ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರದ ನಗರಸಭೆಯ ಆಡಳಿತ ವರ್ಗ ಹಾಗು ನಗರಸಭೆಯ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಹಾಗೂ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ವಿಶ್ವನಾಥ್ ನಗರಸಭೆ ಪೌರಾಯುಕ್ತರ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಮುಂಭಾಗದಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ತಾಲ್ಲೂಕು ಘಟಕ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಗರಸಭೆ ಪೌರಾಯುಕ್ತರ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಂದ ಚುನಾಯಿತಗೊಂಡ ಸದಸ್ಯರಿಗೆ ಮಾಹಿತಿ ನೀಡದೇ ಕೆ.ಎಂ.ಕೊಟ್ಟಿಗೆಯಿಂದ ನಂಜಯ್ಯನ ಕೊಟ್ಟಿಗೆ ಹತ್ತಿರ ರಸ್ತೆ ಮರುಡಾಂಬರೀಕರಣ ಕಾಮಗಾರಿ ನಡೆಸುತ್ತಿದ್ದು, ಈ ಬಗ್ಗೆ ಮಾಹಿತಿ ಕೇಳಲು ನಗರಸಭೆ ಸದಸ್ಯರಾದ ಅಂಬಿಕಾ ಅವರ ಪತಿಯಾದ ಬಿಜೆಪಿ ಪಕ್ಷದ ತಾಲ್ಲೂಕಿನ ಪ್ರಧಾನ ಕಾರ್ಯದರ್ಶಿ ಸಿದ್ದು ಆರಾಧ್ಯ ರವರು ನಗರದ ಆಡಳಿತ ಅಧಿಕಾರಿಗಳ ಬಳಿ ತೆರಳಿದಾಗ, ನಿಮಗೆ ಏಕೆ ನಾವು ಮಾಹಿತಿ ನೀಡಬೇಕು? ನಿಮಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ, ಎಂದು ಉತ್ತರ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಚುನಾಯಿತ ವಾರ್ಡ್ ಸದಸ್ಯರ ಗಮನಕ್ಕೆ ಬಾರದೇ ಮಧ್ಯರಾತ್ರಿ ವೇಳೆಯಲ್ಲಿ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದ್ದು, ಈ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು, ಈ ಬಗ್ಗೆ ನಗರಸಭೆ 28ನೇ ವಾರ್ಡ್ ನ ಬಿಜೆಪಿ ಪಕ್ಷದ ಸದಸ್ಯರಾದ ಅಂಬಿಕಾಬಾಯಿರವರು ಮಾಹಿತಿ ಕೇಳಿದರೂ ಯಾವುದೇ ಮಾಹಿತಿ ನೀಡದೇ ಬೇಜಾಬ್ದಾರಿತನದ ವರ್ತನೆಯನ್ನು ಆಡಳಿತ ಅಧಿಕಾರಿಗಳು ತೋರಿದ್ದಾರೆ ಎಂದು ಸಿದ್ದು ಆರಾಧ್ಯ ಹಾಗೂ ಅಂಬಿಕಾ ಬಾಯಿ ಇದೇ ವೇಳೆ ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಹಾಗೂ ಸಾರ್ವಜನಿಕರಿಗೆ ಸ್ಪಂದಿಸದ ನಗರಸಭೆ ಅಧಿಕಾರಿಗಳಿಗೆ ಧಿಕ್ಕಾರ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.
ಆರ್ ಟಿ ಐ ಕಾರ್ಯಕರ್ತರಾದ ನಾಗರಾಜು ರವರು ಮಾತನಾಡಿ, ಇವತ್ತಿನ ದಿನಗಳಲ್ಲಿ ಹಿರಿಯೂರು ನಗರದ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಅಕ್ರಮಣ ಮಾಡುತ್ತಿದ್ದಾರೆ. ಇದರ ಬಗ್ಗೆ ನಗರಸಭೆ ಕಮಿಷನರ್ ರವರಿಗೆ ಮಾಹಿತಿ ಕೇಳಲು ಹೋದರೆ ನಮಗೆ ಪೋಲಿಸ್ ಠಾಣೆಯಲ್ಲಿ ಎಫ್ ಐ ಆರ್ ಮಾಡಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತಾಲ್ಲೂಕಿನ ಅಧ್ಯಕ್ಷರಾದ ವಿಶ್ವನಾಥ್ ಯಾದವ್, ಆರ್ ಟಿ ಐ ಕಾರ್ಯಕರ್ತರಾದ ನಾಗರಾಜು, ಸಿದ್ದು ಆರಾಧ್ಯ, ಅಂಬಿಕಾ ಯಾನೆ ಅಂಬಿಕಾ ಬಾಯಿ, ಮುಖಂಡರು, ನಗರಸಭೆ ಸದಸ್ಯರು, ಹಾಗೂ ವಿವಿಧ ಸಂಘಟನೆಗಳ ಮುಖಂಡರು, ನಗರಸಭೆ ಆಡಳಿತ ಅಧಿಕಾರಿಗಳು, ನಗರಸಭೆ ಸದಸ್ಯರು ಭಾಗವಹಿಸಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB