ಮೈಸೂರು: ಮಸೀದಿ, ಚರ್ಚ್ ನಿಂದ ಸರ್ಕಾರಕ್ಕೆ ಐದು ರೂಪಾಯಿ ತೆರಿಗೆ ಬರ್ತಿದೆಯಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಧರ್ಮದ ಆಧಾರದ ಮೇಲೆ ತೆರಿಗೆ ಸಂಗ್ರಹದ ವರದಿ ಸಿದ್ಧಪಡಿಸಿ. ಹಿಂದೂಗಳು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ? ಮುಸ್ಲಿಮರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ? ಕ್ರಿಶ್ಚಿಯನ್ನರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ? ಅದರ ವರದಿ ತಯಾರಿಸಿ ಬಿಡುಗಡೆ ಮಾಡಿ. ರಾಜ್ಯ ಬಜೆಟ್ಗೆ ಸಾಬ್ರ ಕೊಡುಗೆ ಎಷ್ಟು ಎಂಬುದು ಜನರಿಗೆ ಗೊತ್ತಾಗಲಿ ಎಂದರು.
ಮಸೀದಿಯಿಂದ, ಚರ್ಚ್ ನಿಂದ ಸರ್ಕಾರಕ್ಕೆ ಐದು ರೂಪಾಯಿ ತೆರಿಗೆ ಬರ್ತಿದ್ದಿಯಾ? ಇದು ಹಲಾಲ್ ಬಜೆಟ್ ಅನ್ನೋದರಲ್ಲಿ ತಪ್ಪು ಇಲ್ಲ. ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣ, ಮಡಿವಾಳರ ಹೀಗೆ ನಾನಾ ಜಾತಿಯ ಅಭಿವೃದ್ಧಿ ನಿಗಮಕ್ಕೆ ಎಷ್ಟು ಹಣ ಕೊಟ್ಟಿದ್ದೀರಾ? ಇವತ್ತು ಇಲ್ಲಿನ ಕೆಲ ಮುಸ್ಲಿಮರಿಗೆ ಪಾಕಿಸ್ತಾನ ನಿಷ್ಠೆ ಇದೆ. ರಾಜ್ಯದಲ್ಲಿ ಮದರಾಸ, ಉರ್ದು ಶಾಲೆ ಬಂದ್ ಮಾಡಿ ಎಂದು ಆಗ್ರಹಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4