ತುಮಕೂರು : ತುಮಕೂರಿನಿಂದ ತ್ರಿವಿಧ ದಾಸೋಹದ ಮಹಿಮೆಯನ್ನು ಜಗತ್ತಿಗೆ ತಿಳಿಸಿದವರು ಶಿವಕುಮಾರ ಸ್ವಾಮೀಜಿಗಳು, ಯುವಕರಲ್ಲಿ ಮನವಿ ಮಾಡ್ತೀನಿ ಮಠ ಮಾನ್ಯಗಳ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬೆಳ್ಳಾವಿ ಕಾರದ ಮಠದಲ್ಲಿ ಮಾತನಾಡಿದ ಅವರು, ಕಂಪ್ಯೂಟರ್ ಮೊಬೈಲ್ ಭರಾಟೆಯಲ್ಲಿ ನಮ್ಮ ಪರಂಪರೆ ಸಂಸ್ಕೃತಿಯನ್ನು ಮರೆತಿದ್ದೇವೆ. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಗುರುಪರಂಪರೆ, ಆಚಾರ ವಿಚಾರ ಸಂಸ್ಕಾರ ಸಂಸ್ಕೃತಿಯನ್ನ ಮರೆತಿದ್ದೇವೆ. ಹೆತ್ತ ತಂದೆತಾಯಿಗಳನ್ನ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇಂದಿನ ಯುವ ಪೀಳಿಗೆ ಅಂತಹ ಸಂಸ್ಕೃತಿಗೆ ಮಾರು ಹೋಗಿರುವುದು ದುರಂತ ಎಂದರು.
ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟಿದ್ದೇವೆ, ಆದರೆ ಸಂಸ್ಕಾರ ಕೊಡುವುದರಲ್ಲಿ ಎಡವಿದ್ದೇವೆ. ಈಗಲೂ ಕಾಲಮಿಂಚಿಲ್ಲ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲು, ತಂದೆ ತಾಯಿಯಂದಿರು ಗಮನ ಹರಿಸಬೇಕು ಬೇಕು ಎಂದು ಅವರು ಕರೆ ನೀಡಿದರು.
ನರೇಂದ್ರ ಮೋದಿಜಿಯವರು ದೇಶದ ಅಭಿವೃದ್ಧಿ ಕನಸು ಕಾಣುತ್ತ, ನಮ್ಮ ದೇಶದ ಯುವಜನತೆ ಮೇಲೆ ವಿಶ್ವಾಸ ವಿಟ್ಟಿದ್ದಾರೆ. ಅದಕ್ಕಾಗಿ ಅವ್ರುಗಳು ರಾತ್ರಿ ಹಗಲು ಶ್ರಮಿಸುತ್ತಿದ್ದಾರೆ. ನಮ್ಮದೇಶಕ್ಕೆ ಹಿಂದೆ ಅಮೇರಿಕ ಸೇರಿದಂತೆ ಮುಂದುವರಿದೆ ದೇಶಗಳು ಕವಡೇಕಾಸಿನ ಕಿಮ್ಮತ್ತು ಕೊಡ್ತಿರಲಿಲ್ಲ, ಬೇರೆ ದೇಶಗಳಲ್ಲಿ ಭಾರತೀಯರನ್ನ ಭಿಕ್ಷುಕರಂತೆ ಕಾಣುತ್ತಿದ್ದರು. ಇಂದು ಭಾರತೀಯರು ಯಾವುದೇ ದೇಶಕ್ಕೆ ಹೋದರು ತಲೆ ಯೆತ್ತಿ ನಡೆಯುವಂತೆ ಆಗಿದೆ. ವಿದೇಶಗಳಲ್ಲಿ ಪ್ರತಿಯೊಬ್ಬರಿಗೆ ಗೌರವ ಸಿಗುತ್ತಿದೆ ಎಂದರು.
ಇದೀಗ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಆಗಿದೆ. ಮೊದಲು 19 ನೇ ಶತಮಾನವನ್ನು ರಷ್ಯಾದ ಶತಮಾನ, 20ನೇ ಶತಮಾನವನ್ನು ಅಮೇರಿಕಾದ ಶತಮಾನ ಅಂತಿದ್ರು. ಇದೀಗ 21ನೇ ಶತಮಾನವನ್ನು ಭಾರತದ ಶತಮಾನ ಎನ್ನುವಂತಾಗಿದೆ. ರಾಜಕಾರಣಿಗಳಿಂದ ಸಮಾಜ ಬಯಸುತ್ತಿರುವುದು ಸರಿದಾರಿಗೆ ಕೊಂಡೊಯ್ಯ ಬೇಕು ಅಂತ. ಹಾಗಾಗಿ ಸಮಾಜವನ್ನ ಸರಿದಾರಿಗೆ ತರುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಒಂದಾಗಬೇಕು ಎಂದರು.
ಯಡಿಯೂರಪ್ಪಗೆ ತೊಂದ್ರೆಯಾದಾಗಲೆಲ್ಲ ಈ ನಾಡಿನ ಮಠ ಮಾನ್ಯ ಗಳು ಅವರಿಗೆ ಜೊತೆಯಾಗಿ ನಿಂತಿವೆ. ನಾನು ರಾಜಕಾರಣದಲ್ಲಿ ಈಗ ತಾನೇ ಬೆಳೆಯುತ್ತಿರುವವನು, ಎಡವುದು ಸಹಜ ಎಂದು ವೇದಿಕೆ ಮೇಲಿದ್ದ ಹರಗುರು ಚರಮೂರ್ತಿಗಳಿಗೆ ವಿಜಯೇಂದ್ರ ಕೈಮುಗಿದರು.
ನನ್ನ ಗುರಿ ಸ್ಪಷ್ಟ ವಾಗಿದೆ. ನನ್ನ ರಾಜಕೀಯ ಗುರು ಯಾರಪ್ಪ ಅಂದ್ರೆ ಯಡಿಯೂರಪ್ಪ, ಮೊದಲ ಬಾರಿ ಶಿಕಾರಿಪುರದ ಜನರ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ನಾನು ಕಳೆದ ಒಂದು ವರ್ಷದಲ್ಲಿ ಅನೇಕ ಪಾಠಗಳನ್ನು ಕಲಿತಿದ್ದೇನೆ. ನಾನು ರಾಜಕಾರಣದಲ್ಲಿ ಬೆಳೆಯ ಬೇಕಾದವನು. ಯಡಿಯೂರಪ್ಪ ನವರಿಂದ ರಾಜಕೀಯ ಕಲಿತವನು, ಅವರೇ ನನ್ನ ರಾಜಕೀಯ ಗುರು. ಯಡಿಯೂರಪ್ಪ ನವರಿಗೆ ಏನೇ ಸಾವಾಲುಗಳು ಬಂದ್ರು ಅವರು ತೋರಿಸಿ ಹೋಗಲಿಲ್ಲ , ನಾನು ಅವರಿಂದ ರಾಜಕೀಯ ಕಲಿತವನು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4