ಕೊರಟಗೆರೆ: ಇತ್ತೀಚಿನ ದಿನಗಳಲ್ಲಿ ಬ್ಯಾಂಕ್, ಸೈಬರ್ ಕಳ್ಳತನ ಹೆಚ್ಚು ಆಗುತ್ತಿದೆ. ಈ ಸೈಬರ್ ಆನ್ಲೈನ್ ಕಳ್ಳರ ಕಾಟದಿಂದ ಪಾರಾಗಲು ಬ್ಯಾಂಕ್ ಗ್ರಾಹಕರಿಗೆ ಅರಿವು ಮೂಡಿಸುವ ಸಲುವಾಗಿ ಬ್ಯಾಂಕುಗಳಿಗೆ ಜನಸ್ನೇಹಿ ಪೊಲೀಸ್ ಚೇತನ್ ಕುಮಾರ್ ಭೇಟಿ ನೀಡಿದರು.
ಬ್ಯಾಂಕ್ ಗಳಿಗೆ ಧಿಡೀರ್ ಭೇಟಿ ಸಬ್ ಇನ್ಸ್ಪೆಕ್ಟರ್ ಚೇತನ್ ಅರಿವು ಮೂಡಿಸಿದರು. ಅಪರಿಚಿತ ವ್ಯಕ್ತಿಗಳಿಗೆ ಓಟಿಪಿ ನಂಬರ್ ನೀಡಬಾರದು, ಎಟಿಎಂ ಕಾರ್ಡ್ ನೀಡಬಾರದು ಅನುಮಾನಾಸ್ಪದ ವ್ಯಕ್ತಿಗಳು ಕಂಡರೇ ಕೂಡಲೇ 112 ನಂಬರ್ ಗೇ ಕರೆ ಮಾಡಲು ಗ್ರಾಹಕರಿಗೆ ಅವರು ಮಾಹಿತಿ ನೀಡಿದರು.
ಎಟಿಎಂನಲ್ಲಿ ಹಣ ತೆಗೆದುಕೊಳ್ಳುವಾಗ ಏನಾದರೂ ಅಡಚಣೆ ಆದರೆ ಕೂಡಲೆ ಬ್ಯಾಂಕ್ ಮ್ಯಾನೇಜರ್ ಗೆ ತಿಳಿಸಿ. ಅಪರಿಚಿತರಿಗೆ ನಿಮ್ಮ ಎಟಿಎಂ ಕಾರ್ಡ್ ನೀಡಬಾರದು ಎಂದು ಗ್ರಾಹಕರಿಗೆ ಅರಿವು ಮೂಡಿಸಿದರು.
ಇನ್ನು ಎಟಿಎಂ ಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೆ ಇದ್ದರೆ ಅಂತಹ ಎಟಿಎಂಗಳು ರಾತ್ರಿ ಸಮಯದಲ್ಲಿ ಸರಿಯಾದ ಸಮಯಕ್ಕೆ ಮುಚ್ಚಲು ಬ್ಯಾಂಕ್ ಮ್ಯಾನೇಜರ್ ಗಳಿಗೆ ತಿಳಿಸಿದರು.
ಇನ್ನು ಯಾರಾದರೂ ಬ್ಯಾಂಕ್ ಒಳಗೆ ಹೊರಗೆ ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ ಕೂಡಲೆ ಪೊಲೀಸ್ ಠಾಣೆಗೆ ಕರೆ ಮಾಡಿ. ಎಟಿಎಂನಲ್ಲಿ ಏನಾದರೂ ರಾಬರಿ ಆಗುವ ಸಮಯದಲ್ಲಿ ಸೂಚನೆ ನೀಡುತ್ತದೆ. ಆ ಸೂಚನೆ ನಮಗೂ ಬರುವಂತೆ ನನ್ನ ದೂರವಾಣಿ ಸಂಖ್ಯೆ ಆಡ್ ಮಾಡುವಂತೆ ತಿಳಿಸಿದರು.
ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಹಾಗೂ ಪೋಲಿಸ್ ಇಲಾಖೆಯ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4