ಸರಗೂರು: ಪಟ್ಟಣದ 10 ವಾರ್ಡಿನಲ್ಲಿ ಗುರುವಾರ ದಂದು ಬೆಳ್ಳಂಬೆಳಗ್ಗೆ ಕೋತಿಗಳ ಹಾವಳಿಯಿಂದ ಹೊರಗಡೆ ಹೋಗಲು ಭಯವಾಗುತ್ತಿದೆ. ಕೂಡಲೇ ಕೋತಿಗಳನ್ನು ಹಿಡಿದು ಬೇರೆ ಕಡೆ ಸಾಗಿಸಬೇಕು ಎಂದು ವಾರ್ಡಿನ ಜನರು ಒತ್ತಾಯಿಸಿದರು.
ಪಟ್ಟಣದಲ್ಲಿ ಸುಮಾರು ವಾರ್ಡುಗಳಲ್ಲಿ ಹತ್ತು-–ಹನ್ನೆರಡು ಮಹಿಳೆಯರು ಹಾಗೂ ಸಣ್ಣ ಮಕ್ಕಳ ಮೇಲೆ ಕೋತಿಗಳು ದಾಳಿ ಮಾಡಿ, ಗಾಯಗೊಳಿಸಿದ್ದ ಘಟನೆಗಳು ನಡೆದಿವೆ. ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿಯವರು ಕೂಡಲೇ ಇದಕ್ಕೊಂದು ಪರಹಾರ ಕಂಡುಹಿಡಿಯಬೇಕು ಎಂದು ವಾರ್ಡಿನ ಶಾಂತಿ ಆರೋಪ ಮಾಡಿದ್ದಾರೆ.
ಅರಣ್ಯ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಳಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಅವರು ನಮಗೆ ಬರುವುದಿಲ್ಲ.ಇವರಿಂದ ಅವರಿಗೆ ಹೇಳುತ್ತಿದ್ದಾರೆ.ಇದರ ಬಗ್ಗೆ ಯಾರಿಗೂ ಹೇಳಬೇಕು ಎನ್ನುವುದು ಗೊತ್ತಿಲ್ಲ.ಕೋತಿಗಳ ಹಾವಳಿಯಿಂದ ವಾರ್ಡಿನ ಜನರು ಕಂಗಾಲಾಗಿದ್ದು, ರಸ್ತೆಯಲ್ಲಿ ಮತ್ತು ಮನೆಯ ಮುಂಭಾಗದಲ್ಲಿ ಒಬ್ಬೊಬ್ಬರೇ ತಿರುಗಾಡುವಂತಿಲ್ಲ. ಮನುಷ್ಯರ ಮೇಲೆ ದಾಳಿ ಮಾಡುವುತ್ತಿದ್ದವೆ ಅಂಗವಿಕಲರ ಮಹಿಳೆ ಮನೆ ಮುಂಭಾಗದಲ್ಲಿ ಕುಳಿತಿರುವಾಗ ದಾಳಿ ಮಾಡಿದೆ ಇದರ ಪಪಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೂ ಬಂದಿದ್ದರೂ ತಲೆ ಕೆಡಿಸಿಕೊಳ್ಳದೇ ಸುಮ್ಮನೆ ಇದ್ದಾರೆ. ಈ ಕೋತಿಗಳಿಂದ ಎಷ್ಟೋ ಜನರ ಪ್ರಾಣ ಹೋಗುವವರೆಗೂ ಕೋತಿಗಳನ್ನು ಸೆರೆ ಹಿಡಿಯಲು ಮುಂದಾಗಿಲ್ಲ. ಕೋತಿ ದಾಳಿ ಮಾಡಿದೆ ಎಂದು ಗಮನಕ್ಕೆ ತಂದರೂ ಪಪಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಗಾಯಾಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ವಲಯ ಅರಣ್ಯಾಧಿಕಾರಿ ಮಹಾಲಕ್ಷ್ಮೀ ಮಾತನಾಡಿ, ಕೋತಿಗಳ ಹಾವಳಿಯನ್ನು ತಡೆಗಟ್ಟುವುದು ಸ್ಥಳೀಯ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಗೆ ಬರುತ್ತದೆ. ಘಟನೆಯ ಬಗ್ಗೆ ಜಿಲ್ಲಾ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಕೋತಿಗಳ ಸೆರೆಗೆ ಅನುಮತಿ ಪಡೆದು ಪಂಚಾಯಿತಿಯವರು ಅವರೇ ಮಾಡುವ ಕೆಲಸ ನಮಗೆ ಸಾರ್ವಜನಿಕರು ಹಾಗೂ ವಾರ್ಡ್ ಗಳಿಂದ ದೂರು ಬಂದಿಲ್ಲ.ಬಂದ ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಕೋತಿಗಳನ್ನು ಹಿಡಿಯವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಕೆ.ಸಂತೋಷ ಕುಮಾರ್ ಮಾತನಾಡಿ, ಈ ವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವನ್ಯಜೀವಿಗಳನ್ನು ನಾವು ಹಿಡಿಯಲು ಬರುವುದಿಲ್ಲ. ಅರಣ್ಯ ಇಲಾಖೆಯವರು ಸೆರೆ ಹಿಡಿಯಲು ಅವರಿಗೆ ಅನುಮತಿ ಎಂದು ತಿಳಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC