ಸರಗೂರು: ತಾ.ಪಂ. ಮತ್ತು ಜಿ.ಪಂ. ಚುನಾವಣೆ ನಡೆಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಸರಗೂರು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ ಆರೋಪಿಸಿದ್ದಾರೆ.
ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು ಕೆಲಸಕಾರ್ಯಗಳು ಕುಂಠಿತವಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡುವಂತಾಗಿದೆ ಎಂದು ಅವರು ಹೇಳಿದರು.
ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ, ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆ ಇದುವರೆಗೂ ಸರ್ಕಾರ ನಡೆಸದೇ ಇರುವುದು, ಸುಮಾರು ಐದು ವರ್ಷಗಳಿಂದಲೂ ಕಳೆದ ಬಿಜೆಪಿ ಸರ್ಕಾರದ ಆಡಳಿತದ ಎರಡು ಅವಧಿಯಲ್ಲೂ ಮತ್ತು ಈಗಿನ ಸರ್ಕಾರ ಈ ಚುನಾವಣೆಗಳನ್ನು ನಡೆಸುವಲ್ಲಿ ನಿರ್ಲಕ್ಷ್ಯ ತೋರುತ್ತಾ ಬಂದಿದೆ. ಇನ್ನು ಮುಂದಿನ ಅಭಿವೃದ್ದಿಯತ್ತ ಕೊಂಡೊಯ್ಯುವ ನಿರೀಕ್ಷೆಗಳೇ ಹುಸಿಯಾಗತೊಡಗಿದೆ ಎಂದು ಅವರು ಆರೋಪಿಸಿದರು.
ಹಿಂದೆ ಈ ಚುನಾವಣೆಗಳನ್ನು ನಡೆಸುವ ಬಗ್ಗೆ ಚುನಾವಣಾ ಆಯೋಗವು ಹೈಕೋರ್ಟಿಗೆ ತನ್ನ ನಿಲುವಿನ ಪ್ರಸ್ತಾವನೆಯನ್ನು ಸಲ್ಲಿಸಿತು. ಅದರಂತೆ ಹೈಕೋರ್ಟ್ ಚುನಾವಣೆಗಳನ್ನು ನಡೆಸುವ ಬಗ್ಗೆ ತನ್ನ ಸೃಷ್ಟಿಕರಣ ನೀಡಲು ಕಳೆದ ಜುಲೈ ತಿಂಗಳ 11ನೇ ದಿನಾಂಕದ ಗಡುವನ್ನು ತಿರಸ್ಕರಿಸಿದಂತೆಯೇ ತೋರುತ್ತಿದೆ. ಈ ನಡುವೆ ಸರ್ಕಾರ ಉದ್ದೇಶಿಸಿತವಾಗಿ ಮುಂಬರುವ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಯನ್ನು ಮಾತ್ರ ನಡೆಸುವಲ್ಲಿ ಸನ್ನದ್ದವಾಗುತ್ತಿರುವುದು ಎದ್ದು ಕಾಣುತ್ತಿರುವುದರಿಂದ ಇನ್ನೂ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಗಳು ನೆನೆಗುದಿಗೆ ಬಿದ್ದಂತಾಗಿದೆ. ಈ ಸರ್ಕಾರಕ್ಕೆ ಅಧಿಕ ಶಾಸಕರ ಗೆಲುವಿಗೆ ಕುರಣಕರ್ತರಾದ ಜನ ಸಾಮಾನ್ಯರಿಗೆ ಉತ್ತಮ ಆಡಳಿತ ಕೊಡುವ ಭರವಸೆ ಕ್ಷೀಣಿಸದೆ ಹುಸಿಯಾಗಬಾರದು ಎನ್ನುವುದಾದರೆ ಮೊದಲೇ ನಡೆಸಬೇಕಿದ್ದ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವಲ್ಲಿ ಇನ್ನಾದರೂ ಹೆಚ್ಚಿದ್ದುಕೊಂಡು ಯಶಸ್ವಿಯಾಗಲಿ ಒಂದು ವೇಳೆ ಈ ಚುನಾವಣೆಗಳನ್ನು ನಡೆಸಲು ವಿಳಂಬ ಮಾಡಿ ಹಾಗೂ ಇದಕ್ಕೂ ಮೊದಲು ವಿಧಾನಸಭಾ ನಡೆಸಲು ಮುಂದಾದಲ್ಲಿ, ಈ ಚುನಾವಣೆ ನಡೆಸದೇ ಇರುವ ಬಗ್ಗೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಅನುಮತಿ ಕೊಡಬಾರದೆಂದು ಸರಗೂರು ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಸಂಚಾಲಕರಾದ ಸರಗೂರು ಕೃಷ್ಣ ರವರು ಕರ್ನಾಟಕ ಚುನಾವಣಾ ಆಯೋಗಕ್ಕೆ ಆಗ್ರಹಿಸಿರುತ್ತಾರೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC