ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಡು – ಗೊಲ್ಲರ ಚಿಂತನ – ಮಂಧನ ಸಭೆ ನಡೆದಿದ್ದು, ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶಿವುಯಾದವ್ ಮಾತನಾಡಿದರು.
ಕಾಡುಗೊಲ್ಲ ಜನಾಂಗ ತೀರ ಹಿಂದುಳಿದ ಜನಾಂಗ. ಈ ಜನಾಂಗದಲ್ಲಿ ರಾಜಕೀಯ ಪ್ರಭಾವ ಶಾಲಿಗಳಾಗಳಿಲ್ಲ. , ಅಲ್ಪಸಲ್ಪ ಸರ್ಕಾರಿ ಅಧಿಕಾರಿಗಳು ಇದ್ದಾರೆ . ಆದರೆ ಅವರು ಜನಾಂಗದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ ಎಂದರು.
ಮುಖಂಡರಾದ ಗೋಪಿಯಾದವ್ ಮಾತನಾಡಿ, ಕಾಡುಗೊಲ್ಲ ಯುವಕರು ಮತ್ತು ನಾಯಕರಿಗೆಗಳಿಗೆ ಕಾಡುಗೊಲ್ಲ ಹೋರಾಟ ಮನವರಿಕೆಯಾಗಿದೆ . ಎಲ್ಲಾ ತಾಲ್ಲೂಕಿನಲ್ಲಿ ಕಾಡುಗೊಲ್ಲ ಸಭೆ ಮಾಡುತ್ತಿದ್ದಾರೆ. ಕಾಡುಗೊಲ್ಲ ಬುಡಕಟ್ಟು ಜಾತಿ ಪ್ರಮಾಣ ಪತ್ರ ಎಲ್ಲಾ ತಾಲ್ಲೂಕಿನಲ್ಲಿ ನೀಡುತ್ತಿದ್ದಾರೆ. ಆದರೆ ಮೊಳಕಾಲ್ಮೂರು ತಾಲ್ಲೂಕು ತಹಶೀಲ್ದಾರರು ಮಾತ್ರ ನೀಡುತ್ತಿಲ್ಲ . ಕಾಡುಗೊಲ್ಲ ಯುವಕರು ಜಾತಿ ಪ್ರಮಾಣ ಪತ್ರ ಕೇಳಿದರೆ,. ಅಸಭ್ಯವಾಗಿ ಮಾತನಾಡುವುದಲ್ಲದೇ ನೀವು ಗುಡ್ಡಗಾಡಿನಲ್ಲಿ ಇರಿ , ಬರಿ ಗೆಣಸು ತಿನ್ನಿರಿ , ಆಗ ನಾನು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುತ್ತೇನೆ ಎಂದು ಹೇಳಿ ಗದರಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಹಶೀಲ್ದಾರರು ಇದೇ ವರ್ತನೆಯನ್ನು ಮುಂದುವರಿಸಿದರೆ, ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಇದೇ ವೇಳೆ ಅವರು ಎಚ್ಚರಿಕೆ ನೀಡಿದರು .
ಈ ಸಂದರ್ಭದಲ್ಲಿ ವಿದ್ಯಾಧರ, ವೀರಣ್ಣ, ಪ್ರಶಾಂತ, ಭೂಮಣ್ಣ, ದೊಡ್ಡಭೂಮಣ್ಣ, ಕೃಷ್ಣಪ್ಪ, ಸುರೇಶ್, ತಿರುಮಲ್ಲೇಶ್ ಹಾಗೂ ಕಾಡುಗೊಲ್ಲ ಸಮುದಾಯದ ಇತರರು ಸಹ ಉಪಸ್ಥಿತರಿದ್ದರು .
ವರದಿ: ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB