ಸರಗೂರು: ತಾಲೂಕು ಅಭಿವೃದ್ಧಿ ಕಂಡಿಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾಧು ಅವರ ವಿರುದ್ಧ ಯಾರೋ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಿದ್ದಾರೆ, ತಾಲೂಕು ಅಭಿವೃದ್ಧಿಯಾಗಿರುವ ಜಾಗ ಮತ್ತು ದಾಖಲೆಗಳನ್ನು ನೀಡುತ್ತಾನೆ ಎಂದು ಪ.ಪಂ. ಸದಸ್ಯ ಹಾಗೂ ನಾಯಕ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ ತಿರುಗೇಟು ನೀಡಿದ್ದಾರೆ.
ಪಟ್ಟಣದ ತಾಲೂಕು ನಾಯಕ ಸಮಾಜದ ವತಿಯಿಂದ ಬುಧವಾರದಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿ ಮಾತನಾಡಿದ ಅವರು, ನಮ್ಮ ಶಾಸಕರಾದ ಅನೀಲ್ ಚಿಕ್ಕಮಾದು ರವರ ತಂದೆ ಶಾಸಕರಾಗಿದ್ದ ಸಮಯದಲ್ಲಿ ತಾಲೂಕಿನ ಬಗ್ಗೆ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೋಗಲಾಡಿಸಲು ಜೀವವನ್ನು ತ್ಯಾಗ ಮಾಡಿ ಹೋಗಿದ್ದಾರೆ. ಅವರಂತೆಯೇ ಇವರು ಕೂಡ ಎರಡು ತಾಲ್ಲೂಕು ಎರಡು ಕಣ್ಣು ಇದ್ದಾಂಗೆ ನೋಡಿಕೊಂಡು ಅಭಿವೃದ್ಧಿ ಕೆಲಸ ಮಾಡಿಕೊಂಡು ಹೊಗುತ್ತಿದ್ದಾರೆ ಎಂದರು.
ಯಾರೋ ಕಿಡಿಗೇಡಿಗಳು ಅವರ ವಿರುದ್ಧ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೇ ನಮ್ಮ ಅಭಿವೃದ್ಧಿ ಕೆಲಸ ಬಗ್ಗೆ ನಾವುಗಳು ಹೋಗೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅವರಿಗೆ ನಮ್ಮ ತಾಲೂಕಿನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತೋರಿಸುತ್ತೇವೆ, ತಾಲೂಕಿನಲ್ಲಿ ಎಷ್ಟು ಶಾಸಕರಾಗಿ ಬಂದು ಹೋಗಿದ್ದಾರೆ. ಅವರು ಏನು ಮಾಡಿದ್ದಾರೆ ಅದನ್ನೂ ತೋರಿಸಲಿ ಎಂದು ಸವಾಲು ಹಾಕಿದರು.
ಪಟ್ಟಣದಲ್ಲಿ ಮಿನಿ ವಿಧಾನಸೌಧ, 100 ಬೆಡ್ ಆಸ್ಪತ್ರೆ, ಕೋರ್ಟ್ ಹಾಗೂ ಎಲ್ಲಾ ಸಮುದಾಯಗಳ ಭವನಗಳಿಗೆ ಅಂಬೇಡ್ಕರ್, ವಾಲ್ಮೀಕಿ, ಬಾಬು ಜಗಜೀವನರಾಂ ಇನ್ನೂ ಸಮುದಾಯ ಭವನಗಳಿಗ ಜಾಗವನ್ನು ಗುರುತಿಸಿ ಪರಿಶೀಲನೆ ನಡೆಸಿ ನೀಡಿದ್ದಾರೆ. ಗ್ರಾಮೀಣ ಭಾಗದ ಗ್ರಾಮಗಳಿಗೂ ಕೂಡ ಭವನವನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಭವನಗಳ ಕಾಮಗಾರಿ ನಡೆಯುತ್ತಿದೆ. ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕು ಮಾರ್ಗವಾಗಿ ಗುಂಡ್ಲುಪೇಟೆ ತಾಲೂಕಿನ ಬೇಗೂರು ವರೆಗೆ ಡಬಲ್ ರೋಡ್ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಂದ ಕೂಡಲೇ ಕಾಮಗಾರಿ ಮಾಡಿಸುತ್ತಾರೆ. ಕೆಲವು ಗ್ರಾಮಗಳ ರಸ್ತೆ ಹಾಳಾಗಿದ್ದು, ಅದರ ದುರಸ್ತಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ರಸ್ತೆಗಳು ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ನಾಯಕ ಸಮಾಜದ ವಾಲ್ಮೀಕಿ ಸಂಘ ಅಧ್ಯಕ್ಷ ಚನ್ನಪ್ಪನಾಯಕ, ಕಾರ್ಯದರ್ಶಿ ಗುರುರಾಜ್, ನಾಗೇಶ್, ವಿನಾಯಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC