ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಕಂತು ಯಾವಾಗ ಸಿಗುತ್ತದೆ ಎಂದು ಫಲಾನುಭವಿಗಳು ಕಾಯುತ್ತಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳ ಹಣ ಬಂದಿಲ್ಲ ಎಂದು ಫಲಾನುಭವಿಗಳು ಕಂಗಾಲಾಗಿದ್ದರು. ಈ ನಡುವೆ ನಿನ್ನೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಏಪ್ರಿಲ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೊಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಜಮಾವಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಜನವರಿ ಫೆಬ್ರವರಿಯ ಹಣ ನಾವು ಹಾಕಿದ್ದೀವಿ, ಒಂದು ತಿಂಗಳ ಮಾರ್ಚ್ ನಲ್ಲಿ ನಮ್ಮ ಪೈನಾನ್ಸ್ ಇಯರ್ ಇರುತ್ತದೆ ಹಾಗಾಗಿ ಒಂದು ತಿಂಗಳದ್ದು ಹೆಚ್ಚುಕಮ್ಮಿಯಾಗಿದೆ. ಮಿಕ್ಕಿದ್ದು ಯಥಾವತ್ತಾಗಿ ಜಮಾ ಆಗಿದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW