ತುಮಕೂರು: ಹನಿಟ್ರ್ಯಾಪ್ ಆರೋಪ ಹೊರಿಸಿ ಯುವತಿಯೊಬ್ಬಳ ವಿರುದ್ಧ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.
ಹಾಸನ, ತಿಪಟೂರು, ದೊಡ್ಡಬಳ್ಳಾಪುರ, ನೆಲಮಂಗಲ ಹೀಗೆ ನಾನಾ ಕಡೆ ಕರೆದಿದ್ದ ಯುವತಿಯು ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ನನ್ನನ್ನು ಮದುವೆ ಮಾಡಿಕೊಳ್ಳಿ ಎಂದು ಒತ್ತಡ ಹಾಕಿದ್ದಳು. ಇದಕ್ಕೆ ಒಪ್ಪದಿದ್ದ ಕಾರಣ ಸ್ನೇಹಿತರೊಂದಿಗೆ ಸೇರಿ ಅವಳ ಜೊತೆಗಿನ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿ ಹಣದ ಬೇಡಿಕೆ ಇರಿಸಿದ್ದಾಳೆ ಎಂಬುದು ಮಾಜಿ ಅಧ್ಯಕ್ಷರ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ 45 ದಿನಗಳಿಂದ ನಡೆದಿದ್ದ ಈ ಹೈಡ್ರಾಮಾ ನಡೆದಿದೆ. ಫೇಸ್ ಬುಕ್ ಮೂಲಕ ಯುವತಿಯು ಪರಿಚಯವಾಗಿದ್ದಳು. ಸ್ನೇಹ ಬೆಳೆಸಿ ದಿನ ಕಳೆದಂತೆ ಹನಿ ಟ್ರ್ಯಾಪ್ ಗೆ ಸಿಲುಕಿಸಿದ್ದಳು ಎಂದು ಆರೋಪಿಸಲಾಗಿದೆ.
ಯುವತಿಯು ಗುಬ್ಬಿ ಪಟ್ಟಣ ಪಂಚಾಯಿತಿ ಹಾಲಿ ಸದಸ್ಯ ಆಗಿರುವ ಜಿ.ಎನ್.ಅಣ್ಣಪ್ಪಸ್ವಾಮಿ ಬರೋಬ್ಬರಿ 20 ಲಕ್ಷ ರೂಗಳ ಹಣದ ಬೇಡಿಕೆಯಿಟ್ಟಿದ್ದಳು ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆ ನೀಡಲಾದ ದೂರಿನಂತೆ, ಸಂಬಂಧಪಟ್ಟ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿರುವ ಅಣ್ಣಪ್ಪಸ್ವಾಮಿಯು ದೂರಿನಲ್ಲಿ, “ಬೆಂಗಳೂರು ಕಡೆಗೆ ತೆರಳಲು ಹೇಳಿ ದೊಡ್ಡಬಳ್ಳಾಪುರ ಕಡೆ ಕರೆದುಕೊಂಡು ಹೋದ ಮಹಿಳೆ ದಾರಿಯುದ್ಧಕ್ಕೂ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ವಿಡಿಯೋ ವೈರಲ್ ಮಾಡಿ ಮಾನ ಮರ್ಯಾದೆ ತೆಗೆಯುವ ಬೆದರಿಕೆ ಹಾಕಿದರು. ಹೊಟೇಲ್ ರೂಂ ನಲ್ಲಿ ಇಬ್ಬರು ಯುವಕರನ್ನು ಕರೆಸಿ ಬೆದರಿಕೆ ಹಾಕಿ ಕೊನೆಗೆ ಹಣಕ್ಕೆ ಬೇಡಿಕೆ ಇಡಲಾಗಿದೆ” ಎಂದು ಉಲ್ಲೇಖ ಮಾಡಿದ್ದಾರೆ.
ಅಣ್ಣಪ್ಪಸ್ವಾಮಿಯ ದೂರು ಆಧರಿಸಿ ಗುಬ್ಬಿ ಪೊಲೀಸರು ಪ್ರಕರಣ ದಾಖಲಾಗಿಸಿ, ಈ ಸಂಬಂಧ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ. ಮಹಿಳೆಯರ ಜೊತೆ ಸೇರಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಗುಬ್ಬಿ ಪಟ್ಟಣದ ಯುವಕ ಭರತ್ ಮತ್ತು ಬಿಲ್ಲೇಪಾಳ್ಯ ಬಸವರಾಜು ಎಂಬುವರನ್ನು ಬಂಧಿಸಲು ಕ್ರಮ ತೆಗೆದುಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4