ತುಮಕೂರು: ನಮಗೆ ವಿಶ್ವವಿದ್ಯಾಲಯಗಳ ಪದವಿಗಳು ಬೇಕಿಲ್ಲ, ಗುರುಪರಂಪರೆಗಳು ಬೇಕು, ನಮಗೆ ಬೇಕಿರುವುದು ಡಿಗ್ರಿಗಳಲ್ಲ, ಜನ ಸಮುದಾಯದ ಮನಸ್ಸು ಶಾಂತಿ, ನೆಮ್ಮದಿ ಸಮಾನತೆ ಸಹಬಾಳ್ವೆಯಿಂದ ಬಾಳುವಂತ ಮನಸ್ಸು ಬದಲಾಗಬೇಕಾದದ್ದು ಅನಿವಾರ್ಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಳ್ಳಾವಿ ಕಾರದ ಮಠದ ಕರ್ತೃ ಗದ್ದುಗೆ ಲೋಕಾರ್ಪಣೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರು ಪರಂಪರೆ ನಮ್ಮದು, ಆ ಗುರುಗಳ ಮಾತು ನಾವೆಲ್ಲ ಕೇಳಬೇಕು, ಅದರಂತೆ ನಾವು ನಡೆದು ಕೊಳ್ಳ ಬೇಕು ಎಂದರು.
ಭಗವಾನ್ ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ವಿಶ್ವ ಗುರು ಬಸವಣ್ಣರನ್ನು ಸ್ಮರಿಸಿದ ಪರಮೇಶ್ವರ, ಸುಮಾರು 2,500 ವರ್ಷಗಳ ಹಿಂದೆ ಈ ದೇಶದಲ್ಲಿ ಭಗವಾನ್ ಬುದ್ಧ ಹುಟ್ಟುತ್ತಾನೆ. ಸಮಾಜವನ್ನು ಉದ್ದಾರಮಾಡಲು ಜನಿಸಿದವರು ಬುದ್ಧ. ರಾಜನಾಗಿದ್ರು ಹೆಂಡತಿ, ಮಗು, ಆಸ್ತಿ ಎಲ್ಲವನ್ನು ತ್ಯಜಿಸಿ ಸಿದ್ದಾರ್ಥ ಬುದ್ಧನಾದ. ಆಸೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿದವನು ಬುದ್ಧ. ಇನ್ನು 850 ವರ್ಷಗಳ ಹಿಂದೆ ಹುಟ್ಟಿದ ಬಸವಣ್ಣ ಬ್ರಾಹ್ಮಣತ್ವವನ್ನು ತ್ಯಜಿಸಿ ತನ್ನದೇ ತತ್ವಗಳನ್ನು ಸಮಾಜಕ್ಕೆ ಸಾರಿದರು. ಲಂಡನ್ ನ ಥೇಮ್ಸ್ ನದಿ ದಡದಲ್ಲಿ ಅಣ್ಣ ಬಸವಣ್ಣ ನವರ ಪ್ರತಿಮೆ ಇಡಲಾಗಿದೆ. ನಾನು ನಿರಾಜ್ ಪಾಟೀಲ್ ಇಬ್ಬರು ಹೋಗಿ ಜಾಗ ನೋಡಿ ಬಂದಿದೀವಿ ಎಂದರು.
ಯಡಿಯೂರಪ್ಪನವರು 2 ಕೋಟಿ ಕೊಟ್ಟಿದ್ರು, ನಾನು 50 ಲಕ್ಷ ಕೊಟ್ಟಿದ್ದೇನೆ. ಲಂಡನ್ ನಲ್ಲಿ ಬಸವಣ್ಣನವರ ತತ್ವ ಸಾರಲು ಅನುದಾನ ಕೊಟ್ಟಿದ್ದೇವೆ. ವಿಶ್ವದಲ್ಲಿ ಮೊದಲ ಪಾರ್ಲಿಮೆಂಟ್ ಕೂಡಲ ಸಂಗಮದಲ್ಲಿ ನಡೆಯಿತು. ಸಂವಿಧಾನದ ಮೊದಲ ಪುಟದಲ್ಲಿ ಅಂಬೇಡ್ಕರ್ ಅವ್ರು ಬಸವಣ್ಣ ನವರ ಆಶಯವನ್ನು ಸರಿದ್ದಾರೆ. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. ನಮಗೆ ಬೇಕಾಗಿರೋದು ಡಿಗ್ರಿಗಳಲ್ಲ, ಆ ಸಮಾನತೆ, ಬ್ರಾತೃತ್ವದ ಮನಸ್ಥಿತಿ ಬೇಕಾಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4