ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಬಲಿಯಾದ 11 ಜನ ಅಮಾಯಕರ ಬಗ್ಗೆ ಮರುಕ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ ಅವರು, ಕಾಲ್ತುಳಿತ ಪ್ರಕರಣದಲ್ಲಿ ಮೃತರ ಪರಿಹಾರದ ಮೊತ್ತ 25 ಲಕ್ಷ ಅಲ್ಲ. ಇಡೀ ಬಜೆಟ್ ಅನ್ನೇ ಪರಿಹಾರವಾಗಿ ಕೊಟ್ಟರು ಹೋಗಿರುವ ಜೀವ ವಾಪಸ್ ಬರುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.
ಇಡೀ ಘಟನೆಯಿಂದ ಬೆಂಗಳೂರಿಗೆ ಅತ್ಯಂತ ಕೆಟ್ಟ ಹೆಸರು ಬಂದಿದೆ. ಸಿಎಂ ಪಟಾಲಾಂ ಮಾಡಿದ ಎಡವಟ್ಟಿನಿಂದ ಇಷ್ಟೆಲ್ಲಾ ಘಟನೆಗಳು ನಡೆದಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಅವರಿಂದ ನಾವು ಇಂತಹ ಆಡಳಿತ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ನಿಮ್ಮ ಒಳ ಜಗಳ ನಿಮ್ಮ ಒಳ ಒಪ್ಪಂದಗಳು ನಿಮ್ಮ ನಡುವಿನ ಗೊಂದಲಗಳಿಂದ ಅಮಾಯಕರ ಜೀವ ಹೀಗಾಗಿದೆ. ಇದಕ್ಕೆ ಯಾರು ಹೊಣೆ ಮೊದಲು ಹೇಳಿ. ಸಿದ್ದರಾಮಯ್ಯನವರೇ ಇದಕ್ಕೆ ಹೊಣೆ ಅಲ್ವಾ. ಕಾಲ್ತುಳಿತ ಘಟನೆಗೆ ಡಾ.ರಾಜ್ ಕುಮಾರ್ ಅವರ ಸಾವಿನ ಘಟನೆಯನ್ನ ಹೇಗೆ ಹೋಲಿಕೆ ಮಾಡುತ್ತೀರಾ?. ಡಾ.ರಾಜ್ ಕುಮಾರ್ ಅವರ ಸಾವಿನ ಸಂದರ್ಭವೇ ಬೇರೆ ಅವತ್ತಿನ ಪರಿಸ್ಥಿತಿಯೇ ಬೇರೆ, ಇವತ್ತಿನ ಪರಿಸ್ಥಿತಿಯೇ ಬೇರೆ. ನೀವು ಈಗ ಮಾಡಿರುವುದು ಪಾಪದ ಕೆಲಸ. ಮೊದಲು ಅದನ್ನ ನೀವು ಒಪ್ಪಿಕೊಳ್ಳಬೇಕು. ಕುರ್ಚಿಗೆ ಅಂಟಿಕೊಂಡು ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ಅಂದು ಕೊಂಡಿರಲಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಕೊಟ್ಟಿರುವ ಫ್ರೀ ನೆಸ್ ಬೇರೆ ರಾಜ್ಯದ ಯಾವ ಸಿಎಂಗೂ ಕೊಟ್ಟಿಲ್ಲ. ಆದರೂ ಸಿದ್ದರಾಮಯ್ಯ ಇಂತಹ ಕೆಟ್ಟ ಆಡಳಿತ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW


