nammatumakuru

    Subscribe to Updates

    Get the latest creative news from FooBar about art, design and business.

    What's Hot

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!

    July 1, 2025

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025
    Facebook Twitter Instagram
    ಟ್ರೆಂಡಿಂಗ್
    • ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.
    • ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!
    • ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು
    • ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
    • ಜುಲೈ 1:  ರಾಷ್ಟ್ರೀಯ ಪತ್ರಿಕಾ ದಿನ: ಪತ್ರಿಕಾ ದಿನಾಚರಣೆಯ ಶುಭಾಶಯಗಳು
    • ಮನೆ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಕಂಬಕ್ಕೆ ಕಟ್ಟಿಹಾಕಿ ಮಹಿಳೆಗೆ ಹಲ್ಲೆ!
    • ಬಿಗ್ ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ನಿರೂಪಣೆ ಫಿಕ್ಸ್!
    • ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ ಗೆ ಸ್ಮಾರ್ಟ್ ಸಿಟೀಸ್ ಇಂಡಿಯಾ ಪ್ರಶಸ್ತಿ
    ತುಮಕೂರು March 22, 2025

    ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ ಗೆ ಸ್ಮಾರ್ಟ್ ಸಿಟೀಸ್ ಇಂಡಿಯಾ ಪ್ರಶಸ್ತಿ

    By adminMarch 22, 2025No Comments2 Mins Read
    smart cities

    ತುಮಕೂರು:  ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ನ ಪ್ರಮುಖ ಯೋಜನೆಯಾದ ಸಮಗ್ರ ನಗರ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್  CMCCC–Integrated City Management Command and Control Centreಗೆ ಪ್ರಥಮ ಪ್ರಶಸ್ತಿ ಲಭಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ.


    Provided by

    ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದಿಂದ ಆಯೋಜಿತ ಮಾರ್ಚ್ 19 ರಿಂದ 21ರವದರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ದೇಶದ 100 ಸ್ಮಾರ್ಟ್ ಸಿಟಿ ಭಾಗವಹಿಸಿದ್ದ 10ನೇ ಸ್ಮಾರ್ಟ್ ಸಿಟೀಸ್ ಇಂಡಿಯಾ-2025 ಮತ್ತು 32ನೇ ಕನ್ವರ್‌ ಜೆನ್ಸ್ ಇಂಡಿಯಾ 2025 ಎಕ್ಸ್ಪೋ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

    ತುಮಕೂರು ನಗರವು ಕರ್ನಾಟಕದ ಸ್ಮಾರ್ಟ್ ಸಿಟಿಗಳಲ್ಲಿ ಐಸಿಎಂಸಿಸಿಯನ್ನು ಸ್ಥಾಪಿಸಿ ಕಾರ್ಯಾರಂಭ ಮಾಡಿದ ಪ್ರಥಮ ಸ್ಮಾರ್ಟ್ ನಗರವಾಗಿದ್ದು, ಇ–ಆಡಳಿತದ ಗುರಿಯೊಂದಿಗೆ ನಗರದ ಕಾರ್ಯಾಚರಣೆಗಳು, ಸಂಚಾರ ನಿಯಮ ಉಲ್ಲಂಘನೆಗಾಗಿ ಇ–ಚಲನಿಂಗ್ ವ್ಯವಸ್ಥೆ, ಘನ ತ್ಯಾಜ್ಯ ಸಂಗ್ರಹಣಾ ವಾಹನಗಳ ಸಮರ್ಥ ಸ್ಥಳ ಟ್ರ್ಯಾಕಿಂಗ್ ವ್ಯವಸ್ಥೆಯಿಂದ ಪರಿಣಾಮಕಾರಿ ಕಸ ಸಂಗ್ರಹಣೆ, ದಿನದ 24 ಗಂಟೆಗಳಲ್ಲಿ ನಗರದ ನಿಗಾವಣೆಗಾಗಿ ಮೊಬೈಲ್ ಕಣ್ಗಾವಲು ವಾಹನಗಳು(MSVಗಳು), ಸಾರ್ವಜನಿಕ ಪ್ರಕಟಣೆಗಳು/ಎಚ್ಚರಿಕೆಗಳಿಗಾಗಿ ಸಾರ್ವಜನಿಕ ವಿಳಾಸ ವ್ಯವಸ್ಥೆ(PAS) ಜೊತೆಗೆ ಡ್ಯಾಶ್ ಬೋರ್ಡ್ ಕ್ಯಾಮೆರಾಗಳು ಮತ್ತು Pan Tilt Zoom (PTZ) ಕ್ಯಾಮೆರಾಗಳು ತ್ವರಿತ ಸೇವೆಗಳನ್ನು ಹತೋಟಿಗೆ ತಂದಿವೆ.

    ಐಸಿಎಂಸಿಸಿ ಕೇಂದ್ರವು ತುರ್ತು ಪ್ರತಿಕ್ರಿಯೆ ವ್ಯವಸ್ಥೆ, ಚುರುಕು ಸಂದೇಶ ರವಾನೆ, ವ್ಯತ್ಯಯಗೊಳಿಸಬಹುದಾದ ಸಂದೇಶ ರವಾನೆ ವ್ಯವಸ್ಥೆ, ಸಾರ್ವಜನಿಕ ಪ್ರಕಟಣೆಗಳು, ಪರಿಸರ ಮೇಲ್ವಿಚಾರಣಾ ವ್ಯವಸ್ಥೆಯನ್ನು ತುಮಕೂರು ಒನ್ ವ್ಯವಸ್ಥೆಯೊಂದಿಗೆ ಪೂರೈಸುತ್ತದೆ. ಅಲ್ಲದೆ ನಗರದ ಆಡಳಿತ ಕಚೇರಿ/ಪ್ರಾಧಿಕಾರಗಳಿಗೆ ಅವುಗಳ ದೈನಂದಿನ ಕಾರ್ಯಚಟುವಟಿಕೆಗಳ ಸಮಯದಲ್ಲಿ ಹಾಗೂ ತುರ್ತು ಸಂದರ್ಭಗಳಲ್ಲಿ ಬೆಂಬಲ ವ್ಯವಸ್ಥೆಯಾಗಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಐಸಿಎಂಸಿಸಿ ವ್ಯವಸ್ಥೆಯಡಿ ವಿಶೇಷವಾಗಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಗರದಾದ್ಯಂತ ನಿಗಾವಹಿಸಲಾಗುತ್ತಿದೆ.

    ಐಸಿಎಂಸಿಸಿ ವ್ಯವಸ್ಥೆಯಿಂದ ಇತ್ತೀಚೆಗೆ ನಗರದ ಪ್ರಮುಖ ವೃತ್ತದಲ್ಲಿ ರಾತ್ರಿ ವೇಳೆಯಲ್ಲಿ ಬಸ್‌ಗಾಗಿ ಕಾಯ್ದು ಕುಳಿತಿದ್ದ ದಂಪತಿಗಳೊಂದಿಗೆ ಮತ್ತೊಬ್ಬ ವ್ಯಕ್ತಿಯನ್ನು ಅನುಚಿತವಾಗಿ ವರ್ತಿಸುತ್ತಿರುವುದನ್ನು ಸಿಸಿಟಿವಿ ಮೂಲಕ ಗಮನಿಸಿದ ಕೂಡಲೇ ಅವರಿಗೆ ಸಾರ್ವಜನಿಕ ಪ್ರಕಟಣೆ ಮೂಲಕ ಯಾವುದೇ ತುರ್ತು ಸಂದರ್ಭ ಎದುರಾಗಿದ್ದಲ್ಲಿ ಎಸ್‌ ಓಎಸ್ ಬಟನ್ ಒತ್ತುವಂತೆ ಸೂಚನೆ ನೀಡಿ ಅವರಿಗೆ ನಗರವು ಸುರಕ್ಷಿತವಾಗಿದೆ ಎಂದು ಮನದಟ್ಟು ಮಾಡಿದ ಘಟನೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.

    ಇತ್ತೀಚೆಗೆ ನಗರದ ಶಿರಾಗೇಟ್ ರಸ್ತೆಯಲ್ಲಿ ಅನಾರೋಗ್ಯ ಪೀಡಿತ ದಾರಿಹೋಕರೊಬ್ಬರು ಅಸ್ವಸ್ಥರಾಗಿ ನರಳಾಡುತ್ತಿರುವುದನ್ನು ಸಿಸಿಟಿವಿ ಸರ್ವೆಲೆನ್ಸ್ ಮೂಲಕ ಗಮನಿಸಿದ ಐಸಿಎಂಸಿಸಿ ಸಿಬ್ಬಂದಿ ಆರೋಗ್ಯ ಇಲಾಖೆಯ 108 ಆಂಬುಲೆನ್ಸ್ಗೆ ಮಾಹಿತಿ ನೀಡಿ ಕೂಡಲೇ ಸ್ಥಳಕ್ಕೆ ಕಳುಹಿಸುವ ಮೂಲಕ ಅಗತ್ಯ ತುರ್ತು ಚಿಕಿತ್ಸೆಗೆ ನೆರವಾಗಿರುವುದು, ಮರಳೂರು ದಿಣ್ಣೆಯಲ್ಲಿ ಕೌಟುಂಬಿಕ ಕಲಹದಿಂದ ಗೃಹಿಣಿಯೊಬ್ಬರು ಎಸ್‌ಓಎಸ್ ಪ್ಯಾನಿಕ್ ಬಟನ್ ಮೂಲಕ ಐಸಿಎಂಸಿಸಿಯನ್ನು ಸಂಪರ್ಕಿಸಿ ಸೂಕ್ತ ರಕ್ಷಣೆ ಕೋರಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ಪೋಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸುರಕ್ಷತೆಗೆ ಧಾವಿಸಿರುವುದನ್ನು ಉದಾಹರಿಸಬಹುದು.

    ಪ್ರಶಸ್ತಿ ಸ್ವೀಕಾರ:

    ನಗರದಲ್ಲಿ ತನ್ನ ಕಾರ್ಯಾಚರಣೆಗಳೊಂದಿಗೆ ವಾಸ್ತವಿಕವಾಗಿ ನಗರವನ್ನು ‘ಸ್ಮಾರ್ಟ್” ಆಗುವಂತೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅನುಷ್ಟಾನಗೊಳಿಸಿರುವ ನಗರದ ಸುರಕ್ಷತೆ ಮತ್ತು ಭದ್ರತೆಗೆ ವಿವಿಧ ರೀತಿಯಲ್ಲಿ ಕಾರ್ಯಾಚರಣೆಗೊಳಿಸುತ್ತಿರುವ ಐಸಿಎಂಸಿಸಿಗೆ ಪ್ರಥಮ ಪ್ರಶಸ್ತಿ ಲಭಿಸಿದ್ದು ಮಾರ್ಚ್ 21ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿಜ ಬಿ.ವಿ. ಪ್ರಶಸ್ತಿ ಸ್ವೀಕರಿಸಿದ್ದಾರೆ.

    ಪ್ರಶಸ್ತಿ ಪಡೆದ ಬಿ.ವಿ.ಅಶ್ವಿಜ ಅವರು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಅಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು, ನಗರದ ನಾಗರಿಕರು, ಸಿಬ್ಬಂದಿ ವರ್ಗದವರಿಗೆ ಮತ್ತು ನಗರದ ಸುವ್ಯವಸ್ಥೆಗೆ ಸಹಕರಿಸುತ್ತಿರುವ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

    July 1, 2025

    DIGITAL ARREST ಬಗ್ಗೆ ಎಚ್ಚರವಿರಲಿ!

    June 30, 2025
    Our Picks

    ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು

    June 30, 2025

    ಇಸ್ರೇಲ್ ಪರ ಬೇಹುಗಾರಿಕೆ: ಮೂವರನ್ನು ಗಲ್ಲಿಗೇರಿಸಿದ ಇರಾನ್

    June 25, 2025

    ಕೆಲವರಿಗೆ ಮೋದಿಯೇ ಮೊದಲು: ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟೀಕೆ

    June 25, 2025

    ಏಳು ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಲು ರಾಷ್ಟ್ರಪತಿಗೆ ಸಿಎಂ ಸಿದ್ದರಾಮಯ್ಯ ಮನವಿ

    June 24, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದವರು ಸಿ.ಸಿ.ಬಾರಕೇರ:  ಡಾ.ಕರಿಯಣ್ಣ ಬಿ.

    July 1, 2025

    ತುಮಕೂರು :  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮತ್ತು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ…

    ಎಷ್ಟು ಹಣ ಕೊಟ್ಟರೂ ಆ ಒಂದು ಕೆಲಸ ಮಾಡುವುದಿಲ್ಲ ಎಂದ ರಶ್ಮಿಕಾ ಮಂದಣ್ಣ!

    July 1, 2025

    ಬೀದರ್ | ಭ್ರಷ್ಟಾಚಾರ ಆರೋಪ; ದ್ವಿತೀಯ ದರ್ಜೆ ಸಹಾಯಕ ಅಮಾನತು

    July 1, 2025

    ತುಮಕೂರು: ವಿವಿಧ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

    July 1, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.