ಬಿಹಾರ: ಭಿಕ್ಷುಕನೊಬ್ಬ ಚಿಲ್ಲರೆ ಇಲ್ಲದಿದ್ದರೆ ಡಿಜಿಟಲ್ ರೂಪದಲ್ಲಿ ಭಿಕ್ಷೆ ನೀಡಿ ಎಂದು ವಿಶಿಷ್ಠವಾಗಿ ಭಿಕ್ಷೆ ಬೇಡುತ್ತಿರುವ ಪ್ರಸಂಗ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಪಟ್ಟಣದಲ್ಲಿ ನಡೆದಿದೆ.
ನಿಮ್ಮಲ್ಲಿ ಚಿಲ್ಲರೆ ಇಲ್ಲದಿದ್ದರೆ, ಚಿಂತಿಸಬೇಡಿ. ನೀವು ನನಗೆ ಇ ವ್ಯಾಲೆಟ್ ಮೂಲಕ ಪಾವತಿಸಬಹುದು. ಈಗ ನಾನು ಡಿಜಿಟಲ್ ಪಾವತಿಯ ಸೌಲಭ್ಯವನ್ನು ಹೊಂದಿದ್ದೇನೆ. ಎಂದು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಪಟ್ಟಣದ ನಿವಾಸಿ ಭಿಕ್ಷುಕ ರಾಜು ಪ್ರಸಾದ್ (40) ಅವರು ಡಿಜಿಟಲ್ ರೂಪದಲ್ಲಿ ಪಾವತಿಸುವಂತೆ ಕೇಳುತ್ತಿದ್ದಾರೆ.
ಶುಕ್ರವಾರ ಅವರು ತಮ್ಮ ಇ ವ್ಯಾಲೆಟ್‌ನಲ್ಲಿ ಭಿಕ್ಷಾಟನೆಯಿಂದ 57 ರೂಪಾಯಿಗಳನ್ನು ಗಳಿಸಿದರು. ಪ್ರಸಾದ್ ಅವರು ತಮ್ಮ 10ನೇ ವಯಸ್ಸಿನಿಂದ ಬೆಟ್ಟಿಯಾ ರೈಲು ನಿಲ್ದಾಣದ ಆಸುಪಾಸಿನಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ‘ಡಿಜಿಟಲ್ ಇಂಡಿಯಾ’ ಅಭಿಯಾನದ ಕಟ್ಟಾ ಬೆಂಬಲಿಗರಾದ ಪ್ರಸಾದ್ ಅವರು ಡಿಜಿಟಲ್ ಪಾವತಿಯ ಸೌಲಭ್ಯವನ್ನು ಪಡೆಯಲು ಇತ್ತೀಚೆಗೆ ಬ್ಯಾಂಕ್ ಖಾತೆಯನ್ನು ತೆರೆದರು.
ನನ್ನ ಬಳಿ ಆಧಾರ್ ಕಾರ್ಡ್ ಇದ್ದರೂ ಪ್ಯಾನ್ ಕಾರ್ಡ್ ಇರಲಿಲ್ಲ, ಇದರಿಂದ ಬ್ಯಾಂಕ್ ಖಾತೆ ತೆರೆಯಲು ವಿಳಂಬವಾಗಿದೆ, ಈಗ ಪ್ಯಾನ್ ಕಾರ್ಡ್ ಪಡೆದುಕೊಂಡು ಬ್ಯಾಂಕ್ ಖಾತೆ ಹೊಂದಿದ್ದಾನೆ. ಈಗ ಭಿಕ್ಷುಕನಾಗಿದ್ದರೂ ಡಿಜಿಟಲ್ ಪಾವತಿಯ ಸೌಲಭ್ಯವನ್ನು ಪಡೆದಿದ್ದೇನೆ ಎಂದು ಅವರು ಹೆಮ್ಮೆಪಡುತ್ತಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB