ಔರಾದ: ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯ ಔರಾದ (ಬಾ)ನಲ್ಲಿ 2023–24ನೇ ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಇನ್ನೂ ಸಿಕ್ಕಿಲ್ಲ, ಹೀಗಾಗಿ NSUI AURAD ವತಿಯಿಂದ ಔರಾದ (ಬಾ)ರವರ ಮುಖಾಂತರ ಉನ್ನತ ಶಿಕ್ಷಣ ಸಚಿವ ಡಾ.ಎಮ್.ಸಿ.ಸುಧಾಕರ ಅವರಿಗೆ ಮನವಿ ಸಲ್ಲಿಸಲಾಯಿತು.
NSUI AURAD ತಾಲೂಕು ಅಧ್ಯಕ್ಷರಾದ ಚಂದು ಡಿ.ಕೆ. ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಕಲ್ಬುರ್ಗಿ ವಿಶ್ವವಿದ್ಯಾಲಯ ಅಡಿಯಲ್ಲಿ ನಡೆಯುತ್ತಿರುವ ಪ್ರಥಮ ದರ್ಜೆ ಮಹಾ ವಿದ್ಯಾಲಯ ಔರಾವ (ಬಾ)ನಲ್ಲಿ 2023–24ನೇ ಸಾಲಿನಲ್ಲಿ ಉತ್ತಿರ್ಣರಾಗಿ 1 ಬಿ.ಎ. ಮತ್ತು ಬಿ.ಎಸ್.ಸಿ. ವಿದ್ಯಾರ್ಥಿಗಳ ಅಂತಿಮ ವರ್ಷದ ಅಂಕಪಟ್ಟಿ ಸುಮಾರು ಎರಡು ವರ್ಷಗಳಾದರೂ ಈವರೆಗೆ ಸಿಕ್ಕಿಲ್ಲ, ಕಾಲೇಜಿನ ಪ್ರಾಂಶುಪಾಲರಿಗೆ ಸುಮಾರು ಬಾರಿ ಕೇಳಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ಅಂಕಪಟ್ಟಿ ಸಿಗದೇ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಕತ್ತಲೆ ಆಗಿದೆ. ಆದರಿಂದ ತಾವುಗಳು ಎಂಟು ದಿವಸದ ಒಳಗೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ವಿಶ್ವ ವಿದ್ಯಾಲಯದ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ರತ್ನ ದೀಪ ಕಸ್ತೂರೆ, ದತ್ತಾತ್ರಿ ಬಾಪೋರೆ, ಹರಿದೇವ ಸಂಗನಾಳ, ರಮೇಶ್ ಚೌವ್ಹಾಣ್, ಸಂದೀಪ್ ಮಾನೆ, ಮಹೇಶ್ ಸ್ವಾಮಿ, ಮಾರುತಿ ಕೋಳ್ಳಿ, ಸಂಜು ಗೊಂಡಾ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4