ಟೆಹ್ರಾನ್: ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮೂವರನ್ನು ಇರಾನ್ ಗಲ್ಲಿಗೇರಿಸಿದ್ದು, ಇದ್ರಿಸ್ ಅಲಿ, ಆಜಾದ್ ಶೋಜೈ ಮತ್ತು ರಸೂಲ್ ಅಹ್ಮದ್ ರಸೂಲ್ ಗಲ್ಲಿಗೇರಿಸಲಾದವರು ಎಂದು ಹೇಳಲಾಗಿದೆ.
ಈ ಮೂವರು ಶಸ್ತ್ರಾಸ್ತ್ರಗಳನ್ನು ಇರಾನ್ ಗೆ ತರಲು ಯತ್ನಿಸಿದ್ದರು. ಈ ಮೂಲಕ ಇಸ್ರೇಲ್ ಗೆ ಸಹಕಾರ ಒದಗಿಸಿದ್ದರು ಎಂದು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಮೂವರಿಗೆ ಟರ್ಕಿ ಗಡಿಯ ಸಮೀಪದ ಉರ್ಮಿಯಾದಲ್ಲಿ ಬುಧವಾರ ಮರಣದಂಡನೆ ವಿಧಿಸಲಾಗಿದೆ.
ಶಿಕ್ಷೆಗೆ ಗುರಿಯಾದ ಮೂವರು ನೀಲಿ ಜೈಲು ಸಮವಸ್ತ್ರದಲ್ಲಿರುವ ಫೋಟೋಗಳನ್ನು ಇರಾನ್ ನ ಕೋರ್ಟ್ ಹಂಚಿಕೊಂಡಿದೆ. ಇನ್ನೂ ಸಂಘರ್ಷದ ಸಮಯದಲ್ಲಿ, ಇಸ್ರೇಲ್ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಕನಿಷ್ಠ 700 ಜನರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ಜೊತೆ ಸಂಪರ್ಕದಲ್ಲಿದ್ದ ಗೂಢಚಾರಿಯನ್ನು ಸಹ ಗಲ್ಲಿಗೇರಿಸಲಾಗಿದೆ. ಸುಪ್ರೀಂ ಕೋರ್ಟ್ ಸಂಪೂರ್ಣ ವಿಚಾರಣೆ ನಡೆಸಿ ಅಪರಾಧಿಗೆ ಈ ಶಿಕ್ಷೆ ವಿಧಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW