ಭುವನೇಶ್ವರ: ವ್ಯಕ್ತಿಯೊಬ್ಬ ತನಗೆ ಮೂರು ಬಾರಿ ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಮಯೂರ್ಭಂಜ್ ಜಿಲ್ಲೆಯ ಉದಲಾದಲ್ಲಿ ಈ ಘಟನೆ ನಡೆದಿದೆ. ಅಜಿತ್ ಕರ್ಮಾಕರ್ ಅವರಿಗೆ ಅವರ ಮನೆಯ ಆವರಣದಲ್ಲಿ ನಾಗರ ಹಾವು ಸುಮಾರು ಮೂರು ನಾಲ್ಕು ಬಾರಿ ಕಚ್ಚಿತ್ತು. ತಕ್ಷಣವೇ ಹಾವನ್ನು ಹೊಡೆದು ಕೊಂದ ಅವರು ಪ್ಲಾಸ್ಟಿಕ್ ಚೀಲದಲ್ಲಿ ಹಾವನ್ನು ತುಂಬಿಸಿ ನೇರವಾಗಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ.
ವೈದ್ಯರು ಯಾವ ಹಾವು ಕಚ್ಚಿರುವುದು ಎಂದು ಕೇಳಿದರೆ ತೋರಿಸಲು ಈ ವ್ಯಕ್ತಿ ಹೀಗೆ ಮಾಡಿದ್ದಾರಂತೆ, ಆಸ್ಪತ್ರೆಯ ಡಾ. ರಾಜ್ಕುಮಾರ್ ನಾಯಕ್ ತಕ್ಷಣವೇ ಕಚ್ಚಿದ ಹಾವನ್ನು ಗುರುತಿಸಿ ಅಜಿತ್ ಕರ್ಮಾಕರ್ ಅವರಿಗೆ ಚಿಕಿತ್ಸೆ ನೀಡಿದ್ದಾರೆ.
ವ್ಯಕ್ತಿ ಹಾವನ್ನು ತನ್ನ ಜೊತೆಗೆ ಆಸ್ಪತ್ರೆಗೆ ತಂದಿರುವುದರಿಂದ ತ್ವರಿತವಾಗಿ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಯ್ತು ಎಂದು ವೈದ್ಯರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4