ಕೊರಟಗೆರೆ: ತಾಲೂಕಿನ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ವಿತರಿಸಲಾಗುವ 5 ಕೆ.ಜಿ. ಆಹಾರ ದಾನ್ಯದೊಂದಿಗೆ ರಾಜ್ಯ ಸರ್ಕಾರದ ಹೆಚ್ಚುವರಿ 5 ಕೆ.ಜಿ. ಆಹಾರ ದಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ 34 ರೂ. ನಂತೆ 170 ರೂಗಳನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ವರ್ಗಾಯಿಸಲಾಗುತ್ತಿತ್ತು.
ಆದರೆ ಫೆಬ್ರವರಿ ತಿಂಗಳಿಂದ ನೇರ ನಗದು ವರ್ಗಾವಣೆ ( ಡಿ.ಬಿ.ಟಿ) ಬದಲಾಗಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆ.ಜಿ.ಅಕ್ಕಿಯನ್ನು ಹಂಚಿಕೆ ಮಾಡಲಿದೆ, ಫೆಬ್ರವರಿ ತಿಂಗಳು ಮುಕ್ತಾಯವಾಗಿರುವುದರಿಂದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಡಿ.ಬಿ.ಟಿ ಬದಲಾಗಿ ಹೆಚ್ಚುವರಿ 5 ಕೆ.ಜಿ ಅಕ್ಕಿಯನ್ನು ಮಾರ್ಚ್ ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು.
ಈ ಹಂಚಿಕೆಯಂತೆ ಮಾರ್ಚ್ 2025 ನೇ ತಿಂಗಳಲ್ಲಿ ಅಂತ್ಯೋದಯ ಅನ್ನ ಯೋಜನೆಯ ಒಬ್ಬ, ಇಬ್ಬರು, ಮೂವರು ಸದಸ್ಯರಿಗೆ 35 ಕೆ.ಜಿ, 4 ಸದಸ್ಯರಿಗೆ 45 ಕೆ.ಜಿ, 5 ಸದಸ್ಯರಿಗೆ 65 ಕೆ.ಜಿ, 6 ಸದಸ್ಯರಿಗೆ 85 ಕೆ.ಜಿ, 7 ಸದಸ್ಯರಿಗೆ 105 ಕೆ.ಜಿ, 8 ಸದಸ್ಯರಿಗೆ 125 ಕೆ.ಜಿ. 9 ಸದಸ್ಯರಿಗೆ 145 ಕೆ.ಜಿ, 10 ಸದಸ್ಯರಿಗೆ 165 ಕೆ.ಜಿ, 11 ಸದಸ್ಯರಿಗೆ 185 ಕೆ.ಜಿ, 12 ಸದಸ್ಯರಿಗೆ 205 ಕೆ.ಜಿ, ಪಡಿತರವನ್ನು ಉಚಿತವಾಗಿ ವಿತರಿಸಲಾಗುವುದು ಹಾಗೂ ಆದ್ಯತಾ ಪಡಿತರ (ಬಿ.ಪಿ.ಎಲ್) ಚೀಟಿಯಲ್ಲಿನ ಪ್ರತಿ ಸದಸ್ಯರುಗಳಿಗೆ ತಲಾ 15 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4


