ತುಮಕೂರು: ಕಾಂಗ್ರೆಸ್ ಮಾಜಿ ಶಾಸಕ ಶಫಿ ಅಹಮದ್ ಅವರ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ತಮ್ಮೆಲ್ಲ ಕಷ್ಟಗಳನ್ನು ಭಗವಂತ ಅಲ್ಲಾಹ ದೂರಮಾಡಲಿ, ಅಲ್ಲದೆ ಸುಖದಿಂದ ಶಾಂತಿಯಿಂದ ಬಾಳುವಂತಾಗಲಿ. ಪವಿತ್ರ ರಂಜಾನ್ ಹಬ್ಬವು ತಮಗೆಲ್ಲರಿಗೂ ಸುಖ ಸಂತೋಷವನ್ನು ಕರುಣಿಸಲಿ ಎಂದು ಹಾರೈಸಿದರು.
ಕ್ರಿಸ್ತಪೂರ್ವ 632 ರಲ್ಲಿ ಜಗತ್ತು ಅದ್ವಿತೀಯ ಬದಲಾವಣೆಯನ್ನು ಕಂಡಿತ್ತು. ಅಂದು ಅತಿಯಾದ ಪ್ರಮಾಣದಲ್ಲಿ ಕೊಲೆ ಸುಲಿಗೆ ಹಾಗೂ ದೊಂಬಿ ನಡೆದಿತ್ತು. ಆಗ ಮಹಮ್ಮದ್ ಪೈಗಂಬರ್ ಅವರು ಶಾಂತಿ ಹಾಗೂ ನೆಮ್ಮದಿಯಿಂದ ಮತ್ತು ಸಹೋದರತ್ವ ಭಾವನೆಯಿಂದ ಬಾಳಬೇಕೆಂದು ಸಂದೇಶ ನೀಡಿದ್ದರು. ಈ ಸಂದೇಶವವನ್ನು ಇವತ್ತಿಗೂ ಕೂಡ ನಮ್ಮ ಜೀವನದಲ್ಲಿ ಅನುಸರಿಸಬೇಕಾಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4