ಸರಗೂರು: ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ನಾವುಗಳು ಶಿವಾರ್ಚಕ ಎಂದು ಜಾತಿ ಗಣತಿಯಲ್ಲಿ ಬರೆಸಬೇಕು ಎಂದು ಶಿವಾರ್ಚಕ ಸಂಘದ ರಾಜ್ಯ ಅಧ್ಯಕ್ಷ ಹಾಗೂ ಸಂಸ್ಕೃತ ಪಾಠಶಾಲೆ ಶೈವಾಗಮ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಎಂ. ಮಲ್ಲಣ್ಣ ಸಮಾಜದವರಿಗೆ ಮನವರಿಕೆ ನೀಡಿದರು.
ಪಟ್ಟಣದ ಜೈನ ಭವನದಲ್ಲಿ ಶನಿವಾರದಂದು ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಶಿವಾರ್ಚಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂಘದ 2024–25 ನೇ ಸಾಲಿನ 10 ನೇ ವರ್ಷದ ವಾರ್ಷಿಕ ಸಭೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮೀಕ್ಷೆ ಮಾಡುವ ಸಮಯದಲ್ಲಿ ವೀರಶೈವ, ಲಿಂಗಾಯತ ಎಂದು ಬರಿಸಿ ಎಂದು ಹೇಳುತ್ತಾರೆ. ಆದರೆ ನಾವುಗಳು ಅದನ್ನು ಬದಿಗೆ ಸರಿಸಿ ಶಿವಾರ್ಚಕ ಎಂದು ಅವರವರ ಮಾತಿಗೆ ಕಡೆಗೆ ಹೋಗದೆ ಶಿವಾರ್ಚಕ ಎಂದು ಹೇಳಿ ಬರೆಸಬೇಕು ತಿಳಿಸಿದರು.
ಈ ಸಮಾಜ ಅಸ್ತಿತ್ವಕ್ಕೆ ಬರಲು ಸುಮಾರು ವರ್ಷಗಳ ಕಾದಿದೆ. ಶಿವಾರ್ಚಕ ಸಮಾಜ ಏಳು ಜಿಲ್ಲೆಯಲ್ಲಿ ಮಾತ್ರ ಇದೆ. ಈ ಸಮಾಜ 1915 ರಲ್ಲಿ ಪ್ರಾರಂಭವಾಗಿದ್ದು, 35 ವರ್ಷದವರೆಗೆ ಸಮಾಜ ದೇವರ ಪೂಜೆ ಪುನಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ದೇವರ ಪೂಜೆ ಮಾಡಿಕೊಂಡೆ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಇವತ್ತುವರಗೆ ಬರುತ್ತಿದೆ. ಆದರಿಂದ ಸಮಾಜದಲ್ಲಿ ಹೆಚ್ಚು ಅವಕಾಶಗಳು ಒದಗಿಸಲು ಮುಂದಾಗಿಲ್ಲ. ನಾವುಗಳು ಒಗ್ಗಟ್ಟಿನಿಂದ ನಮ್ಮ ಸಮಾಜವನ್ನು ಶಿವಾರ್ಚಕ ಸಮಾಜವನ್ನು ಕಟ್ಟಿಕೊಳ್ಳಲು ಜಾತಿ ಗಣತಿಯಲ್ಲಿ ನಮೂದಿಸಿಕೊಂಡು ಶಿವಾರ್ಚಕ ಸಮಾಜ ಎಂದು ಪರಿಗಣಿಸಲಾಗುವುದು. ನಾವುಗಳು ವೀರಶೈವ ಲಿಂಗಾಯತ ಹೇಳುವ ಬದಲು ಶಿವಾರ್ಚಕ ಸಮಾಜ ಧೈರ್ಯದಿಂದ ಹೇಳಬೇಕು ಎಂದು ಹೇಳಿದರು.
ನಂತರ ಪ್ರಾಸ್ತಾವಿಕ ನುಡಿ ಬೆಟ್ಟದ ಪಾರುಪತ್ತೇದಾರು ಶಾಂತಿಪುರ ಮಹದೇವಸ್ವಾಮಿ ಮಾತನಾಡಿ, ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಶಿವಾರ್ಚಕ ಸಂಘದವರು ಪ್ರತಿಯೊಂದು ಸಭೆಗಳು ಹಾಗೂ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತಾರೆ. ಸಮಾಜದಲ್ಲಿ ಶಿವಾರ್ಚಕರು ಸಂಸ್ಕಾರ ಇದರೆ ಜೀವನವನ್ನು ಆಸ್ತಿಯಾನ್ನಗಿ ಮಾಡಿಕೊಂಡು ಜೀವನವನ್ನು ಮಾಡಬಹುದು ಎಂದು ಒಂದು ಮಲ್ಲಣ್ಣ ರವರು ಹೇಳಿದ ಮಾತು ಎಂದರು.
ಈ ಸಂದರ್ಭದಲ್ಲಿ ಶಿವಾರ್ಚಕ ಸಮಾಜದ SSLC ಮತ್ತು PUC ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘದ ಗೌರವಾಧ್ಯಕ್ಷ ಅಂಬಳೆ ಶಿವಣ್ಣ,ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಶಿವಾರ್ಚಕ ಸಂಘದ ಅಧ್ಯಕ್ಷ ಕೆ.ಜಿ.ಯಶ್ವಂತ್, ಬೆಟ್ಟದ ಪಾರುಪತ್ತೆದಾರು ಮಹದೇವಸ್ವಾಮಿ, ರವಿಶಾಸ್ತ್ರಿ, ಸಂಘದ ಗೌರವಾಧ್ಯಕ್ಷರು ನಾಗರಾಜಪ್ಪಕಲ್ಲಂಬಾಳು, ನಾಗರಾಜು ಸಿ., ಸುಬ್ಬಣ್ಣ, ಸಂಘದ ಉಪಾಧ್ಯಕ್ಷ ಪ್ರಸನ್ನ ಕುಮಾರ್, ಕಾರ್ಯದರ್ಶಿ ಕುಂದೂರು ವೀರಣ್ಣ, ಖಜಾಂಚಿ ಕುಂದೂರು ಶಿವಕುಮಾರ್, ಸಲಹೆಗಾರರು ನಂಜುಂಡಸ್ವಾಮಿ, ಎಂ.ಎಸ್.ಜಗದೀಶ್, ಸಂಘದ ನಿರ್ದೇಶಕರು ರವಿಕುಮಾರ್,ರಾಜಜ್ಞಾಪಿ, ನಂಜಪ್ಪ, ಮಹದೇವಪ್ಪ, ಎನ್ ಚಂದ್ರಪ್ಪ, ಸುರೇಶ್, ಸತೀಶ್,ನೀಲಕಂಠ, ನಟರಾಜು, ಸೋಮಣ್ಣ, ಮೇಘಾವತಿರಘುಕೀರ್ತಿ ಇನ್ನೂ ಮುಖಂಡರು ಸೇರಿದಂತೆ ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC