ಸರಗೂರು: ಸರ್ಕಾರದ ವತಿಯಿಂದ ಚಿಕ್ಕದೇವಮ್ಮನ ಬೆಟ್ಟವನ್ನು ಪ್ರವಾಸಿ ತಾಣವನ್ನು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಮಾಡಿದ್ದಾನೆ ಎಂದು ಅರಣ್ಯ ಮತ್ತು ವಿಹಾರ ಧಾಮಗಳ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ನಾಡ ದೇವತೆ ಚಿಕ್ಕ ದೇವಮ್ಮನ ತಾಯಿ ಬೆಟ್ಟಕ್ಕೆ ತೆರಳಿ ಆಷಾಢ ಶುಕ್ರವಾರದಂದು ಚಿಕ್ಕದೇವಮ್ಮನ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಸರ್ಕಾರ ಹಲವು ನಿರ್ಧಾರಗಳನ್ನು ತೆಗೆದುಕೊಂಡು ಕಳೆದ ಬಾರಿ ಸಮ್ಮಿಶ್ರ ಸರ್ಕಾರ ಇದ್ದಿದ್ದ ಸಮಯದಲ್ಲಿ ಬೆಟ್ಟಕ್ಕೆ 5 ಕೋಟಿ ಅನುದಾನವನ್ನು ಹಾಕಿ, ರಸ್ತೆಗೆ 2 ಕೋಟಿ ಅನುದಾನದಲ್ಲಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅದರಂತೆ ಸುಮಾರು 7 ಕೋಟಿ ಅನುದಾನವನ್ನು ನನ್ನ ಅವಧಿಯಲ್ಲಿ ಬಳಸಿ ಬೆಟ್ಟದ ಅಭಿವೃದ್ಧಿಗೆ ಜೊತೆಯಲ್ಲಿ ಪಾಕಶಾಲೆ, ತಡೆಗೋಡೆ, ರಸ್ತೆ, ಮೆಟ್ಟಿಲು, ಮಾಡಿಕೊಡುವ ವ್ಯವಸ್ಥೆಯನ್ನು ಮಾಡಿಕೊಡುವ ಕೆಲಸ ನನ್ನ ಅವಧಿಯಲ್ಲಿ ಮಾಡಿದ್ದಾನೆ ಎಂದು ಹೇಳಿದರು.
ನಮ್ಮ ತಂದೆ ಶಾಸಕರಾದ ಸಂದರ್ಭದಲ್ಲಿ ಚಿಕ್ಕದೇವಮ್ಮ ಬೆಟ್ಟದ ತಾಯಿ ದೇವಸ್ಥಾನ ಹಳೆದಾಗಿತ್ತು. ದೇವಸ್ಥಾನ ನಿರ್ಮಾಣ ಮಾಡಲು ಎಲ್ಲಾರೂ ಸಹಕಾರದೊಂದಿಗೆ ಮಾಡಲಾಯಿತು ಎಂದರು.
ಚಾಮುಂಡಿ ಬೆಟ್ಟದಲ್ಲಿ ತಾಯಿ ಮೈಸೂರಿನಲ್ಲಿ ನೆಲೆಸಿದ್ದಾಳೆ. ಅದರಂತೆ ಚಿಕ್ಕ ದೇವಮ್ಮನ ಬೆಟ್ಟದಲ್ಲಿ ತಾಯಿ ದೇವಸ್ಥಾನವನ್ನು ಪ್ರವಾಸಿ ತಾಣ ಮಾಡಲು ನನಗೆ ಧೈರ್ಯ ಶಕ್ತಿ ತಾಲೂಕಿನ ಜನತೆಯ ಆಶೀರ್ವಾದ ಇದೆ. ಇನ್ನೂ ಸಾಕಷ್ಟು ಅಭಿವೃದ್ಧಿ ಮಾಡಲು ಸರ್ಕಾರ ಮಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಅನುದಾನವನ್ನು ತಾಲೂಕಿಗೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ ಎಂದರು.
ಎಚ್.ಡಿ.ಕೋಟೆ ಕ್ಷೇತ್ರದ ಸರಗೂರು ತಾಲೂಕಿನಲ್ಲಿ ಇರುವ ಪ್ರಸಿದ್ಧವಾದ ತಾಣವಾದ ನಾಡದೇವತೆಯಾದ ಚಿಕ್ಕದೇವಮ್ಮ ಬೆಟ್ಟದ ತಾಯಿಯ ಆಶೀರ್ವಾದ ಪಡೆಯಲು ವಿವಿಧ ಭಾಗಗಳಿಂದ ಭಕ್ತರು ಬರುತ್ತಿದ್ದಾರೆ. ಆದ್ದರಿಂದ ಬೆಟ್ಟದಲ್ಲಿ ಕುಡಿಯುವ ನೀರು, ಪಾರ್ಕಿಂಗ್ ಇನ್ನೂ ಇತರೆ ಸೌಲಭ್ಯಗಳು ಮಾಡಲಾಗಿದೆ. ಬೆಟ್ಟದಲ್ಲಿ ಪಾಕಶಾಲೆ ಕಾಮಗಾರಿ ನಡೆಯುತ್ತಿದೆ. ಅದನ್ನು ಶೀಘ್ರದಲ್ಲೇ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮೊದಲು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಬೇಕು ಆದರೆ ಅವರು ಮೈಸೂರಿನ ಕೆಆರ್ಎಸ್ ಜಲಾಶಯಕ್ಕೆ ಇತ್ತಿಚೆಗೆ ಬಾಗಿನ ಅರ್ಪಣೆ ಮಾಡಿದ್ದಾರೆ ಎಂದು ಜನರು ಆಕ್ರೋಶ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಆರ್ಎಸ್ ಜಲಾಶಯ 45 ವರ್ಷಗಳಿಂದ ಇದೇ ಮೊದಲ ಬಾರಿಗೆ ಮುಂಚಿತವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದ್ದಾರೆ ಅಷ್ಟೇ ಇನ್ನೂ ಯಾವುದೇ ವಿಚಾರ ಇಲ್ಲ ಎಂದರು.
ಇದೆ ತಿಂಗಳು 16–17 ರಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಾಗುವುದು. ಅದರಂತೆ ಎಲ್ಲಾ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ ಕಬಿನಿ ಜಲಾಶಯದ ಸ್ವಚ್ಚತೆ ಮತ್ತು ಕಾರ್ಯಕ್ರಮದ ತಿಳಿಸಿದ್ದಾನೆ ಎಂದು ತಿಳಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ರವರು ಸ್ವರ್ಧೆ ಮಾಡಿದರು. ಆದರೆ ಚುನಾವಣೆ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ತಾಲೂಕಿನಿಂದ ಒಬ್ಬರು ಸ್ವರ್ಧೆ ಮಾಡಿದ್ದಾರೆ. ಆದರೆ ಇಬ್ಬರಿಗೂ ಸಮಬಲ ಬಂದಿದ್ದೆ. ಆದರೆ ನಾನೇ ನೂರಕ್ಕೆ ನೂರರಷ್ಟು ನಾನೇ ಗೆಲ್ಲುವುದು ಎಂದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಶ್ರೀನಿವಾಸ, ತಾಪಂ ಮಾಜಿ ಅಧ್ಯಕ್ಷ ಹಾಗೂ ಅಭಾವೀಲಿಂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ತಂಬಾಕು ಮಂಡಳಿ ಕ್ರಾಪ್ ಕಮಿಟಿ ಸದಸ್ಯ ಪರಶಿವಮೂರ್ತಿ, ಜಿಪಂ ಸದಸ್ಯ ಪುರದಕಟ್ಟೆ ಬಸವರಾಜು, ಅಭಾವೀಲಿಂ ಯುವ ಸಮಿತಿ ಅಧ್ಯಕ್ಷ ಲಂಕೆ ಪಿ ನಂದೀಶ್, ಕಾಂಗ್ರೆಸ್ ಪಕ್ಷದ ಮುಖಂಡರು ಜಕ್ಕಹಳ್ಳಿ ಮಲ್ಲೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಎಸ್. ಮರಿದೇವಯ್ಯ, ಪುರಸಭೆ ಸದಸ್ಯ ಪ್ರೇಮ್, ಬೆಟ್ಟದ ಪಾರುಪತ್ತೆದಾರು ಮಹದೇವಸ್ವಾಮಿ, ವನಸಿರಿ ಉಮೇಶ್, ರವಿ ನೆನಪು, ದರ್ಶನ್, ಕೃಷ್ಣ, ಮಹದೇವ, ಮಸಹಳ್ಳಿ ನವೀನ್, ಸುರೇಶ್, ಶಶಿ ಪಾಟೀಲ್ ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC