ಅಮೆರಿಕ: ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸಿಲುಕಿದ್ದಾರೆ.
ಮಾರ್ಚ್ ನಲ್ಲಿ ಅವರು ಭೂಮಿಗೆ ಮರಳಲು ಸಕಲ ಸಿದ್ಧತೆಯೂ ನಡೆದಿದೆ. ಆದರೆ ಲಾಂಚ್ ಪ್ಯಾಡ್ ಸಮಸ್ಯೆಯಿಂದಾಗಿ ಬುಧವಾರ ಅಂತರರಾಷ್ಟ್ರೀ ಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್ಎಕ್ಸ್ ರಾಕೆಟ್ ಉಡ್ಡಯನ ವಿಳಂಬವಾಗಿದೆ.
ನಾಸಾ ಕಳುಹಿಸುತ್ತಿರುವ ಗಗನಯಾನಿಗಳು ಐಎಸ್ ಎಸ್ ತಲುಪಿದ ನಂತರ, ಸುನಿತಾ ಹಾಗೂ ಬುಚ್ ಅವರು ಭೂಮಿಯತ್ತ ಪಯಣ ಆರಂಭಿಸಬೇಕಿದೆ.
ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ ಫಾಲ್ಕನ್ ರಾಕೆಟ್ ಉಡ್ಡಯನದ ನಿರ್ಣಾಯಕ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ ಗಗನಯಾತ್ರಿಗಳು ಭೂಮಿಗೆ ಮರಳುವುದು ಇನ್ನಷ್ಟು ತಡವಾಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4