ವಾಷಿಂಗ್ಟನ್: ಇಸ್ರೇಲಿ ಪುರುಷ ಒತ್ತೆಯಾಳುಗಳ ಮೇಲೆ ಅತ್ಯಾಚಾರ ಎಸಗಿದ ತನ್ನ ಸಂಘಟನೆಯಲ್ಲಿದ್ದ ಸಲಿಂಗಿ ಸದಸ್ಯರನ್ನು ಹಮಾಸ್ ಚಿತ್ರಹಿಂಸೆ ನೀಡಿ ಗಲ್ಲುಶಿಕ್ಷೆ ನೀಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಹಮಾಸ್ ಸಲಿಂಗ ಸಂಬಂಧಗಳಿಗೆ ಮಾನ್ಯತೆ ನೀಡುವುದಿಲ್ಲ, ಇಂತಹ ಅನೈಸರ್ಗಿಕ ಸಂಬಂಧ ಹೊಂದಿರುವ ಸಂಘಟನೆಯ ಸದಸ್ಯರ ಶೋಧದಲ್ಲಿ ನಿರತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನ್ಯೂಯಾರ್ಕ್ ಪೋಸ್ಟ್ ಈ ವರದಿಯನ್ನು ಮಾಡಿದ್ದು, ಅಕ್ಟೋಬರ್ 7, 2023ರಂದು ಹಮಾಸ್ ನಡೆಸಿದ್ದ ದಾಳಿಯಲ್ಲಿ ಕನಿಷ್ಠ 1,200 ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ನೂರಾರು ಇಸ್ರೇಲಿ ನಾಗರಿಕರನ್ನು ಹಮಾಸ್ ಒತ್ತೆಯಾಳುಗಳನ್ನಾಗಿರಿಸಿಕೊಂಡಿತ್ತು. ಈ ಪೈಕಿ ಪುರುಷ ಒತ್ತೆಯಾಳುಗಳ ಮೇಲೆ ಹಮಾಸ್ ನ ಸಲಿಂಗಿ ಸದಸ್ಯರು ಅತ್ಯಾಚಾರ ನಡೆಸಿದ್ದರು ಎನ್ನುವುದು ಹಮಾಸ್ ಸಂಘಟನೆಗಳ ಒಳಗಿನ ರಹಸ್ಯ ದಾಖಲೆಗಳಿಂದ ಬಯಲಾಗಿವೆ ಎಂದು ವರದಿ ಹೇಳಿದೆ.
ಸುಮಾರು 94 ಸಲಿಂಗಿ ಸದಸ್ಯರು ಇಸ್ರೇಲಿ ಪುರುಷ ಒತ್ತೆಯಾಳುಗಳ ಮೇಲೆ ಅತ್ಯಾಚಾರ ಮಾಡಿದ್ದು, ಅವರೆಲ್ಲರನ್ನೂ ಹಮಾಸ್ ಚಿತ್ರಹಿಂಸೆ ನೀಡಿ ಗಲ್ಲಿಗೇರಿಸಿದೆ ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಹಿತಿ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4