ತುಮಕೂರು: ತಾಲೂಕು ವ್ಯಾಪ್ತಿಯಲ್ಲಿರುವ ಮೀಸಲು ಅರಣ್ಯ ಪ್ರದೇಶ ನಾಮದಚಿಲುಮೆಯಲ್ಲಿ ಪೂರ್ವನುಮಾತಿಯಿಲ್ಲದೇ ಚಿತ್ರೀಕರಣ ನಡೆಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ನಟಿ ರಕ್ಷಿತಾ ಪ್ರೇಮ್ ಅವರ ಸಹೋದರನ ಸಿನಿಮಾದ ಶೂಟಿಂಗ್ ಸ್ಥಗಿತಗೊಳಿಸಿದ್ದಾರೆ. ಇನ್ನೂ ಹೆಸರಿಡದ ಸಿನಿಮಾದ ಶೂಟಿಂಗ್ ಕಳೆದ ಐದು ದಿನಗಳಿಂದ ನಾಮದಚಿಲುಮೆಯಲ್ಲಿ ಸಾಗಿತ್ತು.
ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಅವರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹೊಸ ಸಿನಿಮಾದ ಚಿತ್ರೀಕರಣ ಅನುಮತಿ ಇಲ್ಲದೆ ನಾಮದಚಿಲುಮೆಯಲ್ಲಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಶೂಟಿಂಗ್ ನಿಲ್ಲಿಸುವ ಕ್ರಮ ತೆಗೆದುಕೊಂಡಿದ್ದಾರೆ.
ಚಿತ್ರೀಕರಣ ನಡೆಯುತ್ತಿರೋ ಮಾಹಿತಿ ಪಡೆದ ಅರಣ್ಯ ಇಲಾಖೆ ಎಸಿಎಫ್ ಪವಿತ್ರಾ ನೇತೃತ್ವದ ಸಿಬ್ಬಂದಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಬಂದ್ ಮಾಡಿಸಿ, ಶೂಟಿಂಗ್ ಗೆ ಬಳಸಿದ್ದ ಕೆಲ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ 5 ದಿನದಿಂದ ನಾಮದಚಿಲುಮೆಯಲ್ಲಿ ಶೂಟಿಂಗ್ ನಡೆಯುತ್ತಿತ್ತು. ನಟಿ ರಕ್ಷಿತಾ ಸಹೋದರ ರಾಣಾ, ಪ್ರಿಯಾಂಕಾ ಈ ಸಿನಿಮಾದಲ್ಲಿ ನಟಿಸುತ್ತಿದ್ದರು. ಸುಮಾರು 70–100 ಜನ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅರಣ್ಯ ಇಲಾಖೆ ದಾಳಿ ವೇಳೆ ಸಿನಿಮಾ ಚಿತ್ರೀಕರಣಕ್ಕೆ ಬಳಸಲಾಗಿರುವ ಕ್ಯಾರವಾನ್, ಕ್ಯಾಮೆರಾ ಲೈಟ್, ಕೆಲ ಸಾಮಗ್ರಿ, ಲೈಟ್, ಅಡುಗೆ ಸಾಮಗ್ರಿ, ಚೇರ್ ಗಳು, ಟೆಂಪೊ ಟ್ರಾವೆಲರ್ ಅನ್ನು ವಶಕ್ಕೆ ಪಡೆಯಲಾಗಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿ ಚಿತ್ರತಂಡದವರನ್ನು ವಿಚಾರಣೆ ನಡೆಸಿ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದಾರೆ. ನಾವು ಊಟಕ್ಕೆ ಮಾತ್ರ ನಿಲ್ಲಿಸಿದ್ದೆವು, ಸಿನಿಮಾದ ಶೂಟಿಂಗ್ ಮಾಡಿಲ್ಲ ಎಂದು ಚಿತ್ರತಂಡ ಅರಣ್ಯಧಿಕಾರಿಗಳಿಗೆ ಸ್ಪಷ್ಟನೆ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4