ಸರಗೂರು: ಎಚ್.ಡಿ.ಕೋಟೆ ತಾಲೂಕಿನಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳನ್ನು ಸಹಿಸದ ಕೆಲ ವಿರೋಧಿಗಳು ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ನಡೆಸಲಾಗುತ್ತಿದ್ದು, ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ದೂರು ನೀಡಲು ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನಿಸಲಾಯಿತು. ಪುರಸಭೆ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಜಿ.ಪಂ ಮಾಜಿ ಸದಸ್ಯ ಸದಸ್ಯ ಎಚ್.ಸಿ. ಮಂಜುನಾಥ್, ಹಿರೇಹಳ್ಳಿ ಸೋಮೇಶ್, ನರಸಿಪುರ ರವಿ ಮಾತನಾಡಿ, ಶಾಸಕ ಅನಿಲ್ ಚಿಕ್ಕಮಾದು ತಾಲೂಕಿಗೆ ಕೋಟ್ಯಂತರ ರೂ.ಗಳ ಅನುದಾನ ತಂದಿದ್ದಾರೆ. ಹಲವು ಇಲಾಖೆಗಳ ಮೂಲಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಇವುಗಳನ್ನು ಸಹಿಸದ ಕೆಲವರು ತಾಲೂಕು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆಗಳ ಸಚಿವರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಶಾಸಕರು ಅತಿ ಹೆಚ್ಚಿನ ಅನುದಾನ ತಂದಿದ್ದಾರೆ. ಇತ್ತೀಚೆಗೆ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಕಾಮಗಾರಿ ನಡೆಸಲು ತೊಂದರೆ ಜೊತೆಗೆ ವಿಳಂಬವಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ, ಸರಗೂರು ಬ್ಲಾಕ್ ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು,ಕೆಂಡಗಣೇಗೌಡ, ಸೋಮೇಶ್, ವಡ್ಡರಗುಡಿ ಚಿಕ್ಕಣ್ಣ, ಪ್ರಕಾಶ್, ಎಚ್.ಸಿ. ನರಸಿಂಹಮೂರ್ತಿ, ಎಚ್.ಸಿ, ಮಂಜುನಾಥ, ಪರಶಿವಮೂರ್ತಿ, ಸಿದ್ದರಾಮೇಗೌಡ, ಚಿನ್ನಹಳ್ಳಿ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ನರಸೀಪುರ ರವಿ, ವನಸಿರಿ ಉಮೇಶ್, ಶಿವರಾಜು, ಮಣಿಕಂಠ, ನಾಗನಹಳ್ಳಿ ಪ್ರದೀಪ್, ಅಶೋಕ್, ಪಟ್ಟಣ ಪಂಚಾಯತಿ ಸದಸ್ಯ ಶ್ರೀನಿವಾಸ್, ಶಿವರಾಜ್, ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಕಳಸೂರು ಬಸವರಾಜು,ಪಂಚಾಯತಿ ಅಜ್ಜರು, ಶಂಭುಲಿಂಗನಾಯಕ, ಶಶಿ ಪಟೇಲ್, ಸ್ಟು ಡಿಯೋ ಪ್ರಕಾಶ್, ಸೌಮ್ಯ ಮಂಜುನಾಥ್, ಸತೀಶ್ ಗೌಡ, ಶಫೀ, ಅಶೋಕ್, ರಮೇಶ್ ನಾಯಕ್, ಕೃಷ್ಣ, ದಾಸನಾಯ್ಕ, ಹಾಗೂ ಅನೇಕ ಮುಖಂಡರು ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC