ಸರಗೂರು: ಭೂಮಿ ಪ್ರತಿಯೊಂದು ವಸ್ತುವಿನ ಉತ್ಪಾದನಾ ಸಾಧನವಾಗಿದೆ. ಭೂಮಿ ಉಳ್ಳವರಿಗೆ ಸಾಮಾಜಿಕ ಘನತೆಯನ್ನು ಹಾಗೂ ಆಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ. ತಲತಲಾಂತರಗಳಿಂದ ರೈತರು ಹಾಗೂ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವೈದಿಕ ಧರ್ಮ ವಂಚಿಸುತ್ತಲೇ ಬಂದಿದೆ ಎಂದು ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮುಂಭಾಗದಲ್ಲಿ ಶುಕ್ರವಾರದಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆ ವತಿಯಿಂದ ಕಂದಾಯ ಇಲಾಖೆ ಸಾಗುವಾಳಿ ಪತ್ರ ವಿಲೇವಾರಿ ಮಾಡಿರುವ ಬಗ್ಗೆ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರ ಮತ್ತು ತಾಲೂಕು ಆಡಳಿತ ವಿರುದ್ಧ ವಿವಿಧ ಘೋಷಣೆ ಕೂಗಿ ಅವರು ಮಾತನಾಡಿದರು.
ಸ್ವಾತಂತ್ರ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಂದೋಲನದಿಂದಾಗಿ ದಲಿತ ಮತ್ತು ಧಮನಿತರಲ್ಲಿ ಬೆಳೆಯುತ್ತಿರುವ ಸಾಮಾಜಿಕ ಮತ್ತು ವರ್ಗ ಪ್ರಜ್ಞೆಯಿಂದ ಬ್ರಾಹ್ಮಣಶಾಹಿ ಮತ್ತು ಬಂಡವಾಳ ಶಾಹಿಗೆ ನುಂಗಲಾರದ ತುತ್ತಾಗಿದೆ. ಕಳೆದ ನಾಲ್ಕು ದಶಕಗಳಿಂದ ಬಾಬಾ ಸಾಹೇಬರ ಸೈದ್ಧಾಂತಿಕ ನೆಲೆಯಲ್ಲಿ ದಲಿತ ಚಳುವಳಿ ಭೂಮಿ ಶಿಕ್ಷಣ ಉದ್ಯೋಗ ಮುಂತಾದ ಮನುಷ್ಯನ ಮೂಲಭೂತ ಅವಶ್ಯಕತೆಗಾಗಿ ಆಳುವ ವರ್ಗಗಳೊಂದಿಗೆ ನಿರಂತರವಾಗಿ ಸಂಘರ್ಷ ನಡೆಸುತ್ತಲೇ ಬಂದಿದೆ, ಈಡೇರಿಸುವಂತೆ ಒತ್ತಾಯಿಸುತ್ತೇವೆ. ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸುತ್ತೇವೆ ಎಂದರು.
ಕರ್ನಾಟಕ ಭೀಮ ಸೇನೆ ತಾಲೂಕು ಅಧ್ಯಕ್ಷ ಹೂವಿನಕೊಳ ಮಹೇಂದ್ರ ಮಾತನಾಡಿ, ದೂರದೃಷ್ಟಿಯ ಫಲವಾಗಿ ಪಿ ಟಿ ಸಿ ಎಲ್ ಕಾಯ್ದೆ ಜಾರಿಗೆ ಬಂದಿದ್ದರೂ ಜಾತಿವಾದಿಗಳು ಮತ್ತೆ ಅಧಿಕಾರಶಾಹಿಗಳ ಮಸಲತ್ತಿನಿಂದ ಹಾಗೂ ಸರ್ಕಾರಗಳ ಕುತಂತ್ರದಿಂದ ಪಿ ಟಿ ಎಲ್ ಜಮೀನುಗಳ ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋರ್ಟ್ ಗಳಿವ ಅಲೆಯುತ್ತಾ ವಂಚನೆಗೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ರೈತರನ್ನು ಕಂದಾಯ ಅಧಿಕಾರಿಗಳು ಅಲೆದಾಡುಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಂದೀಶ್ವರಸ್ವಾಮಿ ಮಾತನಾಡಿ, ಇಂದಿಗೂ ಸಹ ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ಕೇವಲ 11% ದಲಿತರ–ಮಾತ್ರ ಭೂಮಿಯ ಹಕ್ಕುಳ್ಳವರಾಗಿದ್ದಾರೆ. ಸರ್ಕಾರ ದರಖಾಸ್ತು ಭೂಮಿ ಸಕ್ರಮೀಕರಣದ ಸಮಿತಿಗೆ ಆಯಾ ಕ್ಷೇತ್ರದ ಶಾಸಕರುಗಳನ್ನು ಅಧ್ಯಕ್ಷರುಗಳನ್ನಾಗಿ ನೇಮಿಸಿರುವ ಕೆಲವು ಸಮಿತಿಗಳು ತುಂಬಾ ನಿರ್ಲಕ್ಷತೆಯಿಂದ ಸರಿಯಾಗಿ ಸಭೆಗಳನ್ನು ಮಾಡದೆ ಪಾರಂ 50, 53, 57 ರಲ್ಲಿ ಸಲ್ಲಿಸಿರುವ ದಲಿತ ಮತ್ತು ತಳ ಸಮುದಾಯಗಳ ಅರ್ಜಿಗಳು ಕೊಳೆಯುತ್ತಾ ಬಿದ್ದಿವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಗ್ರೇಟ್ 2 ತಹಶೀಲ್ದಾರ್ ಪರಶಿವಮೂರ್ತಿ ರವರಿಗೆ ಮನವಿ ಪತ್ರ ಸಲ್ಲಿಸಿದರು.ನಂತರ ಮನವಿ ಸ್ವೀಕರಿಸಿ ಮಾತನಾಡಿದ ಈ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದ್ದು ಎಂದು ತಿಳಿಸಿದರು. ಕರ್ನಾಟಕ ಭೀಮಾ ಸೇನೆ ತಾಲೂಕು ಅಧ್ಯಕ್ಷ ಹೂವಿನಕೊಳ ಮಹೇಂದ್ರ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕರು ಮಹದೇವಸ್ವಾಮಿಕೂಲ್ಯ, ಮಣಿಕಂಠ ಮಟದಕಟ್ಟೆ, ನಾಗೇಂದ್ರ ಮೊಳೆಯೂರು ಕಾವಲ್, ಕೃಷ್ಣ ಕುರ್ಣಿಗಾಲ, ತಾಲೂಕು ಸಮಿತಿ ಸದಸ್ಯರು ಶಿವರಾಜು, ಚಂಗೌಡನಹಳ್ಳಿ, ಮಹದೇವಕಾಡ ಬೇಗೂರು, ಮಂಜು ಕೆ. ಬೆಳತ್ತೂರು, ಕೆಂಪರಾಜು, ಸರ್ಕಲ್ ಶಿವರುದ್ರಸರಗೂರು, ವೆಂಕಟರಾಮುಶಿವಪರ, ರೈತ ಸಂಘದ ಯುವ ಘಟಕದ ಅಧ್ಯಕ್ಷ ನವೀನ್, ಇನ್ನೂ ಮುಖಂಡರು ನಡಾಡಿ ರಾಣಿ, ರತ್ನಿ, ಸ್ವಪ್ನ, ರತ್ನಮ್ಮ, ಕೇಬ್ಬೆಪುರ, ಸೀರಮ್ಮ, ಪಾರ್ವತಿ ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC