ಸರಗೂರು: ತಾಲ್ಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಹೆಗ್ಗನೂರು ಸುಧೀರ್, ಪ್ರಧಾನ ಕಾರ್ಯದರ್ಶಿಯಾಗಿ ಆಶೋಕ್, ಉಪಾಧ್ಯಕ್ಷರಾಗಿ ಬಿ.ಜೆ. ಆಶೋಕ್ ಕುಮಾರ್ ಆಯ್ಕೆಯಾದರು.
ತಾಲೂಕಿನ ಸಮೀಪದ ಬೀಚನಹಳ್ಳಿ ಗ್ರಾಮದ ಕಬಿನಿ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ಸಮಾಜದ ಸಮುದಾಯ ಭವನದಲ್ಲಿ ನಡೆದ ತಾಲ್ಲೂಕು ಒಕ್ಕಲಿಗರ ಸಂಘದ ಸಭೆಯಲ್ಲಿ ಸುಧೀರ್ ಗೌಡ ಅವರನ್ನು ಸಮಾಜದ ಮುಖಂಡರ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಒಕ್ಕಲಿಗ ಸಂಘದ ಪದಾಧಿಕಾರಿಗಳು ಆಯ್ಕೆ:
ಅಧ್ಯಕ್ಷ ಹೆಗ್ಗನೂರು ಸುಧೀರ್, ಪ್ರಧಾನ ಕಾರ್ಯದರ್ಶಿ ಅಶೋಕ್, ಉಪಾಧ್ಯಕ್ಷ ಬಡಗಲಪುರ ಬಿ.ಜೆ.ಅಶೋಕ ಕುಮಾರ್, ಗೌರವಾಧ್ಯಕ್ಷ ಕಾಳಿಹುಂಡಿ ಸಿದ್ದೇಗೌಡ, ಸಹ ಕಾರ್ಯದರ್ಶಿ ಚೇತನ್, ಸಂಘಟನಾ ಕಾರ್ಯದರ್ಶಿ ಅಳಲಹಳ್ಳಿ ಸುರೇಶ್, ಖಜಾಂಚಿ ಸಾಗರೆ ಸಕಲೇಶ್, ನಿರ್ದೇಶಕರು ಶಿವರಾಜು, ರವಿ, ಬಿ.ಬಿ ಎಂ ಮಹದೇವಸ್ವಾಮಿ, ಬಿ.ಕೆ. ಶಿವರಾಜು ಕೆ. ಗೌಡ, ಕಾಳಪ್ಪ ಸಿ., ಮಂಜುನಾಥ, ನವೀನ್, ಬಾಬು ಕಾನಕನಹಳ್ಳಿ, ನಾಗೇಂದ್ರ ಕೆ.ಸಿ., ನಿಂಗೇಗೌಡ, ನಾಗೇಶ್ ಎಸ್ ಬಿ, ಮಹೇಂದ್ರ ಸಾಗರೆ ಆಯ್ಕೆಯಾದರು.
ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹೆಗ್ಗನೂರು ಸುಧೀರ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಬದ್ದ. ಸಂಘದ ನಿರ್ದೇಶಕರು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಆಭಾರಿಯಾಗಿದ್ದು, ನಿರ್ದೇಶಕರ ಸಹಕಾರ ಮತ್ತು ವಿಶ್ವಾಸದೊಂದಿಗೆ ಸಂಘ ಹಾಗೂ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ತಾಲ್ಲೂಕಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರಲು ಎಲ್ಲಾ ಗ್ರಾಮಗಳಿಂದ ಮುಖಂಡರು ಸಭೆಗಳನ್ನು ಮಾಡಿ, ನಂತರ ಅವರ ಸಮ್ಮುಖದಲ್ಲಿ ಸಂಘವನ್ನು ಸ್ಥಾಪಿಸಬೇಕು ಎಂದು ನಿರ್ಣಯವನ್ನು ಸರ್ವಾನುಮತದಿಂದ ಮಾಡಲಾಗಿದೆ. ಅದರಂತೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿ ನನ್ನ ಹಿರಿಯರ ಸಹಕಾರದಿಂದ ಸಂಘವನ್ನು ಮುನ್ನಡೆಸಿಕೊಂಡು ಬರುತ್ತೇನೆ ಎಂದರು.
ತಾಲೂಕಿನಲ್ಲಿ ನಮ್ಮ ಸಂಘದ ದೊಡ್ಡ ಮಟ್ಟದಲ್ಲಿ ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು. ಸರ್ಕಾರದಿಂದ ಕೆಂಪೇಗೌಡರ ಸಮುದಾಯದ ಭವನ ನಿರ್ಮಾಣ ಮಾಡಲು ಸಂಸದರು ಹಾಗೂ ಶಾಸಕರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ,ಮುಖಂಡರು ಪ್ರಕಾಶ್, ಮಹೇಶ್, ಶಿವರಾಜು, ನಿಂಗೇಗೌಡ, ಉಮೇಶ್, ಮಂಜುನಾಥ, ಶಿವಚಂದ್ರ ಪಾಟೀಲ್, ನವೀನ್ ಕುಮಾರ್, ಚಂದ್ರೇಗೌಡ, ಸೋಮಶೇಖರ್, ಬಸವರಾಜು, ಉಮೇಶ್, ಹೆಗ್ಗನೂರು ಸುರೇಶ್, ಚೆಲುವರಾಜು,ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC