ಸರಗೂರು: ತಾಲೂಕಿನ ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಹಕಾರ ಸಚಿವ ಎನ್.ಕೆ.ರಾಜಣ್ಣ ಕುಟುಂಬ ಸದಸ್ಯರಾದ ಮಗಳು ರಶ್ಮಿ ಮತ್ತು ಸೊಸೆ ಭಾವನಾ ಹಾಗೂ ಕುಟುಂಬದವರು ಗುರುವಾರದಂದು ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದತಾಪಂ ಮಾಜಿ ಅಧ್ಯಕ್ಷ ಮನುಗನಹಳ್ಳಿ ಗುರುಸ್ವಾಮಿ, ರಾಜ್ಯ ಸರ್ಕಾರ ಸಹಕಾರ ಸಚಿವರಾದ ಎನ್.ಕೆ.ರಾಜಣ್ಣರವರು ನಮ್ಮ ತಾಲೂಕಿನ ನಾಡದೇವಿ ಚಿಕ್ಕಮ್ಮ ತಾಯಿ ಭೇಟಿ ನೀಡಿ ಸಂದರ್ಭದಲ್ಲಿ ತಾಲ್ಲೂಕಿನ ಅಭಿವೃದ್ಧಿ ಕೆಲಸ ಬಗ್ಗೆ ಮಾಹಿತಿಯನ್ನು ನೀಡಿದರು. ತಾಯಿಯ ಬೆಟ್ಟಕ್ಕೆ ಪ್ರವಾಸೋದ್ಯಮ ಮಾಡಲು ನಮ್ಮ ಶಾಸಕರು ಹಗಲು ಇರುಳು ಶ್ರಮ ಪಡುತ್ತಿದ್ದಾರೆ. ವನಜಲಸಿರಿ ನಾಡು ಎಂದು ಪ್ರಸಿದ್ಧವಾಗಿರುವ ತಾಲೂಕನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ರಾಜಣ್ಣರವರು, ನಮ್ಮ ತಾಲೂಕಿನ ಸಹಕಾರ ಬ್ಯಾಂಕ್ ಗಳಿಗೆ ಅನುದಾನವನ್ನು ನೀಡಿದರೆ, ತಾಲೂಕಿನ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರ ಮಗಳಿಗೆ ರಶ್ಮಿರವರಿಗೆ ತಿಳಿಸಿದರು.
ನಂತರ ಮಾತನಾಡಿದ ಎನ್.ಕೆ.ರಾಜಣ್ಣ ರವರ ಮಗಳು ರಶ್ಮಿ ಮಾತನಾಡಿ, ನಾವು ಮೈಸೂರಿನ ಚಾಮುಂಡಿ ಆಷಾಡ ಮಾಸದಲ್ಲಿ ತಾಯಿಗೆ ಪೂಜೆ ಮಾಡಿಸಲು ಬಂದಿದ್ದೆವು. ತಾಲ್ಲೂಕಿನ ಕಬಿನಿ ಮತ್ತು ನುಗು ಜಲಾಶಯದ ನೋಡಲು ಬಂದಿದ್ದರಿಂದ ನಮ್ಮ ನಾಡ ದೇವತೆ ತಾಲೂಕಿನ ಹೆಸರಾಂತ ದೇವಾಲಯ ಇದೆ ಎಂದರು. ನೋಡಿಕೊಂಡು ಹೋಗೋಣವೆಂದು ಬಂದಿದ್ವಿ. ತಾಲ್ಲೂಕಿನ ಶಾಸಕರಾದ ಅನಿಲ್ ಕುಮಾರ್ ರವರು ಉತ್ತಮವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬೆಟ್ಟದಲ್ಲಿ ದೇವಸ್ಥಾನ ಹಾಗೂ ರಸ್ತೆ ಮೆಟ್ಟಿಲು ತುಂಬಾ ಚೆನ್ನಾಗಿ ಮಾಡಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಶ್ರೀನಿವಾಸ, ಮಾಜಿ ಜಿಪಂ ಸದಸ್ಯ ಪುರದಕಟ್ಟೆ ಬಸವರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮನುಗನಹಳ್ಳಿ ಗುರುಸ್ವಾಮಿ, ಚನ್ನಮಲ್ಲಪ್ಪ, ರಸ್ತೆ ಬದಿಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹದೇವ, ತಹಶೀಲ್ದಾರ್ ಮೋಹನಕುಮಾರಿ, ಪೋಲಿಸ್ ಠಾಣೆ ಉಪ ನಿರೀಕ್ಷಕ ಆರ್ ಕಿರಣ್, ಆರ್ ಐ ರವಿಚಂದ್ರನ್, ವಿ.ಎ.ಕುಮಾರ್, ಪಾರುಪತ್ತೇದಾರ ಮಹದೇವಸ್ವಾಮಿ ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC