ಬೆಂಗಳೂರು: ಹೈಕಮಾಂಡ್ ನಿರ್ಧಾರವನ್ನು ನಾನು, ಡಿ.ಕೆ.ಶಿವಕುಮಾರ್ ಇಬ್ಬರೂ ಪಾಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಒಬಿಸಿ ಸಲಹಾ ಮಂಡಳಿ ಸಭೆಯ ಸುದ್ದಿಗೋಷ್ಟಿ ವೇಳೆ, ಒಬಿಸಿ ನಾಯಕ ಇರುವ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗುತ್ತಾ? ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರಶ್ನೆ ಕೇಳಿದ ವೇಳೆ ಎಐಸಿಸಿ ಒಬಿಸಿ ಅಧ್ಯಕ್ಷ ಅನಿಲ್ ಜೈ ಹಿಂದ್ ಅವರು ತಬ್ಬಿಬ್ಬಾದರು.
ಪ್ರಶ್ನೆಗೆ ತಡವರಿಸಿದಾಗ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಂದು ಅನಿಲ್ ಜೈ ಹಿಂದ್ ಕಿವಿಯಲ್ಲಿ ಏನೋ ಹೇಳಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನೀತಿ, ಸಿದ್ಧಾಂತ ನಿಮಗೆ ಗೊತ್ತಿದೆ, ಹಿಂದುಳಿದ ವರ್ಗಗಳ ಭಾಗೀದಾರರನ್ನ ಉತ್ತೇಜಿಸುತ್ತದೆ. ನಿಮ್ಮ ಪ್ರಶ್ನೆ ಆಶ್ಚರ್ಯ ತಂದಿದೆ ಜಾರಿಕೊಂಡರು.
ಇದೇ ವೇಳೆ ಅನಿಲ್ ಜೈ ಹಿಂದ್ ಗೆ ಅದು ಹೈಕಮಾಂಡ್ ತೀರ್ಮಾನ ಅಂತೇಳಿ ಎಂದು ಸಿದ್ದರಾಮಯ್ಯ ಅವರೇ ಹೇಳಿಕೊಟ್ಟ ಘಟನೆಯೂ ನಡೆಯಿತು. ಬಳಿಕ ಹೈಕಮಾಂಡ್ ತೀರ್ಮಾನ ಎಂದು ಹೇಳಿ ಅವರು ಸುಮ್ಮನಾದರು.
ಆದರೆ ಅಷ್ಟಕ್ಕೆ ಬಿಡದ ಸಿಎಂ ಸಿದ್ದರಾಮಯ್ಯ, ತಾವೇ ಮೈಕ್ ತೆಗೆದುಕೊಂಡು ಮತ್ತೊಮ್ಮೆ ಸ್ಪಷ್ಟನೆ ಕೊಟ್ಟರು. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನು, ಡಿಕೆಶಿ ಇಬ್ಬರೂ ಹೈಕಮಾಂಡ್ ಏನೇ ನಿರ್ಧಾರ ಮಾಡಿದರೂ ಪಾಲಿಸುತ್ತೇವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC