ಸರಗೂರು: ಕೆಎಸ್ ಆರ್ ಟಿಸಿ ಬಸ್ ನಿಯಂತ್ರಣ ತಪ್ಪಿ ದೊಡ್ಡ ಕೆರೆಗೆ ಉರುಳಿಬಿದ್ದು, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 25 ಮಂದಿಯಲ್ಲಿ 21 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಆರು ಮಂದಿ ಸ್ಥಿತಿ ಗಂಭೀರವಾಗಿದೆ.
ಪಟ್ಟಣದಿಂದ ಯಡಿಯಾಲ ಮಾರ್ಗವಾಗಿ ಕಾಡು ಬೇಗೂರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕ ನಿಯಂತ್ರಣದಿಂದ ಬೊಂತೇಗಾಲದ ಕೆರೆಗೆ ಉರುಳಿ ಬಿದ್ದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಸರಗೂರಿನಿಂದ ಕಾಡುಬೇಗೂರು–ಕುರ್ಣೆಗಾಲಕ್ಕೆ ಗುರುವಾರ ರಾತ್ರಿ ತೆರಳುತ್ತಿದ್ದ ಬಸ್(ಕೆಎ11ಎ- 0333)ನಲ್ಲಿ 25 ಮಂದಿ ತೆರಳುತ್ತಿದ್ದರು. ಇದರಲ್ಲಿ ನಾಲ್ಕು ಮಂದಿಗೆ ಗಂಭೀರ ಗಾಯವಾಗಿದೆ. ಚಾಲಕ ರವೀಶ್, ಕಂಡಕ್ಟರ್ ಗಣೇಶ್ ಸೇರಿದಂತೆ ಉಳಿದವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸರಗೂರಿನ ಸರ್ಕಾರಿ ಆಸ್ಪತ್ರೆ, ಎಚ್.ಡಿ.ಕೋಟೆ ಹಾಗೂ ಮೈಸೂರಿಗೆ ಸ್ಥಳಾಂತರಿಸಲಾಗಿದೆ.
ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿಗಳ ನೆರವಿನಿಂದ ಗಾಯಗಳನ್ನು ಬಸ್ ನಿಂದ ಹೊರ ತೆಗೆದು ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಸರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಶರತ್, ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಚಂದ್ರಶೇಖರ್ ಭೇಟಿ ನೀಡಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ. ಸರಗೂರು ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಎಸ್ ಐ ಅಶೋಕ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದಿಂದ ಸುಮಾರು ಒಂದೂವರೆ ಕಿಮೀ ದೂರ ಸಾಗುವುದ ರೊಳಗೆ ಬಸ್ ನ ಚಾಲಕ ನಿಯಂತ್ರಣದಿಂದ ಕಳೆದು ಕೊಂಡಿದೆ. ಎಡಗಡೆ ಕಬಿನಿ ಬಲದಂಡೆ ನಾಲೆ, ಬಲಗಡೆ ಬೊಂತ್ತೇಗಾಲ ಕೆರೆ ಇದ್ದುದರಿಂದ ಬಸ್ ಎತ್ತ ಚಲಿಸಿದರೂ ಪ್ರಯಾಣಿಕರ ಪ್ರಾಣಕ್ಕೆ ಆಪತ್ತು ಎದುರಾಗುವ ಸಂಭವ ಇದ್ದಿದ್ದರಿಂದ ಚಾಲಕ ಕರೆ ಏರಿಗೆ ಅಳವಡಿಸಿದ್ದ ಕಬ್ಬಿಣದ ತಡೆಗೋಡೆಗೆ ಗುದ್ದಿಸಿ ಬಸ್ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ‘ಆದಾಗ್ಯೂ ಬಸ್ ಕಬ್ಬಿಣದ ತಡೆಗೋಡೆ ಯನ್ನು ಮುರಿದುಕೊಂಡು ಕೆರೆಗೆ ಹಾರಿದೆ.
ಬಸ್ ಕರೆಗೆ ಉರುಳಿದ ಜಾಗದಿಂದ ನಾಲೈದು ಅಡಿಗಳ ಅಂತರದಲ್ಲೇ ಕರೆಯು ಭಾರೀ ಆಳವಿದ್ದು, ಒಂದು ವೇಳೆ ಬಸ್ ವೇಗವಾಗಿ ಬಂದು ಕಬ್ಬಿಣದ ತಡೆಗೋಡೆಯನ್ನು ಹಾರಿ ಕೆರೆಗೆ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸಿಬಿಡುತ್ತಿತ್ತು.
ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿಯ ನೆರವಿನಿಂದ ಗಾಯಾಳುಗಳನ್ನು ಬಸ್ ನಿಂದ ಹೊರ ತೆಗೆದು ಆಸ್ಪತ್ರೆಗೆ ಕಳುಹಿಸಲಾಗಿದೆ. ಸರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಶರತ್, ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಎಚ್.ಡಿ.ಕೋಟೆ ಹಾಗೂ ಮೈಸೂರು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಸರಗೂರು ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಎಸ್ ಐ ಕಿರಣ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಎಚ್.ಡಿ.ಕೋಟೆ–ಸರಗೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್ ಗಳು ಸುಸ್ಥಿತಿಯಲ್ಲಿ ಇಲ್ಲ. ಈ ಮಾರ್ಗದಲ್ಲಿ ಸಂಚರಿಸಲು ಹಳೆಯ ವಾಹನಗಳನ್ನೇ ನೀಡಲಾಗಿದೆ. ಆದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ಬಸ್ ಗಳು ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತವೆ. ಇಂದು ನಡೆದ ಅಪಘಾತದಲ್ಲಿ ಹೆಚ್ಚು ಕಡಿಮೆಯಾಗಿದ್ದರೆ, ಬಸ್ ನಲ್ಲಿದ್ದವರ ಜೀವ ಹಾರಿಹೋಗುತ್ತಿತ್ತು. ಈಗಲಾದರೂ ಸಾರಿಗೆ ನಿಗಮದವರು ಎಚ್ಚೆತ್ತುಕೊಂಡು ಸುಸ್ಥಿತಿಯಲ್ಲಿರುವ ಬಸ್ ಗಳನ್ನು ಈ ಮಾರ್ಗಕ್ಕೆ ನಿಯೋ ಜಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗುರುವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಪಟ್ಟಣದಿಂದ ಹೆಡಿಯಾಲ ಮಾರ್ಗವಾಗಿ ಕಾಡು ಬೇಗೂರಿಗೆ ತೆರಳುತ್ತಿದ್ದಾಗ ಬಸ್ ನ ಸೇರಿಂಗ್ ತುಂಡಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೊಂತೇಗಾಲದ ಕೆರೆಗೆ ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿವೆ. ಚಾಲಕ ರವೀಶ್ ಅವರ ಮುಖ, ಗಡ್ಡಕ್ಕೆ ಪೆಟ್ಟು ಬಿದ್ದಿದೆ. ನಿರ್ವಾಹಕ ಗಣೇಶ್ ಅವರ ಬೆನ್ನು ಮೂಳೆಗೆ ಗಂಭೀರ ಪಟ್ಟಾಗಿದೆ. ಪ್ರಯಾಣಿಕರಲ್ಲಿ ಮಹಿಳೆಯೊಬ್ಬರು ಹಾಗೂ ಮಗುವಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ಗಾಯಾಳುಗಳನ್ನು ಎಚ್.ಡಿ.ಕೋಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದಂತೆ ಸಣ್ಣಪುಟ್ಟ ಗಾಯಗಳಾಗಿದ್ದವರಿಗೆ ಸರಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಎಚ್.ಡಿ.ಕೋಟೆಯಿಂದ ಸರಗೂರು ಮಾರ್ಗವಾಗಿ ಕಾಡುಬೇಗೂರು–ಕುರ್ಣೆಗಾಲ ಮೂಲಕ ಸಾಗಿ ಕೇರಳ ಗಡಿಯ ಆಲನಹಳ್ಳಿಗೆ ತೆರಳಬೇಕಿದ್ದ ಕೆಎಸ್ ಆರ್ ಟಿಸಿ ಬಸ್ (ಕೆಎ11 ಎಫ್ 0333) 25 ಮಂದಿ ಪ್ರಯಾಣಿಕರನ್ನು ಹೊತ್ತು ರಾತ್ರಿ 7:30ರ ಸುಮಾರಿನಲ್ಲಿ ಎಚ್.ಡಿ.ಕೋಟೆ ನಿಲ್ದಾಣದಿಂದ ಹೊರಟಿದೆ.
ಎಲ್ಲವೂ ಸರಿಯಾಗಿದ್ದರೆ ಬಸ್ ಪ್ರಯಾಣಿಕರನ್ನು ಆಯಾ ಗ್ರಾಮಗಳಲ್ಲಿ ಇಳಿಸಿ ಕುರ್ಣೆಗಾಲದಲ್ಲಿ ತಂಗಬೇಕಿತ್ತು. ಆದರೆ ಬಸ್ ನ ತಾಂತ್ರಿಕ ದೋಷ ಪ್ರಯಾಣಿಕರಿಗೆ ಆಘಾತವನ್ನು ತಂದೊಡ್ಡಿತ್ತು. ಎಚ್ .ಡಿ.ಕೋಟೆಯಿಂದ ಹೊರಟು ರಾತ್ರಿ 8 ಗಂಟೆಗೆ ಸರಗೂರನ್ನು ತಲುಪಿದ ಬಸ್ ಸರಗೂರು ನಿಲ್ದಾಣದಿಂದ 8.10ಕ್ಕೆ ಹೊರಟಿದೆ ನಂತರವೇ ಒಂದು ಗಂಟೆ ಒಳಗೆ ಈ ಘಟನೆ ನಡೆದಿದೆ ಎಂದು ಪ್ರಯಾಣಿಕರು ಹಾಗೂ ಸ್ಥಳೀಯರು ತಿಳಿಸಿದರು.ಸ್ಥಳಕ್ಕೆ ಕೆಎಸ್ ಆರ್ಟಿಸಿ ಬಸ್ ವ್ಯವಸ್ಥಾಪಕರು ಬಾರದೆ ಇರುವುದರಿಂದ ಸ್ಥಳೀಯ ಮುಖಂಡರು ಹಾಗೂ ಪಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


