ಢಾಕಾ: ಭಾರತಕ್ಕೆ ಪಲಾಯನ ಮಾಡಿರುವ ಶೇಖ್ ಹಸೀನಾ ಮಾಡಿದ ಭಾಷಣದಿಂದ ಆಕ್ರೋಶಗೊಂಡ ವಿರೋಧಿ ಬಣ ರಾಜಧಾನಿ ಢಾಕಾದಲ್ಲಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದೆ.
ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಸ್ಮಾರಕ ಮತ್ತು ಅವರ ನಿವಾಸವನ್ನ ಧ್ವಂಸಗೊಳಿಸಲಾಗಿದೆ. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಕ್ರೇನ್ ಮೂಲಕ ಮನೆ ಧ್ವಂಸಗೊಳಿಸಿದ್ದಾರೆ.
ನಾವು ಗಳಿಸಿದ ಸ್ವಾತಂತ್ರ‍್ಯವನ್ನು, ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬುಲ್ಡೋಜರ್ ಮೂಲಕ ನಾಶಗಳಿಸಲು ಸಾಧ್ಯವಿಲ್ಲವೆಂದು ಶೇಖ್ ಹಸೀನಾ ಭಾರತದಿಂದ ಆನ್ ಲೈನ್ ಮೂಲಕ ಮಾಡಿದ ಭಾಷಣಕ್ಕೆ ಕೆರಳಿದ ಪ್ರತಿಭಟನಾಕಾರರು ಅವಾಮಿ ಲೀಗ್ ಪಕ್ಷ ನಿಷೇಧಕ್ಕೆ ಆಗ್ರಹಿಸಿ ದಂಗೆ ಎಬ್ಬಿಸಿದ್ದಾರೆ. ಇದು ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಅಶಾಂತಿ ಹರಡುವ ಸಾಧ್ಯತೆ ಇದೆ.
ಶೇಖ್ ಹಸೀನಾ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಆನ್ಲೈನ್ ಮೂಲಕ ಭಾಷಣ ಮಾಡಿದರು. ನನ್ನ ತಂದೆ ನಾವು ನಿರ್ಮಾಣ ಕಟ್ಟಡಗಳನ್ನು ಕೆಡವಬಹುದು, ಆದ್ರೆ ಇತಿಹಾಸವನ್ನು ಕೆಡವಲು ಸಾಧ್ಯವಿಲ್ಲ. ಇಂದಲ್ಲ ನಾಳೆ ಅದು ತನ್ನ ಸೇಡು ತೀರಿಸಿಕೊಳ್ಳುತ್ತೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx