ಪಾವಗಡ: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹೊಸಕೋಟೆ ಪಟ್ಟಣದಲ್ಲಿ ಬುಧವಾರ ರಾತ್ರಿ 8ರ ಸುಮಾರಿಗೆ ಸಂತೆ ಮೈದಾನ ಚೌಡೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದ ಬಳಿ ಕರಡಿ ಸಂಚರಿಸಿದ್ದು, ಕೆಲ ಕಾಲ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಜನರು ಗುಂಪು ಗುಂಪಾಗಿ ಮನೆಗಳಿಂದ ಹೊರ ಬಂದು ಏಕ ಕಾಲಕ್ಕೆ ಕರಡಿಯ ಗಾಬರಿಗೊಂಡು ಎತ್ತ ಹೋಗಲು ಸಾಧ್ಯವಾಗದೆ ಹಳೆಯ ಮನೆಯೊಳಗಡೆ ನುಗ್ಗಿತ್ತು.
ಕೊನೆಗೂ ಆತಂಕದ ನಡುವೆಯೂ ಜನರು ಕರಡಿಯನ್ನು ಊರಿನಿಂದಾಚೆಗೆ ಓಡಿಸಲು ಯಶಸ್ವಿಯಾಗಿದ್ದಾರೆ. ಸದ್ಯ ಕರಡಿ ಆಗಮನದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈ ಎನ್ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC