ಪಾವಗಡ: ಡಾ.ವಿರೇಂದ್ರ ಹೆಗ್ಗಡೆಯವರು ರಾಜ್ಯಾದಂತಹ ಶ್ರೀ ಕ್ಷೇತ್ರಧಮ೯ಸ್ಥಳ ಗ್ರಾಮಾಭಿವೃದ್ದಿಯೋಜನೆ ಮೂಲಕ 60 ಲಕ್ಷಕ್ಕೂ ಹೆಚ್ಚು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಬ್ಯಾಂಕ್ ಮೂಲಕ ಸಂಘಗಳಿಗೆ ನೇರವಾಗಿ ಕೋಟ್ಯಾಂತರ ಮೊತ್ತಸಾಲ ಸಿಗುವಂತೆ ಬ್ಯಾಂಕಿನ ಪ್ರತಿನಿಧಿಗಳಾಗಿ ಯೋಜನೆಯ 45,000 ಕಾಯ೯ಕತ೯ರು ಸಂಘಗಳ ಸದಸ್ಯರಿಗೆ ಮಾಹಿತಿ ಮಾಗ೯ದಶ೯ನ ನೀಡುತ್ತಿದ್ದಾರೆ ಎಂದು ತಾಲ್ಲೂಕ್ ರೈತಸಂಘದ ಅಧ್ಯಕ್ಷರಾದ ನರಸಿಂಹರೆಡ್ಡಿ ಹೇಳಿದರು.
ಪಾವಗಡ ತಾಲ್ಲೂಕ್ ಸಾಸಲು ಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪೋಲೇನಹಳ್ಳಿ ಗ್ರಾಮದ ಗೊಂಚಿಕುಂಟೆ ಕೆರೆ ಕಾಮಗಾರಿ ಗುದ್ದಲಿ ಪೂಜೆ ಹಾಗು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜನರಿಗೋಸ್ಕರ ಹಲವಾರು ಸಮುದಾಯ ಕಾಯ೯ಕ್ರಮಗಳನ್ನ ಪ್ರಾಮಾಣಿಕವಾಗಿ ಅನುಷ್ಠಾನ ಮಾಡುತ್ತಿದ್ದಾರೆ. ನಿಮ್ಮ ಊರಿನ ಕೆರೆಗೆ ಹೂಳೆತ್ತಲು ಅನುದಾನ ನೀಡಿದ್ದಾರೆ, ರೈತರು ಹೂಳನ್ನ ತಮ್ಮ ಜಮೀನಿಗಳಿಗೆ ಹಾಕಿಕೊಂಡು ಭೂಮಿಯ ಫಲವತ್ತತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ತಾಲ್ಲೂಕ್ ಯೋಜನಾಧಿಕಾರಿಗಳಾದ ಮಹೇಶ್ ಮಾತನಾಡಿ, ಪಾವಗಡ ತಾಲ್ಲೂಕ್ ವಷ೯ಕ್ಕೆ ಒಂದು ಕೆರೆಯಂತೆ 6 ಕೆರೆಗಳನ್ನ ಪುನಶ್ಚೇತನಗೊಳಿಸಿ, ಈ ವರ್ಷ ಹೊಸದಾಗಿ ಪೋಲೇನಹಳ್ಳಿ ಗ್ರಾಮದ ಗೊಂಚಿಕುಂಟೆ ಕೆರೆ ಕಾಮಗಾರಿಗೆ ರೂ. 7.25 ಲಕ್ಷ ಮೊತ್ತ ಮಂಜೂರಾತಿ ನೀಡಲಾಗಿದೆ. ಇನ್ನೂ ಯೋಜನೆಯಿಂದ ಈಗಾಗಲೇ ರಾಜ್ಯಾದಂತಹ 800 ಕ್ಕೂ ಹೆಚ್ಚು ಕೆರೆಗಳನ್ನ ಯೋಜನೆಯವತಿಯಿಂದ ಪುನಶ್ಚೇತನಗೊಳಿಸಲಾಗಿದೆ ಎಂದು ತಿಳಿಸಿದರು.
ರೈತರು ಸರಿಯಾದ ರೀತಿಯಲ್ಲಿ ಈ ಯೋಜನೆಗಳನ್ನ ಬಳಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಕೆರೆಯ ಸ್ವಚ್ಚತೆ ಮಾಡಿಕೊಂಡು ಸಂರಕ್ಷಣೆ ಮಾಡಿಕೊಂಡು ಹೋಗುವ ಜವಾಬ್ದಾರಿ ಕೆರೆ ಸಮಿತಿಯವರದ್ದು ಎಂದು ತಿಳಿಸಿದರು.
ಕಾಯ೯ಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷರಾದ ಶ್ರೀನಿವಾಸರೆಡ್ಢಿ, ಗ್ರಾಮ ಪಂಚಾಯತಿ ಸದಸ್ಯರಾದ ನಿರಂಜನ್ ರೆಡ್ಡಿ, ಸಮಿತಿ ಉಪಾಧ್ಯಕ್ಷರಾದ ಚೆಂದ್ರಮೌಳಿ, ಸದಸ್ಯರಾದ ಸುದಶ೯ನರೆಡ್ಡಿ, ಪ್ರಮೀಳಮ್ಮ, ಅಂಜಿನರೆಡ್ಡಿ, ರೈತರು, ಸ್ವಸಹಾಯ ಸಂಘಗಳ ಸದಸ್ಯರು, ವಲಯ ಮೇಲ್ವಿಚಾರಕರು ಕೃಷಿ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಪತ್ರಕತ೯ರಾದ ಲೋಕೇಶ್ ಹಾಗೂ ಸ್ಥಳೀಯ ಗ್ರಾಮಸ್ಥರು ಬಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4