ಸರಗೂರು: ವಾಹನ ಚಾಲಕರು ವಾಹನಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಲ್ಲಿಸಿಕೊಂಡು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ವಹಿಸಬೇಕು ಎಂದು ಸರಗೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆರ್. ಕಿರಣ್ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಗೂಡ್ಸ್ ವಾಹನ ಚಾಲಕರ ಸಂಘದ ವತಿಯಿಂದ 3ನೇ ವರ್ಷದ ಆಷಾಡಮಾಸದ ಶುಕ್ರವಾರದಂದು ಚಾಮುಂಡೇಶ್ವರಿ ಪೋಟೋ ಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ತಾಯಿ ಚಾಮುಂಡೇಶ್ವರಿ ಹಾಗೂ ಚಿಕ್ಕದೇವಮ್ಮ ಒಳ್ಳೆಯದು ಮಾಡಲಿ. ಅದರಂತೆ ಸಂಘದವರು ಪ್ರತಿ ವರ್ಷ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ ಎಂದರು.
ದೇವಾಲಯದಲ್ಲಿ ಆಷಾಢ ಶುಕ್ರವಾರವೂ ತುಂಬಾನೇ ವಿಶೇಷವಾಗಿರುತ್ತದೆ. ಯಾಕೆಂದರೆ ಆಷಾಢ ಮಾಸದ ಬರುವ ಶುಕ್ರವಾರದಲ್ಲಿ ಒಂದು ಶುಕ್ರವಾರದಂದು ಚಾಮುಂಡಿ ತಾಯಿಯ ಜಯಂತಿ ಅಂದರೆ ಚಾಮುಂಡಿ ತಾಯಿಯ ಜನ್ಮ ದಿನ ಎಂದರು.
ಸಂಘದ ವತಿಯಿಂದ ಅನ್ನದಾನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಸಂಘದ ಅಧ್ಯಕ್ಷ ಬೀರ್ವಾಳು ಚಿಕ್ಕಣ್ಣ, ಉಪಾಧ್ಯಕ್ಷ ಕಾಳನಾಯಕ, ನಾಗರಾಜು ವಿ., ಅಭಿ, ನಾಗೇಶ, ಲೋಕಿ, ನಿಂಗಪ್ಪ, ಪಟೇಲ, ರವಿ, ಜಯಂದ್ರ, ಗೋಪಾಲಣ್ಣ, ಕುಮಾರ, ಶ್ರೀಕಾಂತ, ಪ್ರಕಾಶ, ಅರವಿಂದ, ರಾಜೇಶ, ವರದರಾಜು, ನಿಂಗರಾಜು, ಗೋಪಾಲಕೃಷ್ಣ, ರಮೇಶ, ಶಿವು, ಅಭಿ, ಕುಮಾರ, ಜೈ ಕುಮಾರ, ಕಲ್ಲೇಶ ಹಾಗೂ ದಾನಿಗಳು ವಿನಾಯಕ ವೈನ್ಸ್ ಕರಿಯಪ್ಪ, ಗೋಬಿ ರಾಮಣ್ಣ ,ಅಶೋಕ ಬೇಕರಿ, ಕಾರ ಅಂಗಡಿ ಮಲ್ಲೇಶ್, ಪ್ರದೀಪ, ರವಿ,ಎಲ್ ಐಎಫ್ ಎಲ್ ಫೈನಾನ್ಸ್ ಶೇಖರ, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC