ಸರಗೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಏಳಿಗೆಯ ಮೂಲಕ ದೇಶದ ಉನ್ನತಿ ಕಾರ್ಯವನ್ನು ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವಿ.ಭಾಸ್ಕರ್ ತಿಳಿಸಿದರು.
ತಾಲೂಕಿನ ದಡದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ದಂದು ಪರಿಸರ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
11 ಸಾವಿರ ದೇವಸ್ಥಾನಗಳಿಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಜೀರ್ಣೋದ್ಧಾರ ಮಾಡುವುದಕ್ಕೆ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಕಾಡಿನಲ್ಲಿ ಹಣ್ಣು ಹಂಪಲುಗಳನ್ನು ನೀಡುವ ಮರಗಳ ಕ್ಷೀಣತೆಯಿಂದಾಗಿ ವನ್ಯಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ಬರುತ್ತಿವೆ. ಗ್ರಾಮೀಣ ಭಾಗದಲ್ಲಿ ತುರ್ತು ಸಂದರ್ಭದಲ್ಲಿ ಸೇವಾ ಮನೋಭಾವದಿಂದ ಧಾವಿಸುವವರು ಇದ್ದರೆ ಅದು ಶೌರ್ಯ ವಿಪತ್ತು ಘಟಕ, ಅವರ ಎಲ್ಲಾ ಕಾರ್ಯಗಳು ಮಾದರಿ, ಮುಂದಿನ ಭವಿಷ್ಯಾಕ್ಕಾಗಿ ಮಾಡಬೇಕಾದ ದೊಡ್ಡ ಆಸ್ತಿ ಎಂದರೆ ಸ್ವಚ್ಚ ಪರಿಸರ. ಒಬ್ಬ ವಿದ್ಯಾರ್ಥಿ ಒಂದು ಗಿಡ ನೆಡುವ ಸಂಕಲ್ಪ ಮಾಡಬೇಕು. ಆಗ ಮಾತ್ರ ನಮ್ಮ ಸ್ವಚ್ಚ ನಿರ್ಮಲ ಪರಿಸರದ ನಿರ್ಮಾಣದ ಕನಸು ನನಸಾಗಿಸಲು ಸಾಧ್ಯ ಎಂದರು.
ದಡದಹಳ್ಳಿ ಷಡಕ್ಷರಿ ಸ್ವಾಮಿಗಳು ಕಾರ್ಯಕ್ರಮ ಅಧ್ಯಕ್ಷತೆ ಸಾನಿಧ್ಯ ವಹಿಸಿ ಮಾತನಾಡಿ, ಧರ್ಮಾಧಿಕಾರಿಗಳು ನಮ್ಮ ದಡದಹಳ್ಳಿ ಗ್ರಾಮದಲ್ಲಿ ಇರುವ ಮಹದೇಶ್ವರ ದೇವಾಲಯಕ್ಕೆ ಸಹಾಯಧನ ನೀಡಿದ್ದಾರೆ. ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಿಕೊಟ್ಟಿದ್ದಾರೆ. ಪರಿಸರವನ್ನು ಇರುವಬೇಕಾದರೆ, ನಾವು ಮನೆಯ ಮುಂಭಾಗದಲ್ಲಿ ಒಂದು ಗಿಡವನ್ನು ನೆಟ್ಟು ಆಮ್ಲಜನಕ ಪಡೆಯಲು ಅನುಕೂಲವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ದಡದಹಳ್ಳಿಯ ಶ್ರೀ ಪಟ್ಟದ ಮಠದ ಕಿರಿಯ ಗುರುಸ್ವಾಮಿಗಳು, ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಕುಮಾರ್, ಕೃಷಿ ಮೇಲ್ವಿಚಾರಕ ರಾಜು ಬಿ.ಜೆ., ವಲಯ ಮೇಲ್ವಿಚಾರಕಿ ಸಲೀಮಾ, ಶಾಲೆಯ ಸಹಶಿಕ್ಷಕರು ಪ್ರೇಮ್ ಕುಮಾರ್, ಒಕ್ಕೂಟ ಅಧ್ಯಕ್ಷರು ಚಿನ್ನಪ್ಪ, ರಾಜೇಶ್, ಗುರುಸ್ವಾಮಿ, ಸುರೇಶ್, ನಾಗರತ್ನ, ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


