ಬೀದರ್: ಸುಧಾಕರ ಕೊಳ್ಳುರ ಅವರಿಗೆ ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಕನ್ನಡದ ಪ್ರತಿಷ್ಠಿತ ನ್ಯೂಸ್ ಚಾನೆಲ್ ನ ‘ಯುವರತ್ನ ಅವಾರ್ಡ್ 2025’ ನೀಡಿ ಗೌರವಿಸಿ ಪ್ರೋತ್ಸಾಹಿಸಲಾಯಿತು.
ಬೆಂಗಳೂರಿನ ಫೋರ್ ಸಿಜನ್ಸ್ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ವಿಧಾನಭೆ ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ರಾಮಲಿಂಗ ರೆಡ್ಡಿ, ಶಾಸಕ ಸಿ.ಟಿ.ರವಿ, ಖ್ಯಾತ ನಟ ಅಜಯ್ ರಾವ್, ಯುವರಾಜಕುಮಾರ್, ಹಾಸ್ಯನಟ ಚಿಕ್ಕಣ್ಣ, ನಟಿ ಸುಧಾರಾಣಿ ಹಾಗೂ ಸಂಪಾದಕ ರವಿ ಎಸ್. ಅವರು ಇದ್ದರು.
ರಾಜ್ಯದ ವಿವಿಧ ಭಾಗಗಳ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಜೀ ಕನ್ನಡನ್ಯೂಸ್ ನ ವೇದಿಕೆಯಲ್ಲಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗಡಿ ಗ್ರಾಮ ಕೊಳ್ಳುರನಲ್ಲಿ ಜನಿಸಿದ ಸುಧಾಕರ ಕೊಳ್ಳುರ ಅವರ ದಶಕಗಳ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಕಾಂಗ್ರೆಸ್ ಪಕ್ಷದಲ್ಲಿ ಯುವ ಕ್ರಾಂತಿಯನ್ನೆ ಎಬ್ಬಿಸಿರುವುದನ್ನು ಪರಿಗಣಿಸಿ ಪ್ರಶಸ್ತಿ ನೀಡಿರುವುದಕ್ಕೆ ಸುಧಾಕರ ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC