ಹಿರಿಯೂರು: ವ್ಯಕ್ತಿಯೊಬ್ಬರ ಬೈಕ್ ನಿಂದ ಕಳ್ಳರು ಹಣ ಕದ್ದು ಪರಾರಿಯಾಗಿರುವ ಘಟನೆ ಹಿರಿಯೂರು ನಗರದ ಸಂಜೀವಿನಿ ಆಸ್ಪತ್ರೆ ರಸ್ತೆಯಲ್ಲಿರುವ ಸಿದ್ದಗಂಗಾ ಬೇಕರಿ ಬಳಿಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನರಸಿಂಹ ಬಡಾವಣೆ ವಾಸಿ ನಿವೃತ್ತ ಶಿಕ್ಷಕರಾದ ಅಶ್ವಥ್ ನಾರಾಯಣ್ ಶುಕ್ರವಾರ ಬೆಳಿಗ್ಗೆ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಲ್ಲಿರುವ ಹಿರಿಯೂರು ನಗರದ ಅಂಚೆ ಕಚೇರಿಯಲ್ಲಿ ಹಣ ಡ್ರಾ ಮಾಡಿಕೊಂಡು, ಪಿ.ಬಿ.ರೋಡ್ ಶಾಖೆಯ ಎಸ್ ಬಿ ಐ ಬ್ಯಾಂಕಿನಲ್ಲಿ ರೂ. ಎರಡು ಲಕ್ಷ ಹಣವನ್ನು ಬದಲಾವಣೆ ಮಾಡಿಕೊಂಡು, ಹಿರಿಯೂರು ಖಾಸಗಿ ಬಸ್ ನಿಲ್ದಾಣದ ಸಂಜೀವಿನಿ ಆಸ್ಪತ್ರೆಯ ರಸ್ತೆಯಲ್ಲಿರುವ ಸಿದ್ದಗಂಗಾ ಬೇಕರಿ ಬಳಿ ಬೈಕ್ ನಿಲ್ಲಿಸಿ ನೀರಿನ ಬಾಟಲಿ ತೆಗೆದುಕೊಳ್ಳಲು ಬೇಕರಿ ಬಳಿಗೆ ಹೋಗಿದ್ದಾರೆ.
ಇತ್ತ, ಅಶ್ವಥ್ ನಾರಾಯಣ್ ಅವರು ಹಣ ಡ್ರಾ ಮಾಡಿರುವುದನ್ನು ಕಂಡು ಫಾಲೋ ಮಾಡಿಕೊಂಡು ಬಂದಿದ್ದ ಕಳ್ಳರು ಬೈಕ್ ನಲ್ಲಿದ್ದ ಹಣವನ್ನು ಎಗರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ದೃಶ್ಯ ಬೇಕರಿಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹಿರಿಯೂರು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಕಳ್ಳರ ಬಂಧನಕ್ಕೆ ಬಲೆ ಈ ಬೀಸಿದ್ದಾರೆ.
ವರದಿ: ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB