿನೇಶ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿಡಗಲ್, ಪಾವಗಡ, ರಂಗಸಮುದ್ರ, ವೈ.ಎನ್. ಹೊಸಕೋಟೆ, ಚಳ್ಳಕೆರೆ ,ಅಮರಾಪುರ, ಬೆಂಗಳೂರು ಸೇರಿದಂತೆ ಕರ್ನಾಟಕ ಹಾಗೂ ಆಂಧ್ರಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ — ಶ್ರಾವಕಿಯರು ಭಾಗವಹಿಸಿದ್ದರು. ಎನ್.ಜೆ.ಸತ್ಯೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಚಳ್ಳಕೆರೆ ಗೌರಿಪುರ ಡಿ .ಪಾಶ್ವನಾಥ್ ವಂದಿಸಿದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4