ಬೆಂಗಳೂರು: ರಾಹುಲ್ ಗಾಂಧಿ ಯಾರೆಂದು ನನಗೆ ತಿಳಿದಿಲ್ಲ ಎಂದು ಒಮ್ಮೆ ಸದ್ಗುರು ಹೇಳಿದ್ದರು. ಅವರೊಂದಿಗೆ ಡಿಕೆ.ಶಿವಕುಮಾರ್ ಹೇಗೆ ವೇದಿಕೆ ಹಂಚಿಕೊಂಡರು. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ.
ಸದ್ಗುರು ಜಗದೀಶ್ ವಾಸುದೇವ್ ಅವರ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ ಆಕ್ಷೇಪ ಎತ್ತಿದರು.
ನಮ್ಮ ಹಿರಿಯ ನಾಯಕ ರಾಹುಲ್ ಗಾಂಧಿಯವರನ್ನು ಸದ್ಗುರುಗಳು ಅವಮಾನಿಸಿದ್ದಾರೆಂದು ಡಿಕೆ.ಶಿವಕುಮಾರ್ ಅವರಿಗೆ ತಿಳಿದಿಲ್ಲವೇ? ರಾಜಕಾರಣದಲ್ಲಿ ಯಾರ್ಯಾರು, ಏನೇನು ಮಾತನಾಡುತ್ತಾರೆ ಎಂಬುದು ನನಗಿಂತಲೂ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4


