ಬೀದರ್: ಬೀದರ್ ಜಿಲ್ಲಾ ಕಮಲನಗರ ತಾಲ್ಲೂಕಿನ ಹೊಕ್ರಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಭಂಡಾರಕುಮಠಾ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಯಿತು.
ಹೊಕ್ರಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸ್ಥಳವೆಂದು ಗುರುತಿಸಲಾದ ಡೊಂಗರಗಾಂವ ಕ್ರಾಸ್ ಮೂಲಕ ವಾಹನಗಳು ಅತೀ ವೇಗವಾಗಿ ಚಲಿಸುತ್ತಿರುವದನ್ನು ಗಮನಿಸಿದ ಹೊಕ್ರಣಾ ಪೊಲೀಸ್ ಠಾಣೆಯ ಪಿ.ಎಸ್.ಐ ಶೇಕಶಾಹ ಪಟೇಲ್ ರವರು, ಭಂಡಾರಕುಮಠಾ ಗ್ರಾಮ ಪಂಚಾಯತ್ ನ್ನು ಸಂಪರ್ಕಿಸಿ ಪಂಚಾಯತ್ ನ ಸಹಯೋಗದೊಂದಿಗೆ 6 ಬ್ಯಾರಿಕೆಡ್ ಗಳನ್ನು ಪಡೆದು ವಾಹನಗಳ ವೇಗ ಕಡಿಮೆ ಆಗುವಂತೆ ಅಳವಡಿಸಿದ್ದಾರೆ.
ಅಮಾಯಕರ ಪ್ರಾಣ ರಕ್ಷಣೆ, ಅಪಘಾತ ತಡೆಯಲು ಮುಂಜಾಗೃತ ಕ್ರಮವಾಗಿ ಕಾರ್ಯ ಪ್ರವರ್ತರಾದ ಹೊಕ್ರಣಾ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿರವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ್ ಗುಂಟಿ ಶ್ಲಾಘಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4