ಬೆಳಗಾವಿ: ಬಸ್ ಗಳಲ್ಲಿ ಪ್ರಯಾಣದ ವೇಳೆ ಕಿಟಕಿ ಸೀಟ್ ಬಳಿ ಕುಳಿತುಕೊಳ್ಳುವುದು ಎಲ್ಲರಿಗೂ ಇಷ್ಟವಾದ ವಿಚಾರ, ಇಲ್ಲೊಂದು ಕಡೆ ಕಿಟಕಿ ಪಕ್ಕ ಸೀಟಿಗಾಗಿ ಇಬ್ಬರ ನಡುವೆ ನಡೆದ ಜಗಳ, ಚಾಕುವಿನಿಂದ ಇರಿಯುವ ಮಟ್ಟಕ್ಕೆ ಬೆಳೆದಿದೆ.
ಹೌದು… ಬೆಳಗಾವಿಯಲ್ಲಿ ಈ ಘಟನೆ ನಡೆದಿದ್ದು, ಕಿಟಕಿ ಪಕ್ಕದ ಸೀಟ್ ಗಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಹತ್ಯೆ ಯತ್ನದಲ್ಲಿ ಅಂತ್ಯಗೊಂಡಿದೆ.
ಪಂಚಬಾಳೇಕುಂದ್ರಿ ಗ್ರಾಮದಿಂದ ಸಿಟಿ ಬಸ್ ಟರ್ಮಿನಲ್ ಗೆ ಬರುತ್ತಿದ್ದ ಬಸ್ ನಲ್ಲಿ ಯುವಕರ ನಡುವೆ ಕಿಟಕಿ ಪಕ್ಕದ ಸೀಟ್ ಗಾಗಿ ಜಗಳ ನಡೆದಿದೆ. ಯುವಕನೋರ್ವ ಮತ್ತೊಬ್ಬ ಯುವಕನಿಗೆ ಚಾಕು ಇರಿದಿದ್ದಾನೆ.
ಗ್ರಾಮದ ಮಜ್ಜು ಸನದಿ(20) ಎಂಬ ಯುವಕನ ಎದೆ ಭಾಗಕ್ಕೆ ಯುವಕರ ಗ್ಯಾಂಗ್ ಒಂದು ಚಾಕು ಇರಿದು ಪರಾರಿ ಆಗಿದೆ. ಮಜ್ಜು ಸನದಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW