nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗುಬ್ಬಿ: ಹೋಟೆಲ್‌ ಗೆ ಊಟಕ್ಕೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು

    December 18, 2025

    ಮಧುಗಿರಿ: ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ರೈತ ಸಾವು

    December 18, 2025

    ಕರ್ನಾಟಕ ದ್ವೇಷ ಅಪರಾಧಗಳ ತಡೆ ವಿಧೇಯಕ–2025ಕ್ಕೆ ಅನುಮೋದನೆ: ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದ ಬಿಜೆಪಿ

    December 18, 2025
    Facebook Twitter Instagram
    ಟ್ರೆಂಡಿಂಗ್
    • ಗುಬ್ಬಿ: ಹೋಟೆಲ್‌ ಗೆ ಊಟಕ್ಕೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು
    • ಮಧುಗಿರಿ: ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ರೈತ ಸಾವು
    • ಕರ್ನಾಟಕ ದ್ವೇಷ ಅಪರಾಧಗಳ ತಡೆ ವಿಧೇಯಕ–2025ಕ್ಕೆ ಅನುಮೋದನೆ: ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದ ಬಿಜೆಪಿ
    • ಬೀದರ್ | ತಾಯಿ, ಮಗು ನಾಪತ್ತೆ: ಪತ್ತೆಗಾಗಿ ಮನವಿ
    • ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ದಶ ಸಂಭ್ರಮ: ಛಲ ಇದ್ದರೆ ಏನನ್ನೂ ಸಾಧಿಸಬಹುದು: ಕುಮಾರ್ ಪೆರ್ನಾಜೆ
    • ತುರುವೇಕೆರೆ  | ಗಂಧದ ಮರ ಕಳ್ಳತನ: ಮಾಲು ಸಹಿತ ಕಳ್ಳರ ಬಂಧನ
    • ತುಮಕೂರು | ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
    • ಎಸಿ ಕೋರ್ಟ್ ಗಳಲ್ಲಿ ಬಾಕಿಯಿದ್ದ ಶೇ.80ರಷ್ಟು ಪ್ರಕರಣ ವಿಲೇವಾರಿ: ಸಚಿವ ಕೃಷ್ಣ ಬೈರೇಗೌಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಾಹಿತ್ಯವು ಬದುಕಿನ ಪ್ರತಿಬಿಂಬ: ಡಾ.ಎನ್.ಆರ್.ಲಲಿತಾಂಬ
    ತುಮಕೂರು June 8, 2025

    ಸಾಹಿತ್ಯವು ಬದುಕಿನ ಪ್ರತಿಬಿಂಬ: ಡಾ.ಎನ್.ಆರ್.ಲಲಿತಾಂಬ

    By adminJune 8, 2025No Comments2 Mins Read
    lalithamba

    ತುಮಕೂರು: ಒಬ್ಬ ವ್ಯಕ್ತಿಯ ದೃಷ್ಟಿಕೋನ, ಜೀವನದ ಬಗ್ಗೆ ಇರುವ ಆಳವಾದ ಅರಿವು, ಅನಿಸಿಕೆ, ಲೋಕದೃಷ್ಟಿ ಮುಂತಾದವುಗಳ ಮೊತ್ತ ಜೀವನದರ್ಶನವಾಗಿದೆ. ಜೀವ ಜಗತ್ತಿನಲ್ಲಿ ಮನುಷ್ಯನ ಪಾತ್ರ, ಸುಖ ದುಃಖಗಳ ಅರ್ಥ, ಬದುಕಿನಲ್ಲಿ ಅವುಗಳ ಪರಿಣಾಮ ಇಂತಹ ವಿಚಾರವನ್ನು ಸಾಹಿತ್ಯದಲ್ಲಿ ಹುಡುಕುವ ಪ್ರಕ್ರಿಯೆ ಉಂಟಾಗಿದೆ. ಸಾಹಿತ್ಯವು ಜೀವನದ ದೃಷ್ಟಿಕೋನದ ಜೊತೆ ಬದುಕಿನ ಪ್ರತಿಬಿಂಬದಂತೆ ಕಾರ್ಯನಿರ್ವಹಿಸುತ್ತದೆ ಎಂದು ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಾದ ಡಾ. ಎನ್.ಆರ್.ಲಲಿತಾಂಬ ಅಭಿಪ್ರಾಯ ಪಟ್ಟರು.

    ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಗುರುವಾರ ಹಮ್ಮಿಕೊಂಡಿದ್ದ ದಿ. ಗುಬ್ಬಿ ಬೊಮ್ಮಣ್ಣಯ್ಯ ಸ್ಮಾರಕ ಹಳಗನ್ನಡ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.


    Provided by
    Provided by

    ಹಳಗನ್ನಡ ಸಾಹಿತ್ಯದಲ್ಲಿ ಪ್ರಮುಖವಾಗಿ ನೈತಿಕ ಮತ್ತು ನಾಗರಿಕ ಜೀವನ ದರ್ಶನ ತತ್ವಗಳು, ಯಾವುದು ಹಿತ ಯಾವುದು ಅಹಿತ ಎಂಬುದನ್ನು ಕಾಣಬಹುದು. ಮಾನವನು ವೈರಾಗ್ಯ, ಮೋಹ, ದ್ವೇಷವನ್ನು ತ್ಯಜಿಸಿ ಆತ್ಮಶುದ್ಧಿ, ತ್ಯಾಗ, ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು ಎಂದರು.

    ಆದಿಪುರಾಣ, ವಿಕ್ರಮಾರ್ಜುನ ವಿಜಯ, ಕವಿರಾಜಮಾರ್ಗ ಇಂತಹ ಮಹಾನ್ ಕಾವ್ಯಗಳಲ್ಲಿ ನ್ಯಾಯ, ಧರ್ಮ, ರಾಜಸೇವೆ, ತ್ಯಾಗ, ಬಲಿದಾನ, ಕರ್ತವ್ಯ ಪ್ರಜ್ಞೆ, ಮತ್ತು ಲೌಕಿಕ ವಿಚಾರಗಳನ್ನು ಕಾಣಬಹುದು. ಹಳಗನ್ನಡದ ಕವಿ ಆದಿನಾಥನ ಪ್ರಕಾರ ಭೋಗ ಎನ್ನುವುದು ಎಂದಿಗೂ ಶಾಶ್ವತವಲ್ಲ ಎಂದರು.

    ಶಿಸ್ತಿನ ಮೌಲ್ಯವನ್ನು ಹಳಗನ್ನಡ ಸಾಹಿತ್ಯವು ಎತ್ತಿ ಹಿಡಿಯುತ್ತಿತ್ತು. ಲೋಭ ಮತ್ತು ಭಯ ಪಾಪವನ್ನು ಅಂಟಿಸಿಕೊಂಡು ಬರುತ್ತವೆ. ಆದ್ದರಿಂದ ಸರಿಯಾದ ಮಾರ್ಗವನ್ನು ಇಂದಿನ ಯುವಜನತೆ ತುಳಿಯಬೇಕು. ಪಾಪದ ಲೇಪವಿಲ್ಲದ ಪಯಣ ನಮ್ಮದಾಗಬೇಕು ಎಂದರು.

    ವಿದ್ವಾಂಸ ಡಾ. ಎಸ್. ಪಿ. ಪದ್ಮಪ್ರಸಾದ್ ಮಾತನಾಡಿ, ಅನುಭವ ಮತ್ತು ತಾತ್ವಿಕತೆಗಳು ಮನುಷ್ಯನ ಜೀವನವನ್ನು ಪ್ರಭಾವಿಸುತ್ತವೆ. ಹಳಗನ್ನಡ ಸಾಹಿತ್ಯದಂತೆ ಹರಿಕಥೆ, ಗಮಕ, ಜಾನಪದ, ಪ್ರವಚನಕಾರರು ಜೀವನ ದರ್ಶನಕ್ಕೆ ಅನುಗುಣವಾಗಿ ತಮ್ಮ ವಿಚಾರಗಳನ್ನು ತಿಳಿಸುತ್ತಿದ್ದರು. ಸಾಹಿತ್ಯದ ಕೃತಿಗಳು ಅವರ ಪಾತ್ರ ವಾತಾವರಣ ದರ್ಶನವನ್ನು ಕಟ್ಟುಕೊಡುತ್ತಿದ್ದವು ಎಂದರು.

    ಹಳಗನ್ನಡದ ವಿಡಂಬನ ಕಾವ್ಯಗಳಲ್ಲಿ ನಯಸೇನ ಇನ್ನಿತರ ಕವಿಗಳು ಬದುಕಿನ ಲೌಕಿಕ ಜವಾಬ್ದಾರಿಗಳು, ಸಾಮಾಜಿಕ ವಿಚಾರಗಳನ್ನು ಚಿತ್ರಿಸಿದ್ದಾರೆ. ಜೀವನವು ಒಂದು ತಪಸ್ಸಿನಂತೆ, ಸತತ ಪ್ರಯತ್ನದಿಂದ ಪರಮೋಚ್ಛ ಸ್ಥಾನವನ್ನು ಪಡೆಯಲು ಸಾಧ್ಯ ಎಂಬ ಚಿಂತನೆಯನ್ನು ವಿಸ್ತರಿಸಿದ್ದಾರೆ ಎಂದರು.

    ಅಧ್ಯಕ್ಷೀಯ ಮಾತುಗಳನ್ನಾಡಿದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ, ಸಾಹಿತ್ಯದ ಮನೋಧರ್ಮವೇ ಎಲ್ಲವನ್ನು ಬೆಸೆಯುವುದು. ಸಾಹಿತ್ಯವು ತಾತ್ವಿಕ ಚೌಕಟ್ಟನ್ನು ನೀಡುತ್ತದೆ. ಜೀವನದಲ್ಲಿ ಹಲವಾರು ಸಮಸ್ಯೆಗಳಿಗೆ ಸಾಹಿತ್ಯವು ಪರಿಹಾರ ನೀಡುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಗುಬ್ಬಿ ಬೊಮ್ಮಣ್ಣಯ್ಯ ಸ್ಮಾರಕದತ್ತಿ ನಿಧಿ ಸಂಸ್ಥಾಪಕರಾದ ಜೆ.ಬಿ. ಶ್ರೇಯಾಂಸ ಕುಮಾರ್ ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ತುಮಕೂರು | ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

    December 18, 2025

    80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ

    December 17, 2025

    ಗುಡ್ಡ ಗಾಡು ಓಟದ ಸ್ಪರ್ಧೆ: ಡಿ.18ರಂದು ಆಯ್ಕೆ ಪ್ರಕ್ರಿಯೆ

    December 17, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಗುಬ್ಬಿ

    ಗುಬ್ಬಿ: ಹೋಟೆಲ್‌ ಗೆ ಊಟಕ್ಕೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ: ಪ್ರಕರಣ ದಾಖಲು

    December 18, 2025

    ಗುಬ್ಬಿ: ತಾಲ್ಲೂಕಿನ ಎಂ.ಎಚ್. ಪಟ್ಟಣ ಗೇಟ್ ಬಳಿ ಇರುವ ಹೋಟೆಲ್‌ ವೊಂದರಲ್ಲಿ ಪರಿಶಿಷ್ಟ ಜಾತಿಯ ಯುವಕನ ಮೇಲೆ ಹಲ್ಲೆ ನಡೆಸಿರುವ…

    ಮಧುಗಿರಿ: ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ರೈತ ಸಾವು

    December 18, 2025

    ಕರ್ನಾಟಕ ದ್ವೇಷ ಅಪರಾಧಗಳ ತಡೆ ವಿಧೇಯಕ–2025ಕ್ಕೆ ಅನುಮೋದನೆ: ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದ ಬಿಜೆಪಿ

    December 18, 2025

    ಬೀದರ್ | ತಾಯಿ, ಮಗು ನಾಪತ್ತೆ: ಪತ್ತೆಗಾಗಿ ಮನವಿ

    December 18, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.