nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ ಲೈನ್ ಅರ್ಜಿ ಆಹ್ವಾನ

    May 28, 2026

    ಸಿದ್ದರಬೆಟ್ಟ: ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ

    May 28, 2026

    ಜೂನ್ 2ರಿಂದ ಜನ ಶಿಕ್ಷಣ ಸಂಸ್ಥೆಯಿಂದ ಉಚಿತ ಕೌಶಲ್ಯ ತರಬೇತಿ: ಅರ್ಜಿ ಆಹ್ವಾನ

    May 28, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ ಲೈನ್ ಅರ್ಜಿ ಆಹ್ವಾನ
    • ಸಿದ್ದರಬೆಟ್ಟ: ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ
    • ಜೂನ್ 2ರಿಂದ ಜನ ಶಿಕ್ಷಣ ಸಂಸ್ಥೆಯಿಂದ ಉಚಿತ ಕೌಶಲ್ಯ ತರಬೇತಿ: ಅರ್ಜಿ ಆಹ್ವಾನ
    • ಪಲ್ಸ್ ಪೋಲಿಯೋ ಲಸಿಕೆ: ತುಮಕೂರಿನಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿ, ಅಲೆಮಾರಿ ಸಮುದಾಯ ಕೇಂದ್ರೀಕರಿಸಿ: ಜಿಲ್ಲಾಧಿಕಾರಿ ಸೂಚನೆ
    • ರಾಜ್ಯದ ಮುಂದಿನ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಬಹುತೇಕ ಖಚಿತ? 
    • ವಿಶ್ವ ಪರಿಸರ ದಿನಾಚರಣೆ ಬಗ್ಗೆ ರೀಲ್ಸ್ ಸ್ಪರ್ಧೆ: ನೀವೂ ಭಾಗವಹಿಸಬಹುದು
    • ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ
    • ತುಮಕೂರು: ನಿರುದ್ಯೋಗಿ ಯುವಕ/ಯುವತಿಯರಿಗೆ ರುಡ್‌ ಸೆಟ್‌ ನಿಂದ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿ; ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಕಾರ್ಯಕರ್ತರ ಪಕ್ಷ: ನಿಖಿಲ್ ಕುಮಾರಸ್ವಾಮಿ
    ಕೊರಟಗೆರೆ June 19, 2025

    ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಕಾರ್ಯಕರ್ತರ ಪಕ್ಷ: ನಿಖಿಲ್ ಕುಮಾರಸ್ವಾಮಿ

    By adminJune 19, 2025No Comments3 Mins Read
    nikhil kumaraswamy

    ತುಮಕೂರು, ಕೊರಟಗೆರೆ : ರಾಜ್ಯದ ಜನ ಕಾಂಗ್ರೆಸ್ ಆಡಳಿತದಿಂದ ರೋಸಿಹೋಗಿದ್ದಾರೆ. ದೇವೇಗೌಡರ ಮಾರ್ಗದರ್ಶನದಲ್ಲಿ, ಕುಮಾರಣ್ಣನವರ ನಾಯಕತ್ವದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು ನಿಮ್ಮ ಜೊತೆ ನಾನಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

    ಜನರೊಂದಿಗೆ ಜನತಾದಳ ಬುಧವಾರ ಮೂರನೇ ದಿನದ ರಾಜ್ಯ ಪ್ರವಾಸ ಬೈಕ್ ರ್ಯಾಲಿ ಮೂಲಕ ಕೊರಟಗೆರೆ  ಕ್ಷೇತ್ರದಲ್ಲಿ “ಜನರೊಂದಿಗೆ ಜನತಾದಳ” ಮಿಸ್ಡ್ ಕಾಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.


    Provided by
    Provided by

    ಸುಧಾಕರ್ ಲಾಲ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಪೂರಕವಾಗಿ ಕೆಲಸ ಮಾಡಿ ಮಾಡುತ್ತಿದ್ದೇವೆ. ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಕಾರ್ಯಕರ್ತರ ಪಕ್ಷ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಜತೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.

    ಪ್ರವಾಸ ಅವಧಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆ ಮತ್ತು ಪ್ರತಿ ತಾಲ್ಲೂಕಿನ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಸಾಮಾನ್ಯ ಜನರನ್ನ ಭೇಟಿ ಮಾಡಳಿದ್ದೇನೆ. ಪಕ್ಷದ ಬಗ್ಗೆ ಕಾರ್ಯಕರ್ತರು ಹೊಂದಿರುವ ಭಾವನೆಯನ್ನು ಅರ್ಥಮಾಡಿಕೊಳ್ಳಳಿದ್ದೇನೆ. ಪಕ್ಷವನ್ನು ಮತ್ತೆ ತಳ ಮಟ್ಟದಿಂದ  ಗಟ್ಟಿಗೊಳಿಸಲು ಏನು ಮಾಡಬೇಕೆಂದು ಜನರಿಂದ ಕೇಳಲಿದ್ದೇನೆ ಎಂದರು.

