ತುಮಕೂರು: ಪ್ರವಾಸೋದ್ಯಮ ಇಲಾಖೆಯು ಬೆಂಗಳೂರಿನ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಫೆಬ್ರವರಿ 26 ರಿಂದ 28ರವರೆಗೆ KITE-2025 (Karnataka International Travel Expo — ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು, ವ್ಯಾಪಾರದ ಅವಕಾಶಗಳನ್ನು ಆಕರ್ಷಿಸಲು ಹಾಗೂ ಕರ್ನಾಟಕವನ್ನು ಪ್ರಮುಖ ಜಾಗತಿಕ ಪ್ರವಾಸಿ ತಾಣವಾಗಿ ಸ್ಥಾಪಿಸಲು ಈ ಕಾರ್ಯಕ್ರಮ ಪ್ರೇರೇಪಿತವಾಗಿದೆ.
ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಪ್ರವಾಸೋದ್ಯಮ ವಲಯದ ಪಾಲುದಾರರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ, ಸಾಂಸ್ಕೃತಿಕ ಪರಂಪರೆ, ಭೋಜನಶಾಸ್ತ್ರ, ಮತ್ತಿತರೆ ಪ್ರವಾಸೋದ್ಯಮ ಉತ್ಪನ್ನಗಳನ್ನು ದೇಶೀಯ ಹಾಗೂ ಜಾಗತಿಕ ಟೂರ್ ಅಂಡ್ ಟ್ರಾವೆಲ್ ಸಮುದಾಯಕ್ಕೆ ಪರಿಚಯಿಸಲು ಮಳಿಗೆಗಳನ್ನು ಪಡೆದು ಭಾಗವಹಿಸಬಹುದಾಗಿದೆ.
ಜಿಲ್ಲೆಯ ರೆಸಾರ್ಟ್ಗಳು, ಪ್ರಯಾಣ ನಿರ್ವಾಹಕರು(Tours & Travel Operators), ಹೋಟೆಲ್ ಉದ್ಯಮಿಗಳು, ಹೋಂ ಸ್ಟೇ ಮಾಲೀಕರು, ಮತ್ತಿತರೆ ಉದ್ಯಮ ಪ್ರತಿನಿಧಿಗಳು, ಶ್ರೀಮಂತ ಮತ್ತು ವೈವಿಧ್ಯಮಯ ಪ್ರವಾಸೋದ್ಯಮ ಕೊಡುಗೆಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ (KITE) 2025 ವೆಬ್ ಸೈಟ್: https://www.karnatakatravelexpo.org ಅಥವಾ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ರೆಡ್ ಕ್ರಾಸ್ ಭವನ, ನಂ. 232, ಅಶೋಕ ರಸ್ತೆ, ತುಮಕೂರು ಅಥವಾ ದೂ.ವಾ.ಸಂ.0816-2006349ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ವರಿ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4