ಬೆಂಗಳೂರು: ಪುಣ್ಯಕ್ಷೇತ್ರಗಳ ನದಿ, ಸರೋವರ, ಕೆರೆ, ಕಲ್ಯಾಣಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಇತ್ಯಾದಿ ಮಾರಾಟ ಮಾಡದಂತೆ ಹಾಗೂ ಭಕ್ತರು ತಮ್ಮ ವಸ್ತ್ರಗಳನ್ನು ವಿಸರ್ಜಿಸದಂತೆ ನಿರ್ಬಂಧಿಸಲು ಸೂಕ್ತ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ನದಿ, ಸರೋವರ, ದೇವಾಲಯದ ಕೆರೆ ಮತ್ತು ಇತರ ಜಲಮೂಲಗಳಲ್ಲಿ ಜನರು ಎಸೆಯುವ ಸೋಪುಗಳು, ಶಾಂಪೂಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು, ಜಲಮೂಲಗಳಿಂದ 500 ಮೀಟರ್ ಒಳಗೆ ಈ ವಸ್ತುಗಳ ಮಾರಾಟವನ್ನು ನಿಷೇಧಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.
ಭಕ್ತರು ಶಾಂಪೂ ಮತ್ತು ಸೋಪು ಬಳಸಿ ಸ್ನಾನ ಮಾಡಿ ಉಳಿದ ಸೋಪು ತುಂಡುಗಳು ಮತ್ತು ಶಾಂಪೂ ಪ್ಯಾಕೆಟ್ ಗಳನ್ನು ಸ್ನಾನದ ಸ್ಥಳಗಳಲ್ಲಿ ಬಿಡುತ್ತಾರೆ. ಇವೆಲ್ಲವೂ ಜಲಮೂಲಗಳಲ್ಲಿ ನೊರೆಯೊಂದಿಗೆ ಮಿಶ್ರಣಗೊಂಡು ನೀರನ್ನು ಕಲುಷಿತಗೊಳಿಸುತ್ತಿವೆ ಎಂದು ಖಂಡ್ರೆ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4