    ನನ್ನ ರಾಜ್ಯ ಪ್ರವಾಸ ವೇಳೆ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ದದಲ್ಲಿನ ಸ್ಥಳೀಯ ಸಮಸ್ಯೆ ಆಲಿಸುತ್ತಿದ್ದು, ಕಾರ್ಯಕರ್ತರ ಜತೆ ಬೆರೆತು ಅದಕ್ಕೆ ಪರಿಹಾರ ಉತ್ತರವನ್ನು ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆ ಎಂದು ತಿಳಿಸಿದರು.

    58 ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ನಮ್ಮ ಪಕ್ಷವನ್ನು ಹಲವು ದಶಕಗಳಿಂದ ಕಟ್ಟಿ ಬೆಳೆಸಿದ ದೇವೇಗೌಡರ ಕಾಲಘಟ್ಟದ ಸಾಕಷ್ಟು ಹಿರಿಯ ನಾಯಕರಿದ್ದೀರಾ. ನಿಮ್ಮ ಸಂಪರ್ಕ ಬಯಸಿ ಪ್ರವಾಸ ಕೈಗೊಂಡಿದ್ದೇನೆ. ಜಿಲ್ಲೆಯಲ್ಲಿ ದೇವೇಗೌಡರ ಹೋರಾಟಕ್ಕೆ ಜೊತೆಯಾಗಿ ನಿಂತು ಬೆಂಬಲ ನೀಡಿದ್ದೀರಾ. ಜನತಾದಳ ಪಕ್ಷ ಮುಗಿದೆ ಹೋಯ್ತು ಅಂತ ವಿರೋಧ ಪಕ್ಷದವರು ಹೇಳುತ್ತಿದ್ದಾರೆ.. ಆದರೆ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಕ್ಕಿಂತ ಹೆಚ್ಚಿನ ವೋಟಿಂಗ್ ಪರ್ಸೆಂಟೇಜ್ ಅನ್ನ ಜೆಡಿಎಸ್ ಪಕ್ಷಕ್ಕೆ ಕೊಟ್ಟಿದ್ದೀರ ನಿಮ್ಮ ಋಣ ತೀರಿಸಲು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದರು.

    ಡಿಸೆಂಬರ್ ನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಬರಲಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷದಲ್ಲಿ ಬೇರು ಇದ್ದಂತೆ.ಪಕ್ಷ ಎಲ್ಲಾದಕ್ಕೂ ತಯಾರಿ ಮಾಡಿಕೊಳ್ಳಬೇಕು. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ನಾನು ಮೂರು ಬಾರಿ ಚುನಾವಣೆಯಲ್ಲಿ ಪೆಟ್ಟು ತಿಂದಿರಬಹುದು. ನಾನು ಒಳ್ಳೆ ಉದ್ದೇಶದಿಂದ ನಾನು ಪ್ರವಾಸಕ್ಕೆ ಬಂದಿದ್ದೇನೆ ನಿಮ್ಮ ಪ್ರೀತಿ ಸಹಕಾರ ಇರಲಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

    ದೇವೇಗೌಡರ ಮಾರ್ಗರ್ದಶದಲ್ಲಿ ಪಕ್ಷವನ್ನು ಬೇರು ಮಟ್ಟದಲ್ಲಿ ಪ್ರಾದೇಶಕ ಪಕ್ಷವನ್ನು ಕಟ್ಟಿಬೆಳೆಸಬೇಕು ಅಂತ ಹೊರಟ್ಟಿದ್ದೇನೆ.ರಾಜ್ಯದ ಸಮಸ್ಯೆಗಳನ್ನ ಅರ್ಥೈಸಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು‌ ಹೊರಟ್ಟಿದ್ದೇನೆ. ಕಾಂಗ್ರೆಸ್ ಪಕ್ಷದ ಎರಡು ವರ್ಷದ ಆಡಳಿತ ನೋಡಿದ್ದೀರಾ.? ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ ಜನಪರ ಕಾರ್ಯಕ್ರಮ ಕೊಡಬಹುದಿತ್ತು. ಆದರೆ ಸಾಲದ ಹೊರೆ ಹೊರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕುಮಾರಸಣ್ಣ ಅವರು ಮುಖ್ಯಮಂತ್ರಿ ಆಗಿದ್ದ 14 ತಿಂಗಳಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಿದ್ದಾರೆ.ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಪರಿಸ್ಥಿತಿ ಏನಾಗಿದೆ.25 ಸಾವಿರ ಇದ್ದ ಟಿಸಿ ಬೆಲೆ 3-4 ಲಕ್ಷಕ್ಕೆ ಏರಿದೆ. ಪ್ರಾದೇಶಿಕ ಪಕ್ಷದ ಅಸ್ತಿತ್ವ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.

    ಹಿರಿಯರು, ಯುವಕರು ಹಾಗೂ ತಾಯಂದಿರು ಜೆಡಿಎಸ್ ಪಕ್ಷವನ್ನು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಬೇಕು. ನನ್ನ ಮನವಿಗೆ ಸ್ಪಂದಿಸಿದ ಕಾರ್ಯಕರ್ತ ಬಂಧುಗಳು ಬೂತ್ ಮಟ್ಟದಲ್ಲಿ ತಂಡಗಳನ್ನು ಕಟ್ಟಿಕೊಂಡು ಪಕ್ಷ ಸಂಘಟಿಸುವ ಭರವಸೆ ನೀಡಿದರು

    ನನ್ನ ಪ್ರೀತಿಯ ಯುವಕರು,  ಹಿರಿಯರ ಮಾರ್ಗದರ್ಶನ ಪಡೆಯಬೇಕು ಆಗ ಮಾತ್ರ ನಮಗೆ ಅಧಿಕಾರ ದೊರೆಯಲು ಸಾಧ್ಯ,  ನಾವೆಲ್ಲರೂ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದು ಯುವ ಸಮುದಾಯಕ್ಕೆ ಅವರು ಕರೆನೀಡಿದರು.

    ಇದೇ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರರಾದ ತಿಪ್ಪೇಸ್ವಾಮಿ ರವರು, ಮಾಜಿ ಶಾಸಕರಾದ  ಪಿ.ಆರ್ ಸುಧಾಕರ್ ಲಾಲ್ ರವರು, ಜಿಲ್ಲಾಧ್ಯಕ್ಷರಾದ  ಆರ್.ಸಿ.ಆಂಜಿನಪ್ಪ ರವರು, ಮಹಿಳಾ ಅಧ್ಯಕ್ಷರಾದ ಶ್ರೀಮತಿ ಸುಮಾ ರವರು, ತಾಲ್ಲೂಕು ಅಧ್ಯಕ್ಷರಾದ  ಕಾಮರಾಜ್ ರವರು, ಕಾರ್ಯಧ್ಯಕ್ಷರಾದ ಲಕ್ಮೀಶ್ ರವರು, ಮುಖಂಡರಾದ ಶಿವರಾಮೇಗೌಡರು ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಕಾರ್ಮಿಕರು ಇಲಾಖೆಯ ಸೌಲಭ್ಯ ಬಳಸಿಕೊಳ್ಳಬೇಕು: ಶ್ಯಾಮಣ್ಣರೆಡ್ಡಿ

    May 27, 2026

    ಮುಂಗಾರು ಹಿನ್ನೆಲೆ ರಸಗೊಬ್ಬರ ಅಂಗಡಿಗಳಿಗೆ ತಹಶೀಲ್ದಾರ್ ಅನಿರೀಕ್ಷಿತ ಭೇಟಿ: ರೈತರಿಗೆ ಕೊರತೆಯಾಗದಂತೆ ಸ್ಟಾಕ್ ಪರಿಶೀಲನೆ

    May 27, 2026

    ಕೊರಟಗೆರೆಯಲ್ಲಿ ಮಯೂರ ಬೇಕರಿಗೆ ಅಧಿಕಾರಿಗಳ ದಿಢೀರ್ ದಾಳಿ:  ಗೃಹ ಬಳಕೆ ಸಿಲಿಂಡರ್ ಬಳಕೆ, ಅವಧಿ ಮೀರಿದ ಚಾಕಲೇಟ್ ಪತ್ತೆ

    May 27, 2026

    Comments are closed.

    Our Picks

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ ಲೈನ್ ಅರ್ಜಿ ಆಹ್ವಾನ

    May 28, 2026

    ತುಮಕೂರು: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಮೆಟ್ರಿಕ್ ಪೂರ್ವ (Pre-Metric) ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ…

    ಸಿದ್ದರಬೆಟ್ಟ: ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ

    May 28, 2026

    ಜೂನ್ 2ರಿಂದ ಜನ ಶಿಕ್ಷಣ ಸಂಸ್ಥೆಯಿಂದ ಉಚಿತ ಕೌಶಲ್ಯ ತರಬೇತಿ: ಅರ್ಜಿ ಆಹ್ವಾನ

    May 28, 2026

    ಪಲ್ಸ್ ಪೋಲಿಯೋ ಲಸಿಕೆ: ತುಮಕೂರಿನಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿ, ಅಲೆಮಾರಿ ಸಮುದಾಯ ಕೇಂದ್ರೀಕರಿಸಿ: ಜಿಲ್ಲಾಧಿಕಾರಿ ಸೂಚನೆ

    May 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.