ಕೊರಟಗೆರೆ: ಸಂಸ್ಕಾರಕ್ಕೆ ಯಾವುದೇ ಜಾತಿ ಮತ ಭೇದವಿಲ್ಲ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಶಿಕ್ಷಣವನ್ನು ಕಲಿಸಿದರೆ ಉತ್ತಮ ಸಮಾಜ ರೂಪಗೋಳ್ಳುತ್ತದೆ ಎಂದು ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಅವರು ತಾಲ್ಲೂಕಿನ ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದ ಕುಂಚಿಟಿಗರ ಮಹಾ ಸಂಸ್ಥಾನ ಮಠದಲ್ಲಿ 4 ನೇ ವರ್ಷದ ಸಂಸ್ಕಾರ ಶಿಬಿರ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಮಕ್ಕಳಲ್ಲಿ ಆಧುನಿಕತೆಯ ವೈಭವದ ಜೀವನದಲ್ಲಿ ಅವರ ಮನಸ್ಥತಿ ಕಲುಷಿತವಾಗುತ್ತದೆ ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಮಕ್ಕಳ ಮನಸ್ಸನ್ನು ಒಳ್ಳೆಯ ಕಡೆಗೆ ಕರೆದೊಯ್ಯುವ ದೃಷ್ಟಿಯಿಂದ ಇತಂಹ ಸಂಸ್ಕಾರ ಶಿಬಿರಗಳನ್ನು ಶ್ರೀ ಮಠದಲ್ಲಿ ಪ್ರಾರಂಭಿಸಲಾಗಿದೆ, ಮಕ್ಕಳು ಕಠಿಣ ಪರಿಸ್ಥತಿಯನ್ನು ಜೀವದಲ್ಲಿ ಎದುರಿಸಲು ಅವರ ಮನಸ್ಸು ಸದೃಡವಾಗಿರುಬೇಕು ಈ ಸಂಸ್ಕಾರ ಶಿಬಿರದಲ್ಲಿ ಜಾತಿ, ಉಳ್ಳವರು, ಬಡವರು, ಎನ್ನುವ ಭೇದವಿಲ್ಲ ಎಲ್ಲರೂ ಸಮಾನ ವಿದ್ಯಾರ್ಥಿಗಳು ಈ 10 ದಿನಗಳ ಕಾಲ ಸಂಸ್ಕಾರ ಶಿಬಿರದಲ್ಲಿ ನಡೆಯುವ ಎಲ್ಲಾ ಪ್ರವಚನ, ತರಬೇತಿ, ಆಟ, ಊಟ, ವಸತಿ, ಬಟ್ಟೆ, ಪುಸ್ತಕ ಅಭ್ಯಾಸಗಳ ಸಂಪೂರ್ಣ ಜವಾಬ್ದಾರಿ ವೆಚ್ಚವನ್ನು ಶ್ರೀ ಮಠವು ವಹಿಸುತ್ತದೆ ಇಂದು ನೂರಾರು ಮಕ್ಕಳು ಈ ಶಿಬಿರದ ಉಪಯೋಗ ಪಡೆಯುತ್ತಿರುವುದು ಸಂತೋಷ ತಂದಿದೆ ಎಂದರು.
ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಒಳ್ಳೆಯ ವಿದ್ಯೆಗಳು ಅಭ್ಯಾಸವಾದವು ಎಂದರೆ ಅವು ದಿನವೂ ರೂಡಿಯಾಗುತ್ತದೆ, ಪ್ರತಿ ಮಕ್ಕಳು, ಹಿರಿಯರು ದಿನವೂ ದಿನಪತ್ರಿಕೆ ಓದುವ ಅಭ್ಯಾಸ ಮಾಡಿಕೊಳ್ಳುವುದರೊಂದಿಗೆ ಅದರ ವಿಚಾರ ಮಾಡುವ ಬುದ್ದಿವಂತಿಕೆ ಬೆಳಸಿಕೊಳ್ಳಬೇಕು ಪ್ರತಿಯೊಬ್ಬವರು ನಮ್ಮ ದೇಶದ ಕಾನೂನು ನಿಯಮಗಳನ್ನು ತಿಳಿದುಕೊಳ್ಳವಂತೆಯಾಗಬೇಕು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ನಾಹೀದಾ ಜಮ್ ಜಮ್ ಮಾತನಾಡಿ, ಸಂಸ್ಕಾರ ಶಿಬಿರ ಜೀವನದಲ್ಲಿ ಮೌಲ್ಯಗಳ ಪಾಠಗಳನ್ನು ಕಲಿಸುತ್ತದೆ, ಮಕ್ಕಳ ಬದ್ದಿಯನ್ನು ಶುದ್ದ ಮಾಡುತ್ತದೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಇತ್ತೀಚೆಗೆ ಮಕ್ಕಳು ವೃದ್ದ ತಂದೆತಾಯಿಗಳನ್ನು ನೋಡಿಕೊಳ್ಳುವುದು ಕಡಿಮೆಯಾಗುತ್ತಿದ್ದು ಅವರನ್ನು ವೃದ್ದಾಶ್ರಮಕ್ಕೆ ತಳ್ಳುವುದು ಇಲ್ಲ ಅನಾಥರಾಗಿ ಬಿಡುವುದು ಇದು ಸಮಾಜದಲ್ಲಿ ಹೆಚ್ಚುತ್ತಿದ್ದು ಮಕ್ಕಳಲ್ಲಿ ಸಂಸ್ಕಾರದ ಮನಸ್ಸು ಮೂಡಿಸಿದರೆ ಅವರು ದೊಡ್ಡವಾಗಿ ಸಂಸಾರವಂತರಾದಾಗ ವೃದ್ದ ತಂದೆತಾಯಿಗಳನ್ನು ನೋಡಿಕೊಳ್ಳತ್ತಾರೆ ತಂದೆ ತಾಯಿಗಳ ಬೆಲೆ ಮೌಲ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಮಕ್ಕಳಿಗೆ ಕಥೆ ಮೂಲಕ ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ್ ಕೆ., ನವೀನ್ , ದೇವರಾಜಯ್ಯ, ಐಶ್ವರ್ಯ ಸುರೇಶ್‍ಗೌಡ, ಕ.ಸಾ.ಪ. ರಾಜ್ಯ ಪ್ರದಾನ ಕಾರ್ಯದರ್ಶಿ ರಾಮಲಿಂಗಶೆಟ್ಟಿ, ಜಿಲ್ಲಾದ್ಯಕ್ಷ ಸಿದ್ದಲಿಂಗಯ್ಯ, ಗೃಹ ಸಚಿವರ ವಿಶೇಷ ಅಧಿಕಾರಿ ನಾಗಣ್ಣ, ತಾಲ್ಲೂಕು ಹಿಂದುಳಿದ ಕಲ್ಯಾಣ ಅಧಿಕಾರಿ ಅನಂತರಾಜು, ಡಾ.ನಂಜುಂಡಯ್ಯ, ಡಿ. ರಾಜಣ್ಣ, ಶಿವರುದ್ರಪ್ಪ, ಸಿದ್ದಗಂಗಯ್ಯ, ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW