ತುಮಕೂರು: ಡ್ರಗ್ಸ್ ಬಳಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಸುಮಾರು 200 ಮಂದಿ ವಿದೇಶಿಗರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕತರೊಂದಿಗೆ ಮಾತನಾಡಿ, ಅನೇಕ ದಿನಗಳಿಂದ ಕೋಟ್ಯಾಂತರ ರೂ. ಮೌಲ್ಯದ ಕೆ.ಜಿ. ಗಟ್ಟಲೆ ಈಗಾಗಲೇ ಡ್ರಗ್ಸ್ ಅನ್ನು ವಶಕ್ಕೆ ಪಡೆದು ಸುಟ್ಟು ಹಾಕಿದ್ದೇವೆ. ಬಹಳ ಕಡೆ ಶಿಕ್ಷೆ ಪ್ರಕಟವಾಗಿದೆ ಎಂದರು.
ಬೆಂಗಳೂರು ಇರಬಹುದು ಅಥವಾ ರಾಜ್ಯದ ಯಾವ್ದೆ ಭಾಗದಲ್ಲಿಯಾದ್ರೂ ವೀಲಿಂಗ್ ಮಾಡುವ ಬಗ್ಗೆ ಪೊಲೀಸ್ ಇಲಾಖೆ ಕಠಿಣವಾಗಿ ಕ್ರಮ ತೆಗೆದುಕೊಳ್ಳಲಿದ್ದೇವೆ. ರಾಜ್ಯದಲ್ಲಿ ಡ್ರಗ್ಸ್ ಬಳಕೆ ಮತ್ತು ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಡಿಕ್ಲೇರ್ ಮಾಡಿದ್ದೇವೆ ಎಂದರು.
ಅಲ್ಲದೆ ಸಂಬಂಧಪಟ್ಟ ಎಂಬೆಸ್ಸಿಗಳಿಗೆ ಕೂಡ ಮಾಹಿತಿ ನೀಡಲಾಗಿದೆ. ಅನೇಕ ಮಂದಿ ವಿದೇಶಿಗರು ಸ್ಟೂಡೆಂಟ್ ವೀಸಾ ಪಡೆದು ಇಲ್ಲಿಗೆ ಬರುತ್ತಿದ್ದಾರೆ. ಅಲ್ಲದೆ ವೀಸಾ ಅವಧಿ ಮುಗಿದರೂ ಇಲ್ಲಿಯೇ ಇರುತ್ತಾರೆ. ಅವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4