ಸರಗೂರು: ಶಾಸಕರು ತಾಲೂಕಿನಲ್ಲಿ ಒಂದು ಗುಂಟೆ ಜಾಗ ಹಾಗೂ ರೆಸ್ಟಾರ್ಟ್ ನ್ನು ತೆಗೆದುಕೊಂಡಿಲ್ಲ. ಯಾರಿಗೂ ಅವಕಾಶವನ್ನೂ ನೀಡಿಲ್ಲ, ತಾಲ್ಲೂಕಿನ ಸಂಪತ್ತು ಹಾಳು ಮಾಡಲು ಮುಂದಾಗಿಲ್ಲ. ಆದರೆ ಮಾದ್ಯಮ ಮತ್ತು ಪತ್ರಿಕೆಯಲ್ಲಿ ಶಾಸಕರ ವಿರುದ್ಧ ತಾಲೂಕಿನ ಸಂಪತ್ತು ಹಾಳು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಮುಖಂಡ ಕೃಷ್ಣನಾಯಕರವರು ಹೇಳಿಕೆ ನೀಡಿದ್ದಾರೆ. ಅವರು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿರ್ವಾಳ್ ಚಿಕ್ಕಣ್ಣ ಕಿಡಿಕಾರಿದರು.
ತಾಲ್ಲೂಕಿಗೆ ಕೃಷ್ಣನಾಯಕ ಅಮಾವಾಸ್ಯೆ ಮತ್ತು ಪೂರ್ಣಿಮೆಗೆ ಬರುತ್ತಿದ್ದಾರೆ. ನಮ್ಮ ಶಾಸಕ ಅನಿಲ್ ಚಿಕ್ಕಮಾದುರವರ ಬಗ್ಗೆ ಅವರಿಗೆ ಏನು ಗೊತ್ತು? ತಾಲೂಕಿನ ಬಗ್ಗೆ ಸಾರ್ವಜನಿಕರು ಹಾಗೂ ರೈತರ ಕಷ್ಟ ಕೇಳುವುದಕ್ಕೆ ಬರಲ್ಲ. ಇನ್ನೂ ತಾಲೂಕಿನ ಅಭಿವೃದ್ಧಿ ಕೆಲಸದ ಬಗ್ಗೆ ಆ ವ್ಯಕ್ತಿಗೇನು ಗೊತ್ತು? ಎಲ್ಲೋ ಕುಳಿತುಕೊಂಡು ಮಾಧ್ಯಮಗಳಲ್ಲಿ ಆರೋಪ ಮಾತನಾಡುವುದು ತಪ್ಪು. ತಾಲ್ಲೂಕಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ನೇರವಾಗಿ ಆರೋಪ ಮಾಡಿ, ಅದನ್ನು ಬಿಟ್ಟು ಅಲ್ಲಿ ಇಲ್ಲಿ ಕುಳಿತು ಮಾತನಾಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಜನತೆ ಪ್ರತಿದಿನ ಶಾಸಕರ ಮನೆಯ ಮುಂದೆ ಸಾವಿರಾರು ಜನರು ಬರುತ್ತಾರೆ ಅವರ ಕಷ್ಟವನ್ನು ಆಳಿಸಿ ಮುಂದಿನ ಕೆಲಸಕ್ಕೆ ಹೋಗುತ್ತಾರೆ. ಶಾಸಕರು ಅವರ ತಂದೆ ಕಾಲದಿಂದಲೂ ಜನಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಅವರ ಬಗ್ಗೆ ಮಾತನಾಡಬೇಕು ಎಂದರೆ ಅವರ ಯೋಗ್ಯತೆ ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಶಾಸಕರು ಯಾವುದೇ ಜನಾಂಗದವರನ್ನು ವ್ಯಕ್ತಿಗಳನ್ನು ಸ್ವಂತ ಮನೆಯವರಂತೆ ನೋಡಿಕೊಂಡು ಬರುತ್ತಾರೆ. ಆಮೇಲೆ ಯಾವುದೇ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಬಂದರೆ, ನಮ್ಮ ಶಾಸಕರು ನೀವು ವ್ಯಕ್ತಿಗಳನ್ನು ಆ ಪಕ್ಷ ಈ ಪಕ್ಷದ ವ್ಯಕ್ತಿ ನೋಡದೆ, ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಾರೆ. ಆದರೆ ಅವರ ಜೊತೆ ಅಧಿಕಾರಿಗಳು ಕೆಲಸ ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಿದರೇ ಕೂಡಲೇ ಆ ಸ್ಥಳದಲ್ಲಿ ಅಧಿಕಾರಿಗಳಿಗೆ ಕರೆ ಮೂಲಕ ಮಾತನಾಡಿ, ಅವರ ಕೆಲಸವನ್ನು ಮಾಡಿಸಿಕೊಂಡುತ್ತಾರೆ. ಅವರು ಎಷ್ಟೋ ಸಮಯದಲ್ಲಿ ತಾಲೂಕಿನ ಜನತೆ ಅಪಘಾತದಲ್ಲಿ ಗಾಯಾಳು ಹಾಗೂ ಮೃತಪಟ್ಟ ವ್ಯಕ್ತಿಯನ್ನು ನೋಡಿಕೊಂಡು ಅವರಿಗೆ ಸಹಾಯಧನ ಮಾಡೇ ಬರುವುದು. ಅಂತವರ ಮೇಲೆ ಇವರು ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC