ಸರಗೂರು: ಉತ್ತಮ ಸಮಾಜಕ್ಕಾಗಿ ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಗೆಜ್ಜೆಗಾರ ಸಮಿತಿ ರಾಜ್ಯ ಕಾರ್ಯದರ್ಶಿ ಗೋಳೂರು ಸ್ನೇಕ್ ಬಸವರಾಜು ಎಂದರು.
ತಾಲೂಕಿನ ಹಾದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ದಂದು ರಾಜ್ಯ ಗೆಜ್ಜೆಗಾರ ರಕ್ಷಣಾ ಸಮಿತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಶಾಲೆಯ ಧ್ವನಿವರ್ಧಕ ಮತ್ತು ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಅಭಿವೃದ್ಧಿಗಾಗಿ ಸರ್ಕಾರಿ ಶಾಲೆಗಳ ಬಲವರ್ಧನೆ ಮುಖ್ಯವಾದುದು. ಖಾಸಗಿ ಶಾಲೆಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ದೊರೆಯುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಗೆಜ್ಜೆಗಾರ ಸಮುದಾಯ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ತೀರಾ ಹಿಂದುಳಿದಿದ್ದರೂ, ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಈಗಿನ ಸಾಮಾಜಿಕ ಪಿಡುಗು ಮೂಢನಂಬಿಕೆ ಇದಕ್ಕೆಲ್ಲ ಮೂಲ ಕಾರಣ ಶಿಕ್ಷಣ ದೊರೆತರೆ ಎಲ್ಲಾ ದೊರೆತಂತೆ ಎಂದರು.
ಉತ್ತಮ ಸಮಾಜಕ್ಕಾಗಿ ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಮತ್ತು ನಮ್ಮೂರ ಶಾಲೆ ನಮ್ಮೂರ ಶಾಲೆಯಾಗಿ ಉಳಿಯ ಬೇಕಾದರೆ ಗ್ರಾಮದವರು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವುದಕ್ಕಿಂತ ನಮ್ಮೂರ ಶಾಲೆಗೆ ಮಕ್ಕಳ ದಾಖಲಾತಿ ಮಾಡಬೇಕು ಎಂದು ಸಲಹೆ ನೀಡಿದರು.
ಧ್ವನಿ ವರ್ಧಕ ನೆರವು ನೀಡಲು ಸಹಕಾರ ನೀಡಿದ ಮುಖಂಡ ಕೆಂಪಸಿದ್ದ ಮಾತನಾಡಿ, ನಾನು ಓದಿದ ಶಾಲೆಗೆ ಏನನ್ನಾದರೂ ಯಾರ ಕಡೆಯಿಂದಾದರೂ ಶಾಲೆಗೆ ನೆರವುವಾಗುವ ನಿಟ್ಟಿನಲ್ಲಿ ನಾನು ಗೆಜ್ಜಗಾರ ಸಮಿತಿ ಸದಸ್ಯರನ್ನು ಭೇಟಿ ಮಾಡಿ, ನಮ್ಮ ಶಾಲೆ ಕಾಡಂಚಿನ ಭಾಗದಲ್ಲಿರುವ ಸರ್ಕಾರಿ ಶಾಲೆ ಆದುದರಿಂದ ನಮ್ಮ ಶಾಲೆಗೆ, ಸಮಿತಿಯಿಂದ ಸಹಾಯ ಮಾಡುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಇಂದು ಶಾಲೆಗೆ ಭೇಟಿ ನೀಡಿ ಧ್ವನಿ ವರ್ಧಕ ನೆರವು ನೀಡಿದ್ದಾರೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ ಮಾತನಾಡಿ, ಗೆಜ್ಜಗಾರ ಸಮಿತಿಯವರು ಸರ್ಕಾರಿ ಶಾಲೆಗಳನ್ನು ಗುರುತಿಸಿ ಉದ್ದೇಶಪೂರ್ವಕವಾಗಿ ನಮ್ಮ ಸಮುದಾಯದ ಪರವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕಿರು ಧ್ವನಿವರ್ಧಕ ನೀಡಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಪ್ರಕಾಶ್ ಹಾದನೂರು, ಸದಸ್ಯ ಭಾಗ್ಯಕೆಂಪಸಿದ್ದ, ಎಸ್ಡಿಎಂಸಿ ಅಧ್ಯಕ್ಷ ನಂಜಪ್ಪ, ಗೆಜ್ಜೆಗಾರರ ರಕ್ಷಣಾ ಸಮಿತಿ ಸದಸ್ಯ ಹೊಸ ವೀಡು ಅಶೋಕ್, ನಂಜನಗೂಡು ನಟರಾಜ್ ಎಂ.ಜಿ.,ಮುಖಂಡ ಕೆಂಪಸಿದ್ದ, ಶಿವು, ಶಿಕ್ಷಕರು ಪ್ರಸನ್ನ ಕುಮಾರ್, ಸಿದ್ದರಾಜು, ಹೇಮಲತಾ, ಕೃಷ್ಣಮೂರ್ತಿ, ನಂದಿನಿ, ನಾಗೇಶಮೂರ್ತಿ, ಪ್ರತಾಪ್ ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC