ತುಮಕೂರು: ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ ಜೋಳಿಗೆ ಹಿಡಿದ ಸಿದ್ದಗಂಗಾ ಶ್ರೀಗಳು ವಾಡಿಕೆಯಂತೆ ಭಕ್ತರ ಬಳಿ ಭಿಕ್ಷಾಟನೆ ನಡೆಸಿದರು.
ಪ್ರತಿವರ್ಷವೂ ವಾಡಿಕೆಯಂತೆ ಜಾತ್ರಾ ಮಹೋತ್ಸವದ ವೇಳೆ ಶ್ರೀಗಳು. ಭಿಕ್ಷಾಟನೆ ನಡೆಸುತ್ತಾರೆ. ಅದೇ ರೀತಿ ಈ ಬಾರಿಯು ಸಿದ್ದಗಂಗಾ ಮಠದ ಶ್ರೀಗಳು ಭಿಕ್ಷಾಟನೆ ನಡೆಸಿದರು.
ಜೋಳಿಗೆ ಹಿಡಿದ ಶ್ರೀಗಳಿಗೆ ಭಕ್ತರು, ವರ್ತಕರಿಂದ ದವಸ ಧಾನ್ಯಗಳು ಕಾಣಿಕೆ ರೂಪದಲ್ಲಿ ಸಲ್ಲಿಕೆ ಮಾಡಲಾಯಿತು. ಅಕ್ಕಿ, ರಾಗಿ, ತೊಗರಿ ಬೆಳೆ, ಬೆಲ್ಲ ಕಾಣಿಕೆ ಕೊಟ್ಟು ಭಕ್ತರು ಕೃತಾರ್ಥರಾದರು.
ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗಸ್ವಾಮಿಜಿ ಹಾಗೂ ಕಿರಿಯ ಸ್ವಾಮಿಜಿ ಶಿವಸಿದ್ದೇಶ್ ರಿಂದ ಭಿಕ್ಷಾಟನೆ ನಡೆಯಿತು. ತುಮಕೂರು ನಗರದ ಮಂಡಿಪೇಟೆ, ಅಶೋಕ್ ರಸ್ತೆ, ಎಪಿಎಂಸಿ ಯಾರ್ಡ್ ಗಳಲ್ಲಿ ಭಿಕ್ಷಾಟನೆ ನಡೆಸಲಾಯಿತು.
ಇದೇ ಫೆ.20ರಿಂದ ಮಾರ್ಚ್ 1 ರವರೆಗೆ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx